ಪಾಲಿಕೆಗೆ 81.72 ಕೋಟಿ ರೂ. ಆಸ್ತಿ ತೆರಿಗೆ ಪಾವತಿ
ಮೈಸೂರು

ಪಾಲಿಕೆಗೆ 81.72 ಕೋಟಿ ರೂ. ಆಸ್ತಿ ತೆರಿಗೆ ಪಾವತಿ

August 24, 2021

ಮೈಸೂರು, ಆ.23(ಆರ್‍ಕೆ)- ಆಗಸ್ಟ್ 22ರವರೆಗೆ ಮೈಸೂರು ಮಹಾನಗರ ಪಾಲಿಕೆಗೆ ಒಟ್ಟು 81,71,96,615 ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಇ-ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಹಾಗೂ ಶೇ.5 ರಷ್ಟು ರಿಯಾಯಿತಿ ನೀಡಿರುವ ಅವ ಕಾಶವನ್ನು ಬಳಸಿಕೊಂಡು ಆಸ್ತಿ ಮಾಲೀ ಕರು ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಮನೆ, ವಾಣಿಜ್ಯ ಮಳಿಗೆ ಹಾಗೂ ನಿವೇಶನಗಳ ಆಸ್ತಿ ತೆರಿಗೆಯನ್ನು ಸ್ವಯಂ ಪ್ರೇರಿತವಾಗಿ ಪಾವತಿಸುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಭಾರ ಉಪ ಆಯುಕ್ತ(ಕಂದಾಯ) ರಂಗಸ್ವಾಮಿ ತಿಳಿಸಿದ್ದಾರೆ.

2021ರ ಏಪ್ರಿಲ್ 1ರಿಂದ ಆಗಸ್ಟ್ 20ರವರೆಗೆ ಪಾಲಿಕೆಯ ಎಲ್ಲಾ 9 ವಲಯ ಕಚೇರಿ ವ್ಯಾಪ್ತಿಯ 96,570 ಪ್ರಕರಣಗಳಲ್ಲಿ ಒಟ್ಟು 81,41,44,794 ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಆಗಸ್ಟ್ 21 ಮತ್ತು 22 ರಂದು ಎರಡು ದಿನ ವಲಯ ಕಚೇರಿ-1ರಲ್ಲಿ 2,97,990 ರೂ., 2 ರಲ್ಲಿ 4,19,414 ರೂ., 3ರಲ್ಲಿ 5,44,340 ರೂ., 4ರಲ್ಲಿ 2,58,489, 5ರಲ್ಲಿ 1,86,827ರೂ., 6ರಲ್ಲಿ 3,57, 017 ರೂ., 7ರಲ್ಲಿ 1,93,456 ರೂ., 8ರಲ್ಲಿ 4,88,626 ರೂ. ಹಾಗೂ 9ರಲ್ಲಿ 3,05,662 ರೂ. ಸೇರಿ ಒಟ್ಟು 30,51,821 ರೂ. ತೆರಿಗೆ ಆನ್‍ಲೈನ್‍ನಲ್ಲಿ ಪಾಲಿಕೆ ಖಾತೆಗೆ ಜಮಾ ಆಗಿದ್ದು, ಆಗಸ್ಟ್ 22ರವರೆಗೆ ಒಟ್ಟು 81,71,96,615 ರೂ. ತೆರಿಗೆ ಸಂದಾಯ ವಾದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಸಲು ನಾಗರಿಕರು ಹಿಂದೇಟು ಹಾಕುತ್ತಿದ್ದರು. ಪಾಲಿಕೆ ವಲಯ ಕಚೇರಿಗೆ ತೆರಳಿ ಚಲನ್ ಬರೆಸಿಕೊಂಡು ಸಾಲಾಗಿ ನಿಂತು ಕೌಂಟರ್‍ನಲ್ಲಿ ಹಣ ಪಾವತಿಸಲು ನಿರಾಸಕ್ತಿ ತೋರುತ್ತಿದ್ದರು. ಆನ್‍ಲೈನ್‍ನಲ್ಲಿ ಪಾವತಿಸಲು ಅನುಕೂಲವಾಗುವಂತೆ ಇ-ಆಸ್ತಿ ತೆರಿಗೆ ವ್ಯವಸ್ಥೆ ಜೊತೆಗೆ ಶೇ.5ರಷ್ಟು ರಿಯಾಯಿತಿ ನೀಡಿರುವುದರಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಂದಿ ತೆರಿಗೆ ಪಾವತಿಸಲು ಮುಂದೆ ಬರುತ್ತಿದ್ದಾರೆ ಎಂದು ರಂಗಸ್ವಾಮಿ ತಿಳಿಸಿದ್ದಾರೆ.

Translate »