೧೧.೯೪ ಲಕ್ಷ ರೂ. ಮೌಲ್ಯದ ಆಭರಣ, ನಗದು ವಶ
ಮೈಸೂರು, ಜು.೮(ಆರ್‌ಕೆ)-ನಕಲಿ ಕೀ ಬಳಸಿ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದ ಮಹಿಳೆಯನ್ನು ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಬಡಾವಣೆ ನಿವಾಸಿ ಮಹದೇವಸ್ವಾಮಿ ಎಂಬುವರ ಪತ್ನಿ ಪ್ರಭಾಮಣ ಅಲಿಯಾಸ್ ಮಣ (೪೨) ಬಂಧಿತ ಆರೋಪಿಯಾಗಿದ್ದು, ಆಕೆಯಿಂದ ೯,೭೫,೦೦೦ ರೂ. ಮೌಲ್ಯದ ಚಿನ್ನಾಭರಣ, ೨,೧೦,೦೦೦ ರೂ. ಬೆಲೆ ಬಾಳುವ ೩ ಕೆ.ಜಿ ಬೆಳ್ಳಿ ಪದಾರ್ಥ ಹಾಗೂ ೯,೦೦೦ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ ೩೦ ರಂದು ಸಂಜೆ ಆಲನಹಳ್ಳಿ ನಂದಿನಿ ಬಡಾವಣೆ ೨ನೇ ಕ್ರಾಸ್ ನಿವಾಸಿ ಡಾ. ಎನ್.ಕುಮಾರ್ ಎಂಬುವರು ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದು ಹಿಂದಿರುಗುವಷ್ಟರಲ್ಲಿ ನಕಲಿ ಕೀ ಬಳಸಿ ಮನೆಗೆ ನುಗ್ಗಿ ಅಲ್ಮೇರಾದಲ್ಲಿದ್ದ ೧೬೦ ಗ್ರಾಂ ಚಿನ್ನದ ಒಡವೆಗಳು, ೨ ಕೆ.ಜಿ. ಬೆಳ್ಳಿ ಪದಾರ್ಥ ಹಾಗೂ ೭೦,೦೦೦ ರೂ.ನಗದು ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಜಿ.ಎನ್.ಶ್ರೀಕಾಂತ್ ಅವರು ತನಿಖೆ ಕೈಗೊಂಡಾಗ ಜುಲೈ ೬ ರಂದು ಪ್ರಭಾಮಣ ಪತ್ತೆಯಾದಳು. ಠಾಣೆಗೆ ಕರೆತಂದು ಆಕೆಯನ್ನು ವಿಚಾರಣೆ ಮಾಡಿದಾಗ ನಕಲಿ ಕೀ ಬಳಸಿ ಠಾಣಾ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳವು ಮಾಡಿದ್ದಾಳೆಂಬುದು ತಿಳಿಯಿತು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಆದೇಶದಂತೆ ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ಅವರ ಮಾರ್ಗದರ್ಶನ ಹಾಗೂ ದೇವರಾಜ ಉಪ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾ ಚರಣೆಯಲ್ಲಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಜಿ.ಎನ್.ಶ್ರೀಕಾಂತ್, ಸಬ್ ಇನ್ಸ್ಪೆಕ್ಟರ್‌ಗಳಾದ ಟಿ.ಎಸ್.ಮಹೇಂದ್ರ, ಪ್ರವೀಣ್ ಕುಮಾರ್, ಎಎಸ್‌ಐ ಎಂ.ಎಸ್.ಲಕ್ಷಿö್ಮÃನಾರಾಣ, ಸಿಬ್ಬಂದಿಗಳಾದ ಶಿವಪ್ರಸಾದ್, ಬಿ.ಕೆ.ಚೌಡಪ್ಪ, ಸುಂದರಿ, ಪಿ.ಎನ್.ಸುಹೀಲ್, ಬಿ.ಹೆಚ್.ರಂಗನಾಥ್, ಕೆ.ಎಂ.ರುಕ್ಮಿಣ , ಯಂಕಟ್ಟ ಜಗದಾಳೆ, ಶೋಭಾ, ಎಂ.ಅನಿತಾ ಹಾಗೂ ರಂಜಿತಾ ಅವರು ಪಾಲ್ಗೊಂಡಿದ್ದರು.
ತಮಿಳುನಾಡಿನಲ್ಲಿ ಲಾರಿಗೆ ಬಸ್ಸು ಡಿಕ್ಕಿ: ೬ ಮಂದಿ ಸಾವು
ಚೆಂಗಲ್ಪಟ್ಟು(ತಮಿಳುನಾಡು), ಜು.೮- ಬಸ್ಸು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ೬ ಮಂದಿ ಪ್ರಯಾಣ ಕರು ಸ್ಥಳದಲ್ಲಿಯೇ ಮೃತಪಟ್ಟು ೧೦ ಮಂದಿಗೂ ಅಧಿಕ ಪ್ರಯಾಣ ಕರು ಗಾಯಗೊಂಡಿರುವ ಘಟನೆ ತಮಿಳು ನಾಡಿನ ಚೆಂಗಲ್ಪಟ್ಟುವಿನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಸಂಭವಿಸಿದೆ.