ಲಾಕ್‍ಡೌನ್: ಇಂದು ಪ್ರಧಾನಿ ಮೋದಿ ಭಾಷಣ
ಮೈಸೂರು

ಲಾಕ್‍ಡೌನ್: ಇಂದು ಪ್ರಧಾನಿ ಮೋದಿ ಭಾಷಣ

May 4, 2020

ನವದೆಹಲಿ,ಮೇ3-ದೇಶಾದ್ಯಂತ 2ನೇ ಹಂತದ ಲಾಕ್‍ಡೌನ್ ಇಂದಿಗೆ ಮುಕ್ತಾಯ ವಾಗಲಿದೆ. 3ನೇ ಹಂತದ ಲಾಕ್‍ಡೌನ್ ನಾಳೆಯಿಂದ ಆರಂಭವಾಗಲಿದ್ದು, ಈ ಕುರಿತು ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭಾಷಣ ಮಾಡಲಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ

ಹಿನ್ನೆಲೆಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು ಕೊರೊನಾ ಕುರಿತಾದ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡುತ್ತಿರುವ ಮೂರನೇ ಭಾಷಣ ಇದಾಗಿದೆ. ಮೇ 4ರಿಂದ ದೇಶದಲ್ಲಿ ಲಾಕ್‍ಡೌನ್ ವಿಸ್ತರಣೆಯಾಗಲಿದೆ. ಈ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ಭಿನ್ನವಾಗಿವೆ. ಕೇಂದ್ರದ ಮಾರ್ಗಸೂಚಿಯೂ ಹಸಿರು ವಲಯದ ಪ್ರದೇಶದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಆರೇಂಜ್ ಜೋನ್‍ನ ಪ್ರದೇಶದಲ್ಲಿ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್‍ಗಳಲ್ಲಿ ಕಠಿಣ ನಿಯಮಗಳು ಮುಂದುವರೆಯಲಿವೆ.

Translate »