ಮೈಸೂರು, ಮೇ 30(ಆರ್‍ಕೆ)- ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾದ್ಯಂತ ಕಳೆದ 10 ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶದ 70 ಮಂದಿ ಸಿಡಿಲಬ್ಬರಕ್ಕೆ ದುರಂತ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವ ಹಣಾ ಕೇಂದ್ರದ ಅಧ್ಯಯನ ವರದಿ ತಿಳಿಸಿದೆ.
ಕೇಂದ್ರವು ಈ ಕುರಿತು ನಡೆಸಿರುವ ಅಧ್ಯಯನದಲ್ಲಿ 2011ರಿಂದ 2021ರವರೆಗೆ ಮೈಸೂರು ಜಿಲ್ಲೆಯ 32 ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದರೆ, ಚಾಮ ರಾಜನಗರದಲ್ಲಿ 27 ಹಾಗೂ ಮಂಡ್ಯ ಜಿಲ್ಲೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 2015ರಲ್ಲಿ 15 ಮಂದಿ ಮೈಸೂರು ಜಿಲ್ಲೆಯಲ್ಲಿ ಸಿಡಿಲಿಗೆ ಬಲಿಯಾಗಿದ್ದು, 2019ರಲ್ಲಿ 8 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
ಆದರೆ ನೆರೆ ಹಾವಳಿ, ಭೂ ಕುಸಿತದಿಂದ ಸಾವು-ನೋವುಗಳಾಗಿದ್ದ ಕೊಡಗು ಜಿಲ್ಲೆಯಲ್ಲಿ ಸಿಡಿಲಿನಿಂ ದಾಗಿ ಕಳೆದ 10 ವರ್ಷಗಳಲ್ಲಿ ಯಾವುದೇ ಸಾವು ಸಂಭ ವಿಸಿಲ್ಲ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಿಡಿಲಿ ನಿಂದಾಗಿ ಅಪಾರ ಜೀವಹಾನಿಯಾಗಿರುವುದು ಅಧ್ಯಯನ ದಿಂದ ತಿಳಿದುಬಂದಿದೆ. 2018ರ ಜೂನ್‍ನಿಂದ 2021ರ ಡಿಸೆಂಬರ್ ಮಾಹೆವರೆಗೆ ಮೈಸೂರು ಜಿಲ್ಲೆಯಲ್ಲಿ 13,437, ಮಂಡ್ಯದಲ್ಲಿ 14,138 ಹಾಗೂ ಚಾಮರಾಜನಗರ ಜಿಲ್ಲೆ ಯಲ್ಲಿ 8,635 ಸಿಡಿಲು ಬಡಿದ ಘಟನೆಗಳು ದಾಖಲಾಗಿ ರುವುದು ಸಿಡಿಲು ಸೆನ್ಸಾರ್ ಸ್ಟೇಷನ್‍ಗಳಿಂದ ಪತ್ತೆಯಾ ಗಿದೆ. ಅದೇ ರೀತಿ ಹಾಸನದಲ್ಲಿ 16,264, ಚಿಕ್ಕಮಗ ಳೂರಿನಲ್ಲಿ 16,994 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 14,866 ಸಿಡಿಲಿನ ಅನಾಹುತ ಸಂಭವಿಸಿದ್ದು, ಕೊಡಗಿ ನಲ್ಲಿ ಮಾತ್ರ 6,303 ಸಿಡಿಲು ಪ್ರಕರಣಗಳು ಸಂಭವಿ ಸಿವೆ ಎಂದು ವರದಿಯಿಂದ ತಿಳಿದುಬಂದಿದೆ.
ಅರಣ್ಯ ಪ್ರದೇಶ ಮತ್ತು ಅತೀ ಎತ್ತರದ ಮರಗಳಿ ರುವ ಭಾಗಗಳಲ್ಲಿ ಹೆಚ್ಚಾಗಿ ಇಂತಹ ಘಟನೆ ಸಂಭವಿ ಸಿದ್ದು, ಗ್ರಾಮಾಂತರ ಪ್ರದೇಶ ಮತ್ತು ಹೊರಗಡೆ ಜಮೀನು ಗಳಲ್ಲಿ ಕೆಲಸ ಮಾಡುತ್ತಿದ್ದವರು ಸಿಡಿಲಿಗೆ ಬಲಿಯಾಗಿ ರುವುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಇಂತಹ ಪ್ರಕೃತಿ ವಿಕೋಪಗಳ ಹಿನ್ನೆಲೆಯಲ್ಲಿ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮ-ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದೆಂಬುದರ ಬಗ್ಗೆ ನಿರ್ವ ಹಣಾ ಕೇಂದ್ರವು ಎಲ್ಲಾ ಜಿಲ್ಲೆಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ದುರಂತ ದಿಂದ ಪಾರಾಗಲು ಸಲಹೆ ನೀಡುವಂತೆಯೂ ಸೂಚಿಸಿದೆ.