ದೇಶದಲ್ಲಿ ಒಂದೇ ದಿನ 9,971 ಮಂದಿಗೆ ಕೊರೊನಾ 2.46 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ಮೈಸೂರು

ದೇಶದಲ್ಲಿ ಒಂದೇ ದಿನ 9,971 ಮಂದಿಗೆ ಕೊರೊನಾ 2.46 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

June 8, 2020

ನವದೆಹಲಿ, ಜೂ.7- ಕೊರೊನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದು ವರೆದಿದ್ದು, ಒಂದೇ ದಿನ 9,971 ಮಂದಿ ಯಲ್ಲಿ ವೈರಸ್ ದೃಢಪಟ್ಟಿದ್ದು, ಇದರೊಂ ದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.46 ಲಕ್ಷಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 9,971 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆ ಯಾಗಿದೆ. ಅಲ್ಲದೆ, ಸಾವಿನ ಸಂಖ್ಯೆ ಕೂಡ 7 ಸಾವಿರ ಗಡಿಯತ್ತ ಸಾಗಿದ್ದು, ಈವ ರೆಗೂ ಹೆಮ್ಮಾರಿ ವೈರಸ್‍ಗೆ 6,929 ಮಂದಿ ಬಲಿಯಾಗಿದ್ದಾರೆ. ಇನ್ನು 2,46,628 ಮಂದಿ ಸೋಂಕಿತರ ಪೈಕಿ 1,15,942 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದು, ದೇಶದಲ್ಲಿನ್ನೂ 1,14,072 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಕೊರೊನಾ ಹಾಟ್‍ಸ್ಪಾಟ್ ಎಂದೇ ಕುಖ್ಯಾತಿ ಗಳಿಸುತ್ತಿರುವ ದೆಹಲಿ ಯಲ್ಲಿ ಸೋಂಕಿತರ ಸಂಖ್ಯೆ 27,654. ಮಹಾ ರಾಷ್ಟ್ರ 82,968, ತಮಿಳುನಾಡು 30,152, ಗುಜರಾತ್ 19,592ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Translate »