ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಯೋಜನೆ ಮೋದಿ ಸರ್ಕಾರದ ಸಾಧನೆ; ಕೆಲವರ ವ್ಯರ್ಥ ಆಲಾಪನೆ!
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಯೋಜನೆ ಮೋದಿ ಸರ್ಕಾರದ ಸಾಧನೆ; ಕೆಲವರ ವ್ಯರ್ಥ ಆಲಾಪನೆ!

August 25, 2021

ಮೈಸೂರು,ಆ.24(ಆರ್‍ಕೆ)- ಮೈಸೂರು -ಬೆಂಗಳೂರು ದಶಪಥ ಕಾಮಗಾರಿ ವಿಡಿಯೋ ಮಾಡಿಸಿರುವುದು ಕೆಲವರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಶಾಸಕ ರಾಮದಾಸ್‍ಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರು-ಬೆಂಗಳೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತು ವಿಡಿಯೋ ರೆಕಾರ್ಡ್ ಮಾಡಿ, ಹರಿಬಿಟ್ಟಿರುವುದು ಇಷ್ಟೂ ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ ಎಂದು ಛೇಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದ ರಿಂದ ಕಾಮಗಾರಿಗೆ ಚಾಲನೆ ನೀಡಲಾ ಗಿದೆ. ವಿಶ್ವನಾಥ್ ಆಗಲೀ, ಸಿದ್ದರಾಮಯ್ಯ ಅವರಾಗಲೀ 8,666 ಕೋಟಿ ರೂ.ಗಳ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ರಾ? ನಿತಿನ್ ಗಡ್ಕರಿ ಅವರು ಆಸಕ್ತಿ ವಹಿಸಿ ಯೋಜನೆ ತಂದಿದ್ದಾರೆ ಎಂದ ಅವರು, ತಾವೇ ಯೋಜನೆ ತಂದಿದ್ದರೆ ಚುನಾವಣೆ ವೇಳೆ ಈ ವಿಷಯವನ್ನು ವಿಶ್ವನಾಥ್ ಅವರು ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.

ವಿಶ್ವನಾಥ್ ಅವರು ಟೀಕಿಸದ ವ್ಯಕ್ತಿಗಳೇ ಇಲ್ಲ. ಅಮೆರಿಕದ ಟ್ರಂಪ್, ಬೈಡೆನ್ ಅವರನ್ನೇ ಬಿಟ್ಟಿಲ್ಲ. ದೇವೇಗೌಡ್ರು, ಯಡಿಯೂರಪ್ಪ, ಎಸ್.ಟಿ.ಸೋಮಶೇಖರ್ ಅವರನ್ನು ಬಯ್ದಿ ದ್ದಾಯ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇನ್ನೂ ಮಾತನಾಡಲಾರಂಭಿಸಿಲ್ಲ. ಆ ಗ್ಯಾಪ್‍ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರಷ್ಟೇ ಎಂದು ಪ್ರತಾಪ್ ಸಿಂಹ ಹರಿಹಾಯ್ದರು.

ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಚರ್ಚೆ ಮಾಡೋಣ ಬನ್ನಿ. ಈ ಯೋಜ ನೆಯ ಡೇಟ್-ಟು-ಡೇಟ್ ಚರ್ಚೆ ಯಾಗಲಿ, ಹಳೇ ಉಂಡುವಾಡಿ ಕುಡಿ ಯುವ ನೀರಿನ ಯೋಜನೆಗೆ ಐದು ನಯಾ ಪೈಸೆ ಕೊಡದ ನೀವು ಸತ್ಯಸಂಧರಂತೆ ಮಾತನಾಡಬೇಡಿ ಎಂದು ನುಡಿದರು.
ನಿಮ್ಮ ಅವಧಿಯಲ್ಲಿ ಮಾಡಿದ ಒಂದು ರಸ್ತೆಯೂ ನೆಟ್ಟಗಿಲ್ಲ, ನಿಮಗೆ ದಶಪಥ ರಸ್ತೆ ಕ್ರೆಡಿಟ್ ಬೇಕಾ? ನೀವು ಹಿರಿಯರು, ಬೀದಿ ಜಗಳಕ್ಕಿಳಿಯಬೇಡಿ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ದಶಪಥ ರಸ್ತೆ ಕ್ರೆಡಿಟ್ ಭಾರತ ಮಾತೆಗೆ ಸೇರಬೇಕು ಎಂದ ಶಾಸಕ ರಾಮ ದಾಸ್ ಅವರಿಗೂ, ಮೋದಿ ಅವರೂ ಭಾರತ ಮಾತೆಯ ಸುಪುತ್ರ, ಅವರು ಮಾಡುವ ಎಲ್ಲಾ ಕೆಲಸವೂ ಭಾರತ ಮಾತೆಗೆ ಸೇರಿದ್ದು ಎಂದು ತಿರುಗೇಟು ನೀಡಿದರು.

ಮಂಡ್ಯ ಸಂಸದೆ ಸುಮಲತಾಗೂ ಟಾಂಗ್ ನೀಡಿದ ಅವರು, ನಾನೇ ತಜ್ಞ ರನ್ನು ಕರೆಸುತ್ತೇನೆ. ರಸ್ತೆ ಅವೈಜ್ಞಾನಿಕ ವಾಗಿದ್ದರೆ, ನೀವು ಹೇಳಿದ ರೀತಿ ಸರಿ ಪಡಿಸುತ್ತೇವೆ. ಆದರೆ ಸುಮ್ಮನೆ ಅವೈಜ್ಞಾ ನಿಕ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಆರ್‍ಎಸ್‍ಎಸ್‍ನವರನ್ನು ತಾಲಿಬಾನ್‍ಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರು ಉತ್ತಮ ಕೆಲಸಗಾರರು, ಆದರೆ ಅವರೂ ಹೀಗೆ ಮಾತಾಡಿದ್ರೆ ಚಾಮ ರಾಜನಗರ ಭಾಗದಲ್ಲಿ ಅವರು ಮತ್ತೊಬ್ಬ ವಿಶ್ವನಾಥ್ ಆಗುತ್ತಾರಷ್ಟೆ ಎಂದು ಸಂಸದ ಪ್ರತಾಪ್ ಸಿಂಹ ನುಡಿದರು.

Translate »