`ಆಶ್ರಯ’ ಸಿಗದೇ 80 ಕುಟುಂಬಗಳಿಗೆ ಗುಡಿಸಲೇ ಗತಿ!
ಮೈಸೂರು

`ಆಶ್ರಯ’ ಸಿಗದೇ 80 ಕುಟುಂಬಗಳಿಗೆ ಗುಡಿಸಲೇ ಗತಿ!

August 3, 2020

ಮೈಸೂರು, ಆ.2(ಎಂಕೆ)- ಮೈಸೂರು ಕೆಸರೆ ಬಳಿಯ ಕುರಿಮಂಡಿ ಪಾರ್ಕ್‍ನಲ್ಲಿ 80ಕ್ಕೂ ಹೆಚ್ಚು ಗುಡಿಸಲುಗಳಲ್ಲಿ ವಾಸ ವಿರುವ ಬಡಕುಟುಂಬದವರು, `ಸ್ವಂತ ಮನೆ’ಗಾಗಿ ಒತ್ತಾಯಿಸಿ ತಮ್ಮ ವಾಸಸ್ಥಳದ ಬಳಿಯೇ ದಲಿತ ಸಂಘರ್ಷ ಸಮಿತಿ ಜತೆ ಗೂಡಿ ಭಾನುವಾರ ಪ್ರತಿಭಟನೆ ನಡೆಸಿದರು.

ಹಲವಾರು ವರ್ಷಗಳಿಂದ ಗುಡಿಸಲಿ ನಲ್ಲಿಯೇ ವಾಸ ಮಾಡುತ್ತಿದ್ದೇವೆ. ಯಾವುದೇ ಮೂಲಸೌಕರ್ಯಗಳೂ ದೊರೆತಿಲ್ಲ. ಮನೆ ಮುಂದೆ ಉತ್ತಮ ರಸ್ತೆ ಇಲ್ಲ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಪಾರ್ಕಿನಲ್ಲಿ ಗುಡಿ ಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಈವರೆಗೆ ಯಾವುದೇ ಸರ್ಕಾರಿ ಅಧಿಕಾರಿ, ಸ್ಥಳೀಯ ಜನಪ್ರತಿನಿಧಿ ಬಂದು ನಮ್ಮ ಅಹವಾಲು ಆಲಿಸಿಲ್ಲ, ಕಷ್ಟಕ್ಕೆ ನೆರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆ ಬಂದರೆ ಪಕ್ಕದಲ್ಲಿ ಹರಿಯುವ ಕಾಲುವೆ ಕೊಳಚೆ ನೀರು ಮನೆಗೆ ನುಗ್ಗು ತ್ತದೆ. ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು. ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಸಂಚಾಲಕ ಕೆ. ನಂಜಪ್ಪ ಬಸವನಗುಡಿ ಮತ್ತಿತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು

Translate »