ವಿಶೇಷ ರೈಲುಗಳಲ್ಲಿ 80 ಸಾವಿರ ಟಿಕೆಟ್ ಬುಕ್ಕಿಂಗ್: 16 ಕೋಟಿ ರೂ. ಹಣ ಸಂಗ್ರಹ
ಮೈಸೂರು

ವಿಶೇಷ ರೈಲುಗಳಲ್ಲಿ 80 ಸಾವಿರ ಟಿಕೆಟ್ ಬುಕ್ಕಿಂಗ್: 16 ಕೋಟಿ ರೂ. ಹಣ ಸಂಗ್ರಹ

May 13, 2020

ನವದೆಹಲಿ, ಮೇ 12- ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಪ್ರಯಾಣಿಕರ ರೈಲ್ವೆ ಟಿಕೆಟ್‍ಗಳು ಬುಕ್ ಆಗಿದ್ದು ಅದಕ್ಕಾಗಿ 16 ಕೋಟಿ ಹಣ ಸಂಗ್ರಹ ವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಂಗಳವಾರದಿಂದ ರೈಲು ಸಂಚಾರ ಆರಂಭಗೊಂಡಿದ್ದು, ನವದೆಹಲಿಯಿಂದ ಮಧ್ಯಪ್ರದೇಶದ ಬಿಸ್ಲಾಪುರಕ್ಕೆ ರೈಲು ಸಂಚ ರಿಸಲಿದೆ. ವಿಶೇಷ ರೈಲುಗಳ ಬುಕಿಂಗ್ ಸೋಮವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ. ಮುಂದಿನ ಏಳು ದಿನಗಳವರೆಗೆ ವಿಶೇಷ ರೈಲುಗಳಿಗಾಗಿ ಇದುವರೆಗೆ 16.15 ಕೋಟಿ ರೂ.ಗಳ 45,533 ಬುಕಿಂಗ್ ದಾಖಲಿಸಲಾಗಿದ್ದು, ಸುಮಾರು 82,317 ಪ್ರಯಾಣಿಕರು ಈ ಬುಕಿಂಗ್‍ನಲ್ಲಿ ಪ್ರಯಾಣಿಸಲಿದ್ದಾರೆ.

ರೈಲ್ವೆ ಇಲಾಖೆ ಸೋಮವಾರ 15 ವಿಶೇಷ ರೈಲುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಂಗಳವಾರದಿಂದ ಅನುಷ್ಠಾನಗೊಂಡಿದೆ ಪ್ರಯಾಣಿಕರಿಗೆ ತಮಗೆ ಬೇಕಾದ ಆಹಾರ ಕೊಂಡೊಯ್ಯು ವಂತೆ ಸೂಚಿಸಿದೆ. ಜೊತೆಗೆ ಆರೋಗ್ಯ ತಪಾಸಣೆಗಾಗಿ ರೈಲು ಹೊರಡುವ ಸುಮಾರು 90 ನಿಮಿಷಗಳ ಮೊದಲು ನಿಲ್ದಾಣಗಳಿಗೆ ಬರಬೇಕೆಂದು ಸೂಚಿಸಿದೆ. ಜೊತೆಗೆ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿ ಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದೆ.

Translate »