ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗೇಶ, ಉಪಾಧ್ಯಕ್ಷರಾಗಿ ಮರೀಗೌಡ ಅವಿರೋಧ ಆಯ್ಕೆ
ಮೈಸೂರು

ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗೇಶ, ಉಪಾಧ್ಯಕ್ಷರಾಗಿ ಮರೀಗೌಡ ಅವಿರೋಧ ಆಯ್ಕೆ

August 24, 2021

ಮೈಸೂರು,ಆ.23(ಆರ್‍ಕೆ)-ಮೈಸೂರಿನ ಆಲನಹಳ್ಳಿಯಲ್ಲಿರುವ ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ನಿವೃತ್ತ ಅಸಿಸ್ಟೆಂಟ್ ಸಬ್‍ಇನ್‍ಸ್ಪೆಕ್ಟರ್ ಟಿ.ಎನ್. ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಮರೀಗೌಡ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. 2020ರಲ್ಲಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಹಿಂದೆ ಅಧ್ಯಕ್ಷರಾಗಿದ್ದ ನಿವೃತ್ತ ಡಿವೈಎಸ್ಪಿ ನಂಜುಂಡೇ ಗೌಡರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು, ಟಿ.ಎನ್.ನಾಗೇಶ ಅಧ್ಯಕ್ಷರಾಗಿ ಮತ್ತು ಮರೀಗೌಡರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿಯೂ ಆದ ಸಹಕಾರ ಇಲಾಖೆಯ ವಸಂತಕುಮಾರ್ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಮರೀಗೌಡ, ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಸಂಘದ ವತಿಯಿಂದ ಹೊಸ ಬಡಾವಣೆಗಳನ್ನು ರಚಿಸಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ತಮ್ಮ ನೂತನ ಕಾರ್ಯಕಾರಿ ಸಮಿತಿಯು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹೆಚ್.ಡಿ.ಕೋಟೆ ರಸ್ತೆಯ ದಾರಿಪುರ ಬಳಿ ಪೊಲೀಸ್ ಬಡಾವಣೆ 4ನೇ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದ್ದು, ಈಗಾಗಲೇ ಹಣ ಪಾವತಿಸಿ ಕಾಯುತ್ತಿರುವ ಸದಸ್ಯರಿಗೆ ಜೇಷ್ಠತೆ ಆಧರಿಸಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಮರೀಗೌಡರು ತಿಳಿಸಿದರು.

Translate »