ಮೈಸೂರು, ಮೇ 3(ಎಂಟಿವೈ)- ಗ್ರೀನ್ ಜೋóóನ್‍ನತ್ತ ದಾಪುಗಾಲು ಇಡುತ್ತಿರುವ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಭೀತಿ ತೆರೆಮರೆಗೆ ಸರಿಯು ತ್ತಿದ್ದು, ಭಾನುವಾರವೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಆದರೆ 8 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಆ್ಯಕ್ಟೀವ್ ಕೇಸ್ 13ಕ್ಕೆ ಕುಸಿತ ವಾಗಿರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತಂದಿತ್ತಿದೆ.
ಕಳೆದ 4 ದಿನದಿಂದಲೂ ಮೈಸೂರಲ್ಲಿ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗದೆ ಇರುವುದು ಕೊರೊನಾ ಆತಂಕ ನಿವಾರಣೆಯಾದಂತೆ ಕಂಡುಬರುತ್ತಿದೆ. ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ(ಪಿ-265, ಪಿ-344, ಪಿ-375, ಪಿ-388, ಪಿ-416, ಪಿ-417, ಪಿ-426, ಪಿ-427) ಗುಣಮುಖರಾಗಿ ಬಿಡುಗಡೆಯಾದರು. ಇದರಿಂದ ಗುಣ ಮುಖರಾಗಿ ಬಿಡುಗಡೆಯಾದವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಇದುವರೆಗೂ 90 ಸೋಂಕಿತರು ಪತ್ತೆಯಾಗಿದ್ದರು. ಪ್ರಸ್ತುತ 13 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರ ಸಂಖ್ಯೆಯಲ್ಲಿದ್ದ ಕ್ವಾರಂಟೈನ್ ನಲ್ಲಿದ್ದವರ ಸಂಖ್ಯೆ ಇದೀಗ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಕೇವಲ 93 ಮಂದಿ ಮಾತ್ರ ಕ್ವಾರಂಟೈನ್‍ನಲ್ಲಿದ್ದಾರೆ. ಇದುವರೆಗೂ 4762 ಮಂದಿ ಮೇಲೆ ನಿಗಾ ಇಡಲಾಗಿತ್ತು. 4656 ಮಂದಿ ಕ್ವಾರಂಟೈನ್ ಮುಗಿಸಿದ್ದಾರೆ. 4435 ಮಂದಿಯ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. 4345 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, 90 ಸ್ಯಾಂಪಲ್ ಪಾಸಿಟಿವ್ ಆಗಿತ್ತು. ಪ್ರಸ್ತುತ ಕ್ವಾರಂಟೈನ್‍ನಲ್ಲಿರುವ 93 ಮಂದಿಯ ಸ್ವ್ಯಾಬ್ ಟೆಸ್ಟ್ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಕೆ.ಆರ್.ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ ದಲ್ಲಿ ಮೂರು ಪಾಳಿಯಲ್ಲಿ ದಿನಕ್ಕೆ 300 ರಿಂದ 350 ಸ್ವ್ಯಾಬ್ ಟೆಸ್ಟ್ ನಡೆಯುತ್ತಿದ್ದು, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಿಂದಲೂ ಸ್ವ್ಯಾಬ್ ಟೆಸ್ಟ್ ಸ್ಯಾಂಪಲ್ ತರಲಾಗುತ್ತಿದೆ.