25ನೇ ದಿನಕ್ಕೆ ಕಾಲಿಟ್ಟ `ನಿರಂಜನ ಮಠ ಉಳಿಸಿ’ ಹೋರಾಟ
ಮೈಸೂರು

25ನೇ ದಿನಕ್ಕೆ ಕಾಲಿಟ್ಟ `ನಿರಂಜನ ಮಠ ಉಳಿಸಿ’ ಹೋರಾಟ

August 25, 2021

ಮೈಸೂರು,ಆ.24(ಎಸ್‍ಪಿಎನ್)- ಶ್ರೀ ನಿರಂಜನ ಮಠ ಉಳಿಸಿ ಹೋರಾಟ ಸಮಿತಿ ಅಹೋರಾತ್ರಿ ಧರಣಿ 25ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂಬಂಧ ವೀರಶೈವ ಲಿಂಗಾಯತ ಮುಖಂಡ ಟಿ.ಎಸ್.ಲೋಕೇಶ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಶ್ರೀ ನಿರಂಜನ ಮಠ ಉಳಿಸಿ ಹೋರಾಟ ಸಮಿತಿ ನಡೆಸು ತ್ತಿರುವ ಹೋರಾಟದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನಂದ ಪಾಲನೇತ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ಹೋರಾಟದ ಸ್ಥಳಕ್ಕೆ ಬಂದ ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ, ದೇವಾಲಪುರ ಶಾಖಾ ಮಠದ ಶ್ರೀಗಳು, ಬಸಳ್ಳಿ ಹುಂಡಿ ಶ್ರೀಗಳು ಬೆಂಬಲ ಸೂಚಿಸಿ, ಹೋರಾಟಗಾರ ರಿಗೆ ಧೈರ್ಯ ತುಂಬಿದರು.

ಅಲ್ಲದೆ, ಹೈಕೋರ್ಟ್‍ನಲ್ಲಿ ಶ್ರೀ ನಿರಂಜನ ಮಠ ಹೋರಾಟ ಸಮಿತಿ ಪರವಾಗಿ ವಾದ ಮಾಡುತ್ತಿರುವ ವಕೀಲ ಜೆ.ಎಂ.ಅನಿಲ್ ಕುಮಾರ್ ಬೆಂಬಲ ಸೂಚಿಸಿದ್ದಾರೆ ಎಂದರು.

ನಿರಂಜನ ಮಠ ಉಳಿಸಿ ಹೋರಾಟ ಸಮಿತಿ ಸದಸ್ಯ ಬೆಂಗಳೂರಿನ ವಿಧಾನ ಸೌಧದಲ್ಲಿ ಗೃಹ ಕಾರ್ಯದರ್ಶಿ ರಜಿನೀಶ್ ಗೋಯಲ್ ಅವರನ್ನು ಭೇಟಿ ಮಾಡಿ, ಮಠದ ಆವರಣದಲ್ಲಿ ಹೋರಾಟಗಾರರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಅಡಚಣೆ ಇಲ್ಲದಿ ದ್ದರೂ ಹೆಚ್ಚಿನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಸಿಬ್ಬಂದಿಯನ್ನು ವಾಪಸ್ ಪಡೆಯುವಂತೆ ಮನವಿ ಮಾಡ ಲಾಗಿದೆ. ಅಲ್ಲದೆ, ವಿಧಾನಪರಿಷತ್ ಸಭಾ ಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ, ಮಠದ ವಿಚಾರವಾಗಿ ಮಾತುಕತೆ ನಡೆಸಲಾಗಿದೆ ಎಂದರು. ಮಂಗಳವಾರ ರಾತ್ರಿ ಯುವ ಘಟಕದ ಸದಸ್ಯ ದಕ್ಷಿಣಾ ಮೂರ್ತಿ ನೇತೃತ್ವದಲ್ಲಿ ಇತರೆ ಸದಸ್ಯರು ಮಠದ ಆವ ರಣದಲ್ಲಿ ಉಳಿದುಕೊಂಡಿದ್ದರು ಎಂದರು.

57ನೇ ದಿನಕ್ಕೆ: ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆ 57ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಗೆ ಹೃದಯವಂತ ಕನ್ನಡಿಗರ ಬಳಗದ ಡಿ.ಕೆ. ಪರಮೇಶ್ವರ ನೇತೃತ್ವದ ತಂಡ ಬೆಂಬಲ ನೀಡಿದೆ.

Translate »