ಕುಳಿತಲ್ಲೇ ನಿಮ್ಮ ‘ಶ್ರವಣ’ ಸಮಸ್ಯೆ ಅರಿಯಿರಿ ಆಯಿಷ್‍ನಿಂದ ನೂತನ ಮೊಬೈಲ್ ಆ್ಯಪ್
ಮೈಸೂರು

ಕುಳಿತಲ್ಲೇ ನಿಮ್ಮ ‘ಶ್ರವಣ’ ಸಮಸ್ಯೆ ಅರಿಯಿರಿ ಆಯಿಷ್‍ನಿಂದ ನೂತನ ಮೊಬೈಲ್ ಆ್ಯಪ್

August 24, 2021

ಮೈಸೂರು, ಆ.23- ನಿಮ್ಮ ಕಿವಿ (ಶ್ರವಣ) ಸರಿಯಾಗಿ ಕೇಳುತ್ತಿದೆಯೇ, ಇಲ್ಲವೇ? ಎಂಬುದನ್ನು 5 ನಿಮಿಷದಲ್ಲಿ ಖಾತರಿಪಡಿಸಿಕೊಳ್ಳಿ… ಅದು ನಿಮ್ಮ ಮೊಬೈಲ್‍ನಲ್ಲೇ…!

ಹೌದು! ಪರಿಣಾಮಕಾರಿ ಸಂವ ಹನಕ್ಕೆ ಶ್ರವಣ ಒಂದು ಅವಶ್ಯ ಅಂಗ. ಶ್ರವಣದಲ್ಲಿ ಸಣ್ಣ ದೋಷವೂ ಪರಿಣಾಮ ಕಾರಿ ಸಂವಹನಕ್ಕೆ ಅಡ್ಡಿಯುಂಟು ಮಾಡು ತ್ತದೆ. ಕೆಲಸದ ಸ್ಥಳದಲ್ಲಿ, ಶೈಕ್ಷಣಿಕ ಸಾಧನೆ ಜೊತೆಗೆ ಭಾವನಾತ್ಮಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್)ಯು ‘ಆ್ಯಪ್’(ಆಯಿಷ್ ಹಿಯರಿಂಗ್ ಸ್ಕ್ರೀನಿಂಗ್ ಆ್ಯಪ್) ಮೂಲಕ ಸ್ವಯಂ ಪ್ರಾಥಮಿಕ ಶ್ರವಣ ಪರೀಕ್ಷೆ ಮಾಡಿಕೊಳ್ಳುವ ವಿನೂತನ ಮಾರ್ಗ ಕಂಡುಹಿಡಿದಿದೆ.

ಸರಳವಾದ ಪ್ರಶ್ನೆಗಳು, ಚಿತ್ರಗಳ ಮೂಲಕ ಕಿವಿ ಸರಿಯಾಗಿ ಕೇಳುತ್ತಿದೆಯೇ, ಇಲ್ಲವೇ? ಎಂಬುದನ್ನು ಕೇವಲ 5 ನಿಮಿಷದಲ್ಲಿ ಖಾತರಿಪಡಿಸಿಕೊಳ್ಳಬಹು ದಾಗಿದೆ. ಆಯಿಷ್‍ನ ಶ್ರವಣ ತಜ್ಞರಾದ ಡಾ.ಪಿ.ಮಂಜುಳಾ, ಡಾ.ಬಿ.ಜಿತಿನ್ ರಾಜ್, ಬಿ.ನಾಗರಾಜು ಮತ್ತು ಎಸ್. ಪ್ರಶಾಂತ್ ಅವರನ್ನೊಳಗೊಂಡ ತಂಡ ಆ್ಯಪ್ ಸಿದ್ಧಪಡಿಸಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾ ಗಲೇ ಸಿದ್ಧಪಡಿಸಿರುವ ಹಿಯರಿಂಗ್ ಸ್ಕ್ರೀನಿಂಗ್ ಆ್ಯಪ್ ಕೇವಲ ನಂಬರ್‍ಗಳಿಗೆ ಸೀಮಿತವಾಗಿ ಕೆಲಸ ಮಾಡಿದರೆ, ಆಯಿಷ್ ನಿಂದ ಅಭಿವೃದ್ಧಿಪಡಿಸಿರುವ ಆ್ಯಪ್, ಸರಳ ಪದಗಳು, ಚಿತ್ರಗಳ ಜೊತೆಗೆ ಶ್ರವಣ ದೋಷದ ಸೂಕ್ತ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ನೀಡಲಿದೆ.

ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯ: ಆಯಿಷ್‍ನ ಹಿಯರಿಂಗ್ ಸ್ಕ್ರೀನಿಂಗ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಡೌನ್‍ಲೋಡ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಆ.9ರಂದು ನಡೆದ ಆಯಿಷ್ 56ನೇ ವರ್ಷದ ವಾರ್ಷಿಕೋತ್ಸವದ ದಿನದಂದು ಆ್ಯಪ್‍ಗೆ ಚಾಲನೆ ನೀಡಲಾಗಿದೆ. ಗೂಗಲ್ ಪ್ಲೇ ಸ್ಟೋರ್‍ಗೆ ಅಪ್‍ಲೋಡ್ ಆದ ಎರಡೇ ದಿನದಲ್ಲಿ ಸಾವಿರಾರು ಮಂದಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ಆಯಿಷ್ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಮೂರು ಭಾಷೆ: ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಆ್ಯಪ್ ಕಾರ್ಯನಿರ್ವ ಹಿಸಲಿದೆ. ಇಂಗ್ಲಿಷ್ ಭಾಷೆಯಲ್ಲಿರುವುದ ರಿಂದ ಬೇರೆ ರಾಜ್ಯ, ದೇಶದವರು ಈ ಆ್ಯಪ್ ಬಳಕೆ ಮಾಡಬಹುದು. ಇಯರ್ ಫೋನ್ ಬಳಸಿ ಕೇವಲ 5 ನಿಮಿಷದಲ್ಲಿ ನಿಮ್ಮ ಕಿವಿ ಸರಿಯಾಗಿ ಕೇಳಿಸುತ್ತಿದೆಯೇ, ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಂಡು ತೊಂದರೆ ಇದ್ದರೆ ಪ್ರಾಥಮಿಕ ಚಿಕಿತ್ಸೆ ಪಡೆದು ಕೊಳ್ಳಲು ಸಹಕಾರಿಯಾಗಿದೆ ಎಂದು ಶ್ರವಣ ತಜ್ಞೆ ಡಾ.ಪಿ.ಮಂಜುಳಾ ತಿಳಿಸಿದರು.

ದೇಶದಲ್ಲಿಯೇ ಶ್ರವಣ ದೋಷ ಪತ್ತೆ ಹಚ್ಚಲು ಸಿದ್ಧಪಡಿಸಿರುವ ಮೊದಲ ಆ್ಯಪ್ ಇದಾಗಿದ್ದು, ಅತ್ಯಂತ ಸರಳ ಪದಗಳ ಮತ್ತು ಚಿತ್ರಗಳನ್ನು ಬಳಸಲಾಗಿದೆ. ಎಡ ಮತ್ತು ಬಲ ಕಿವಿಗೆ ತಲಾ 10 ಪ್ರಶ್ನೆ ಗಳನ್ನು ಆ್ಯಪ್ ಕೇಳುವುದರ ಜೊತೆಗೆ ಚಿತ್ರವನ್ನು ತೋರಿಸಲಿದೆ. ಬಳಕೆದಾರರು ಸರಿಯಾಗಿ ಕೇಳಿಸಿಕೊಂಡು, ಚಿತ್ರವನ್ನು ಗುರುತಿಸಬೇಕು. ನೀಡಿದ ಉತ್ತರಗಳು ಸರಿಯಿದ್ದರೆ ಉತ್ತೀರ್ಣವೆಂದು ಸಮಸ್ಯೆ ಇದ್ದರೆ ಅನುತ್ತೀರ್ಣ ಎಂದು ಪ್ರಮಾಣ ಪತ್ರ ತೋರಿಸುವ ಜೊತೆಗೆ ಶೇಕಡವಾರು ಅಂಕಿ-ಅಂಶ ನೀಡಲಿದೆ. ಅಲ್ಲದೆ ಜಿಪಿಎಸ್ ಮೂಲಕ ಬಳಕೆದಾರರ ಸ್ಥಳದಿಂದ ಹತ್ತಿರದಲ್ಲಿರುವ ಆರೋಗ್ಯ ಕೇಂದ್ರಗಳ ವಿಳಾಸ ತಿಳಿಸಲಿದೆ ಎಂದು ಹೇಳಿದರು.

8 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಆ್ಯಪ್ ಬಳಕೆ ಮಾಡ ಬಹುದಾಗಿದೆ. ಶ್ರವಣದಲ್ಲಿನ ಸಮಸ್ಯೆ ಗಳನ್ನು ತಿಳಿಯಲು ಅತ್ಯಂತ ಉಪಯುಕ್ತ ವಾಗಿದೆ. ಕಿವಿ ಕೇಳಿಸುವಿಕೆಯಲ್ಲಿ ಸಂದೇಹ ವಿದ್ದರೆ, ಪರಿಹರಿಸಿಕೊಳ್ಳಬಹುದು. ಆಯಿಷ್‍ನ ಪ್ರಯತ್ನದ ಫಲವಾಗಿ ಆ್ಯಪ್ ಸಿದ್ಧವಾಗಿದ್ದು, ಸಂಸ್ಥೆಯ ಯೂಟ್ಯೂಬ್, ಫೇಸ್‍ಬುಕ್ ಪುಟಗಳಲ್ಲಿಯೂ ಆ್ಯಪ್‍ನ ಲಿಂಕ್ ದೊರಕಲಿದೆ ಎಂದರು.

Translate »