ತಲೆ ತಲಾಂತರದಿಂದ ನೆಮ್ಮದಿ ನೆಲೆಯಾಗಿದ್ದ ಮನೆ ಕರಕಲಾಗಿರುವುದ ಕಂಡು ಕಣ್ಣೀರಿಟ್ಟ `ಅಖಂಡ’ ಕುಟುಂಬ
ಮೈಸೂರು

ತಲೆ ತಲಾಂತರದಿಂದ ನೆಮ್ಮದಿ ನೆಲೆಯಾಗಿದ್ದ ಮನೆ ಕರಕಲಾಗಿರುವುದ ಕಂಡು ಕಣ್ಣೀರಿಟ್ಟ `ಅಖಂಡ’ ಕುಟುಂಬ

August 14, 2020

ಬೆಂಗಳೂರು, ಆ.13-ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಕುಟುಂಬದವರು ಸುಟ್ಟು ಕರಕಲಾಗಿರುವ ತಮ್ಮ ಮನೆಗೆ ಮರಳಿ, ತಲೆ ತಲಾಂತರಗಳಿಂದ ನೆಮ್ಮದಿ ನೆಲೆಯಾ ಗಿದ್ದ ನೆಚ್ಚಿನ ನಿವಾಸದ ಸ್ಥಿತಿ ಕಂಡು ಭಾವುಕ ರಾಗಿ ಕಣ್ಣೀರು ಸುರಿಸಿದರು. ಮನೆಯಲ್ಲಿದ್ದ ಪೀಠೋಪಕರಣಗಳೂ ಸೇರಿದಂತೆ ಗೃಹೋ ಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗು ತ್ತಿರುವುದನ್ನು ಕಂಡು ಶ್ರೀನಿವಾಸಮೂರ್ತಿ ಯವರ ಪತ್ನಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿತು.

ತಮ್ಮ ಕುಟುಂಬದವರು ದಿನ ನಿತ್ಯ ಪೂಜಿ ಸುತ್ತಿದ್ದ ದೇವಿಯ ಮುಖವಾಡ ನಾಪತ್ತೆ ಯಾಗಿರುವುದನ್ನು ಕಂಡು ಮಗಳು ಸೋನಿ ಕಣ್ಣೀರಿಟ್ಟಳು. ನಮ್ಮ ಮನೆಯಲ್ಲಿ ಯಾವುದೇ ಕೆಲಸಕ್ಕೆ ಹೋಗಬೇಕಾದರೂ ದೇವಿ ಮುಖ ವಾಡಕ್ಕೆ ಪೂಜೆ ಸಲ್ಲಿಸಿಯೇ ಹೋಗುತ್ತಿ ದ್ದೆವು. ಅದು ಈಗ ಇಲ್ಲ. 4 ತಲೆಮಾರಿ ನಿಂದ ಒಗ್ಗಟ್ಟಾಗಿ ನಮ್ಮ ಕುಟುಂಬ ಬದು ಕಿದ ಮನೆ ಇದು ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಮನೆಯಲ್ಲಿ ಅಖಂಡ ಶ್ರೀನಿ ವಾಸಮೂರ್ತಿಯವರ ಪತ್ನಿಯ ತಾಳಿ ದೊರೆತದ್ದು ಕುಟುಂಬಸ್ಥರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದುಕೊಟ್ಟಿತು. ಆದರೆ ಆ ತಾಳಿಯೂ ಕೂಡ ಸ್ವಲ್ಪ ಸುಟ್ಟು ಕರಕಲಾಗಿತ್ತು.

ಈ ವೇಳೆ ಸ್ಥಳೀಯರು ಆಗಮಿಸಿ ಅಖಂಡ ಶ್ರೀನಿವಾಸಮೂರ್ತಿಯವರ ಬಳಿ ತಮ್ಮ ಕಷ್ಟಗಳನ್ನು ತೋಡಿಕೊಂಡರು. ಸ್ವಲ್ಪ ಸಮಯ ಮಾತೇ ಹೊರಡದೇ ಮೌನವಾಗಿದ್ದ ಶ್ರೀನಿ ವಾಸಮೂರ್ತಿ, ನಂತರ `ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ’ ಎಂದಾಗ ನಿವಾಸಿಗಳು `ನೀವು ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಗಲಾಟೆ ಮಾಡಿದವರು ಗಾಂಜಾ ಸೇವಿಸಿಕೊಂಡು ಬಂದಿದ್ದರು. ಬೈಕ್ ನಲ್ಲಿ ಕೂತು ಹಣ ಹಂಚಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈಗ ನೀವೇ ನಿಂತು ಸಮಸ್ಯೆಯನ್ನು ಬಗೆಹರಿಸಿ’ ಎಂದು ಮನವಿ ಮಾಡಿದರು. ಶಾಸಕರ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಲಾ ರಂಭಿಸಿದಾಗ ಪೊಲೀಸರು ಅವರನ್ನು ಚದು ರಿಸಿದರು. ನಂತರ ಬಿಬಿಎಂಪಿ ಅಧಿಕಾರಿ ಗಳು ಮನೆಯನ್ನು ಸೀಲ್ ಮಾಡಿದರು.

Translate »