ಕೊಡಗಲ್ಲಿ ಮಳೆ ಅಬ್ಬರದಿಂದ 9 ಮನೆಗಳಿಗೆ ಹಾನಿ
ಮೈಸೂರು

ಕೊಡಗಲ್ಲಿ ಮಳೆ ಅಬ್ಬರದಿಂದ 9 ಮನೆಗಳಿಗೆ ಹಾನಿ

July 9, 2022

ಎರಡು ಕಡೆ ಭೂ ಕುಸಿತ, ೩೧ ವಿದ್ಯುತ್ ಕಂಬಗಳು ಧರೆಗೆ

ಪ್ರವಾಹದ ಭೀತಿ

ಮಳೆ ಕಡಿಮೆಯಾದರೂ ಕೊರೆಯುವ ಚಳಿ

ಭಾಗಮಂಡಲದ ಸುತ್ತ-ಮುತ್ತ ರಸ್ತೆ ಸಂಚಾರ ಬಂದ್

ಇಂದು ಸಹ ಶಾಲಾ-ಕಾಲೇಜುಗಳಿಗೆ ರಜೆ

ಮಡಿಕೇರಿ,ಜು.೮- ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ೯ ಮಳೆಗಳು ಹಾನಿಯಾಗಿದ್ದು, ಎರಡು ಕಡೆ ಭೂ ಕುಸಿತವಾ ಗಿದೆ. ೩೧ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಇದರೊಂದಿಗೆ ಪ್ರವಾಹ ಭೀತಿ ಎದುರಾ ಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ರವರೆಗೆ ಜಿಲ್ಲೆಯಾದ್ಯಂತ ಮತ್ತೆ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಲಾ ಗಿದೆ. ಮಳೆ ಮುಂದುವರೆದಿರುವ ಹಿನ್ನೆಲೆ ಶನಿವಾರವೂ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಕಳೆದ ೨೪ ಗಂಟೆ ಅವಧಿಯಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೪೬.೫ ಮಿ.ಮೀ ಹಾಗೂ ಮದೆ ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೨೫ ಮಿ.ಮೀ ದಾಖಲೆಯ ಮಳೆ ಸುರಿದಿರುವು ದಾಗಿ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಭಾರೀ ಗಾಳಿಗೆ ಮರಗಳು ಮುರಿದು ಬಿದ್ದು, ವಿದ್ಯುತ್ ಕಂಬ ಗಳಿಗೆ ಹಾನಿಯಾಗಿದ್ದು, ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಕೆಲವು ಕಾಫಿ ತೋಟಗಳ ಒಳಗೆ ಹಾದು ಹೋಗಿರುವ ವಿದ್ಯುತ್ ಲೈನ್ ಗಳಿಗೆ ಹಾನಿಯಾಗಿದ್ದು, ಗ್ರಾಮೀಣ ಭಾಗಗ ಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾದ್ಯಂತ ಶುಕ್ರ ವಾರ ಮಳೆಯ ತೀವ್ರತೆ ಕಡಿಮೆ ಇತ್ತಾದರೂ ದಟ್ಟ ಮಂಜು ಸಹಿತ ಮೈ ಕೊರೆಯುವ ಚಳಿಯ ವಾತಾವರಣ ಕಂಡು ಬಂದಿದೆ.

ಭಾಗಮAಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಬಿರುಸು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭಾಗಮಂಡಲ-ಅಯ್ಯAಗೇರಿ ರಸ್ತೆಯಲ್ಲಿ ಪ್ರವಾಹ ನೀರಿನ ಪ್ರಮಾಣ ಇಳಿಕೆಯಾಗಿದ್ದರೂ ರಸ್ತೆ ಸಂಪರ್ಕ ಬಂದ್ ಆಗಿದೆ. ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ಕಾವೇರಿ ನದಿ ಪಾತ್ರ ದಲ್ಲಿ ಪ್ರವಾಹದ ಆತಂಕ ಮುಂದುವರೆದಿದೆ.

ಮಡಿಕೇರಿಯ ಟರ್ಫ್ ಹಾಕಿ ಮೈದಾನದ ಬಳಿ ಭೂ ಕುಸಿದು ಬಿದ್ದು, ರಸ್ತೆಗೆ ಹಾನಿಯಾ ಗಿದೆ. ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವ ಡಿಸಿ ವಾಹನ ಸವಾರರಿಗೆ ಸುರಕ್ಷಿತವಾಗಿ ಚಲಿಸುವಂತೆ ಸೂಚಿಸಲಾಗಿದೆ.

ಭಾರೀ ಮಳೆಗೆ ಗಾಳಿಬೀಡು ವ್ಯಾಪ್ತಿಯ ಒಂದನೇ ಮೊಣ್ಣಂಗೇರಿಯಲ್ಲಿ ಬೆಟ್ಟ ಕುಸಿದು ಅಪಾರ ಪ್ರಮಾಣ ನಷ್ಟ ಸಂಭವಿಸಿದೆ. ಗ್ರಾಮದ ಐರೀರ ವೆಂಕಪ್ಪ ಅವರ ಮನೆಯ ಮುಂದಿನ ತೋಟದ ಅರ್ಧ ಭಾಗ ಕುಸಿತ ಗೊಂಡಿದೆ. ಪರಿಣಾಮ ಸುಮಾರು ೩೫ ಫಸಲು ಭರಿತ ಕಾಫಿ ಗಿಡಗಳು ನಾಶವಾಗಿದ್ದು, ಅಲ್ಲದೆ ವೆಂಕಪ್ಪ ಅವರ ಮನೆ ಅಪಾಯದ ಸ್ಥಿತಿಯಲ್ಲಿದೆ.

ಬೆಟ್ಟ ಕುಸಿದ ಸ್ಥಳದಲ್ಲಿ ಅಂತರ್ ಜಲ ಉಕ್ಕಿ ಹರಿಯುತ್ತಿದ್ದು, ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ. ಮಡಿಕೇರಿ ತಾಲೂಕಿನ ಹೆರವ ನಾಡು ಗ್ರಾಮ ನಿವಾಸಿ ಶಕೇಶ್ ಎಂಬುವರ ಮನೆ ಗೋಡೆ ಕುಸಿದು ಬಿದ್ದು, ಶೇ.೩೦ರಷ್ಟು ಹಾನಿಯಾಗಿದೆ. ಬಿಳಿಗೇರಿ ಗ್ರಾಮ ನಿವಾಸಿ ಚಿನ್ನಮ್ಮ ಎಂಬುವರ ಮನೆ ಬಹುತೇಕ ಕುಸಿದು ಬಿದ್ದಿದ್ದು, ಶೇ.೬೦ರಷ್ಟು ನಷ್ಟ ಉಂಟಾಗಿದೆ. ಈ ಮನೆ ಪ್ರಸ್ತುತ ವಾಸಕ್ಕೆ ಸೂಕ್ತವಾಗಿರದ ಕಾರಣ ಮನೆ ಮಂದಿ ಸಂಬAಧಿಕರ ಮನೆ ಯಲ್ಲಿ ಆಶ್ರಯ ಪಡೆದಿದ್ದಾರೆ. ಸೋಮವಾರ ಪೇಟೆ ತಾಲೂಕಿನ ಶಿರಂಗಾಲ ಸಮೀಪದ ಸಾಲುಕೊಪ್ಪಲು ಗ್ರಾಮದ ವಯೋವೃದ್ದೆ ಸುಮಿತ್ರಮ್ಮ ಎಂಬವರ ಮನೆಯ ೨ ಗೋಡೆ ಗಳು ಗುರುವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿವೆ. ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾ ರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ

ಸೋಮವಾರಪೇಟೆ ತಾಲೂಕಿನ ಶನಿವಾ ರಸಂತೆ ಹೋಬಳಿಗೆ ಸೇರಿದ ರಾಮನಳ್ಳಿ ಗ್ರಾಮದ ವಿನತ್ ಕುಮಾರ್ ಎಂಬವರ ಮನೆಯ ಮೇಲೆ ಶುಕ್ರವಾರ ಬೆಳಗಿನ ೧೧.೩೦ರ ಸಮಯದಲ್ಲಿ ಮರ ಮುರಿದು ಬಿದ್ದು, ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿ ವೃದ್ಧೆಯೊಬ್ಬರು ಅಡುಗೆ ಮಾಡು ತ್ತಿದ್ದ ಸಂದರ್ಭ ಮರ ಬಿದ್ದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಮೇಲ್ಚಾವಣ ಯ ಹೆಂಚುಗಳು ಪುಡಿಯಾ ಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿದ್ದರು.

Translate »