ನಾಳೆ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ: ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‍ರಿಂದ ಧ್ವಜಾರೋಹಣ
ಮೈಸೂರು

ನಾಳೆ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ: ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‍ರಿಂದ ಧ್ವಜಾರೋಹಣ

August 14, 2020

ಮೈಸೂರು, ಆ.13- ಮೈಸೂರು ಜಿಲ್ಲಾ ಡಳಿತದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ 74ನೇ ಸ್ವಾತಂ ತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸ ಲಾಗುವುದು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಧ್ವಜಾರೋಹಣ ನೆರವೇ ರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡುವರು.

ಮುಖ್ಯ ಅತಿಥಿಗಳಾಗಿ ಮೈಸೂರು ಮಹಾ ನಗರ ಪಾಲಿಕೆಯ ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸಂಸದ ರಾದ ಪ್ರತಾಪ ಸಿಂಹ, ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸುಮಲತಾ ಅಂಬ ರೀಷ್ ಉಪಸ್ಥಿತರಿರುವರು. ಸಮಾರಂಭದ ಅತಿಥಿಗಳಾಗಿ ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಸಾ.ರಾ.ಮಹೇಶ್, ಎಲ್.ನಾಗೇಂದ್ರ, ಡಾ. ಯತೀಂದ್ರ ಸಿದ್ದರಾಮಯ್ಯ, ಹೆಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಬಿ.ಹರ್ಷವರ್ಧನ್, ಕೆ.ಮಹದೇವ್, ವಿಧಾನಪರಿಷತ್ ಸದಸ್ಯ ರಾದ ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್.ಧರ್ಮಸೇನ, ಕೆ.ವಿ.ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇ ಗೌಡ, ಮೈಸೂರು ಮಹಾನಗರ ಪಾಲಿಕೆ ಉಪಮೇಯರ್ ಸಿ.ಶ್ರೀಧರ್, ಜಿಪಂ ಉಪಾ ಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾ ಧ್ಯಕ್ಷ ಎನ್.ಬಿ.ಮಂಜು ಭಾಗವಹಿಸುವರು. ಸಮಾರಂಭದಲ್ಲಿ ಪಥಸಂಚಲನ ಹಾಗೂ ಸ್ವಾತಂತ್ರ್ಯೋತ್ಸವದÀ ಅಂಗವಾಗಿ ತ್ರಿವರ್ಣ ಬಲೂನುಗಳನ್ನು ಹಾರಿಬಿಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿ ಯೊಬ್ಬರೂ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಿದೆ.

ಪೊಲೀಸರ ತಾಲೀಮು: ಈ ಹಿನ್ನೆಲೆ ಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ತಾಲೀಮಿನಲ್ಲಿ ನಗರ ಸಿವಿಲ್ ಪೊಲೀಸ್, ಮಹಿಳಾ ಠಾಣೆ ಸಿಬ್ಬಂದಿ, ಕೆಎಸ್‍ಆರ್‍ಪಿ, ಸಿಎಆರ್, ಡಿಎಆರ್, ಮೌಂಟೆಡ್ ಪೊಲೀಸ್ ತುಕಡಿಗಳು, ಎನ್‍ಸಿಸಿ, ಹೋಂ ಗಾರ್ಡ್ ತಂಡಗಳು ಭಾಗವಹಿಸಿ ಕವಾ ಯಿತು ವಂದನೆ ಸಲ್ಲಿಸಿದವು.

ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್ ಗೌಡ, ಗೀತಾ ಪ್ರಸನ್ನ, ಚನ್ನಯ್ಯ ಅವರು ತಾಲೀಮಿನಲ್ಲಿ ಭಾಗವಹಿಸಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಧ್ವಜವಂದನೆ ಸ್ವೀಕರಿಸುವ ಬಗ್ಗೆ ತಯಾರಿ ನಡೆಸಲಾಗು ತ್ತಿದ್ದು, ಈ ಬಾರಿ ಶಾಲಾ-ಕಾಲೇಜು ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ರದ್ದುಗೊಳಿಸ ಲಾಗಿದ್ದು, ನಿಯಮಿತ ಆಹ್ವಾನಿತರೊಂ ದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊರೊನಾ ವಾರಿಯರ್ಸ್: ಕೋವಿಡ್-19 ನಿರ್ವಹಣೆಯಲ್ಲಿ ಮುಂಚೂಣಿ ಕರ್ತವ್ಯ ನಿರ್ವಹಿಸುತ್ತಿರುವ ವಾರಿಯರ್ಸ್‍ಗಳಾದ ವೈದ್ಯರು, ನರ್ಸ್‍ಗಳು, ಪೊಲೀಸರು, ಆಶಾ ನರ್ಸ್‍ಗಳು, ಪೊಲೀಸರು, ಅಶಾ ಕಾರ್ಯ ಕರ್ತರು, ಪೌರಕಾರ್ಮಿಕರು, ಸರ್ಕಾರಿ ಅಧಿಕಾರಿ ಗಳನ್ನು ಸಮಾರಂಭಕ್ಕೆ ಆಹ್ವಾನಿಸಿ ಸ್ವಾತಂ ತ್ರ್ಯೋತ್ಸವದಂದು ಗೌರವಿಸಬೇಕೆಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಕಡ್ಡಾಯ ಹಾಜರಿ: ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯ ವಾಗಿ ಹಾಜರಾಗಬೇಕೆಂದು ಡಿಸಿ ಅಭಿ ರಾಮ್ ಜಿ.ಶಂಕರ್ ಸುತ್ತೋಲೆ ಹೊರಡಿಸಿ ನಿರ್ದೇಶನ ನೀಡಿದ್ದಾರೆ. ನಾಳೆ(ಆ.14)ಯೂ ಪಂಚಿನ ಕವಾಯಿತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಕವಾಯತು ತಾಲೀಮು ನಡೆಯಲಿದೆ. ಕಾರ್ಯಕ್ರಮಕ್ಕೆ ಆ.15ರಂದು ಎನ್.ಆರ್ ಠಾಣೆ ಇನ್‍ಸ್ಪೆಕ್ಟರ್ ಶೇಖರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

Translate »