ಉದ್ಯೋಗದ ಆಸೆ ತೋರಿಸಿ ನಿರುದ್ಯೋಗಿಗೆ ೪೮.೮೦ ಲಕ್ಷ `ಆನ್‌ಲೈನ್’ ವಂಚನೆ: ಮೂವರ ಬಂಧನ
ಮೈಸೂರು

ಉದ್ಯೋಗದ ಆಸೆ ತೋರಿಸಿ ನಿರುದ್ಯೋಗಿಗೆ ೪೮.೮೦ ಲಕ್ಷ `ಆನ್‌ಲೈನ್’ ವಂಚನೆ: ಮೂವರ ಬಂಧನ

July 9, 2022

ಮೈಸೂರು, ಜು.೮(ಎಂಟಿವೈ)-ಕೆಲಸ ಕೊಡಿ ಸುವುದಾಗಿ ನಂಬಿಸಿ ಮೈಸೂರಿನ ಸಾತಗಳ್ಳಿಯ ವ್ಯಕ್ತಿಯೊಬ್ಬನಿಂದ ೪೮.೮೦ ಲಕ್ಷ ರೂ. ಪಡೆದು ವಂಚಿಸಿದ್ದ ಬೆಂಗಳೂರು ಮೂಲದ ಮೂವರನ್ನು ಸೆನ್ ಪೊಲೀಸರು ಬಂಧಿಸಿ, ೨೪ ಲಕ್ಷ ರೂ. ನಗದು ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ವಸ್ತು ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರೊನಾ ಸಮಸ್ಯೆಯಿಂದ ಕೆಲಸ ಕಳೆದು ಕೊಂಡಿದ್ದ ಸಾತಗಳ್ಳಿಯ ೪೦ ವರ್ಷದ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರ್, ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, `ಎಮಿನೆಂಟ್ ಮೈಂಡ್’ ಕಂಪನಿಯ ವೆಬ್‌ಸೈಟ್ ಕಣ ್ಣಗೆ ಬಿದ್ದಿದೆ. ಈ ವೇಳೆ ಕೆಲಸ ಖಾಲಿಯಿರುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದನ್ನೇ ಬಂಡ ವಾಳವಾಗಿಸಿಕೊಂಡ ಮೂವರು ಮೈಸೂರಿನ ಈ ವ್ಯಕ್ತಿಯನ್ನು ಸಂಪರ್ಕಿಸಿ, ಸಂದರ್ಶನಕ್ಕೆAದು ಬೆಂಗಳೂರಿಗೆ ಕರೆದಿದ್ದಾರೆ. ಅನುಮಾನ ಬಾರ ದಂತೆ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಸಂದರ್ಶನ ಮಾಡುವಂತೆ ಸಂದರ್ಶನ ಮಾಡಿದ್ದಾರೆ. ಬಳಿಕ ೨೦೨೦ರ ನ.೫ ರಿಂದ ೨೦೨೨ರ ಏ.೪ರವರೆಗೆ ಹಂತ ಹಂತವಾಗಿ ನೋಂದಣ ಶುಲ್ಕ, ಠೇವಣ , ವಿವಿಧ ಶುಲ್ಕದ ನೆಪದಲ್ಲಿ ಬರೋಬ್ಬರಿ ೪೮,೮೦,೩೦೦ ಪಡೆದು ವಂಚಿಸಿದ್ದು, ಇದೀಗ ಸೆನ್ ಪೊಲೀಸ ರಿಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿ ದಂತೆ ಮೈಸೂರಿನ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಆರ್.ಚೇತನ್, ಮೈಸೂರಿನ ಸೆನ್ ಪೊಲೀಸರು ಪ್ರಕರಣದ ಮಾಹಿತಿ ನೀಡಿ, ಆನ್‌ಲೈನ್ ವಂಚನೆ ಬಗ್ಗೆ ಎಚ್ಚರದಿಂದ ಇರಬೇಕು. ಅನಗತ್ಯವಾಗಿ ಆನ್‌ಲೈನ್ ಮೂಲಕ ಹಣ ನೀಡದಂತೆ ಎಚ್ಚರಿಕೆ ನೀಡಿದರು.

ಕೊರೊನಾ ಸಂದಭÀðದಲ್ಲಿ ಮೈಸೂರಿನ ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡಿದ್ದರು. ಕೆಲಸಕ್ಕಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸು ವಾಗ ಅವರಿಗೆ ಎಮಿನೆಂಟ್ ಮೈಂಡ್ ಎಂಬ ಕಂಪನಿಯ ಮಾಹಿತಿ ತಿಳಿದು, ಅರ್ಜಿ ಸಲ್ಲಿಸಿ z್ದÁರೆ. ಕಂಪನಿಯವರು ಕೆಲಸಕ್ಕೆ ನೀವು ಆಯ್ಕೆ ಯಾಗಿದ್ದು, ವಾರ್ಷಿಕ ೮ ಲಕ್ಷ ರೂ. ಪ್ಯಾಕೇಜ್ ನೀಡುವುದಾಗಿ ನಂಬಿಸಿ, ಹಣ ನೀಡಿದರೆ ನಿಮ್ಮ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ೨೦೨೦ರ ನ.೫ ರಿಂದ ೨೦೨೨ರ ಏ.೪ರವರೆಗೆ ೪೮,೮೦,೩೦೦ ರೂ. ಹಣವನ್ನು ಹಲವು ಕಂತು ಗಳಲ್ಲಿ ಪಡೆದುಕೊಂಡಿದ್ದರು. ಕೆಲಸ ಸಿಗುವ ಆಸೆಯಿಂದ ಆ ವ್ಯಕ್ತಿ, ತನ್ನ ತಾಯಿಯ ಹಣ, ಡೆಬಿಟ್ ಕಾರ್ಡ್ ಸೇರಿದಂತೆ ವಿವಿಧ ಮೂಲದಿಂದ ಭಾರೀ ಮೊತ್ತದ ಹಣ ನೀಡಿ ವಂಚನೆಗೀಡಾಗಿದ್ದರು.
ಕೊನೆಗೆ ಆ ವ್ಯಕ್ತಿ ಮೈಸೂರು ಸಿಇಎನ್ ಕ್ರೆöÊಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನಾಲ್ವರು ಆರೋಪಿಗಳಲ್ಲಿ ಮೂವ ರನ್ನು ಬಂಧಿಸಿ, ವಿಚಾರಣೆ ನಡೆಸಿ, ೭ ಮೊಬೈಲ್, ೪ ಸ್ಮಾರ್ಟ್ಫೋನ್, ೧೧ ಸಿಮ್ ಕಾರ್ಡ್, ೨ ಲ್ಯಾಪ್ ಟಾಪ್, ೩ ಕಚೇರಿ ಸೀಲುಗಳು, ೨೪ ಲP್ಷÀ ರೂ ನಗದನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಕೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಿದೆ ಎಂದು ಮಾಹಿತಿ ನೀಡಿದರು.

ಈ ಜಾಲದಲ್ಲಿ ಇನ್ನೂ ಹಲವರಿದ್ದು, ಶೀಘ್ರವೇ ಅವರನ್ನೂ ಬಂಧಿಸಲಾಗುವುದು. ಬಂಧಿತ ಆರೋಪಿಗಳೆಲ್ಲಾ ಬೆಂಗಳೂರಿನವರಾಗಿದ್ದು, ಒಬ್ಬ ಎಸ್ಸೆಸ್ಸೆಲ್ಸಿ, ಮತ್ತಿಬ್ಬರು ಡಿಪ್ಲೊಮಾ ಶಿಕ್ಷಣ ಪಡೆದವರಾಗಿದ್ದಾರೆ. ಇವರೆಲ್ಲ ಸೇರಿ ನಕಲಿ ಕಂಪನಿಗಳ ಹೆಸರಿನಲ್ಲಿ ಹಲವರಿಗೆ ಕೆಲಸ ಕೊಡಿ ಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿ ದ್ದಾರೆ. ಶೀಘ್ರವೇ ವಂಚನೆಗೆ ಒಳಗಾದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.

ಪತ್ತೆ ಕಾರ್ಯದಲ್ಲಿ ಸೆನ್ ಪೊಲೀಸ್ ಠಾಣೆ (ಸೈಬರ್ ಎಕಾನಮಿಕ್ ಮತ್ತು ನಾರ್ಕೋಟಿಕ್ಸ್ ಅಪರಾಧÀ ಪೊಲೀಸ್ ಠಾಣೆ) ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಸಿಬ್ಬಂದಿ ಎಸ್.ಮಂಜುನಾಥ್, ರಂಗಸ್ವಾಮಿ, ಬಿ.ವಿ.ಮಂಜು ನಾಥ್, ಮಹೇಶ್ ಭಾಗಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.

Translate »