ನಾಲ್ವಡಿ, ವಿಶ್ವೇಶ್ವರಯ್ಯ ಪ್ರತಿಮೆ ಜೊತೆಯಾಗಿ ನಿರ್ಮಿಸುವ ಸರ್ಕಾರದ ಯೋಜನೆಗೆ ಜನತೆ ಬೆಂಬಲವಿದೆ
ಮೈಸೂರು

ನಾಲ್ವಡಿ, ವಿಶ್ವೇಶ್ವರಯ್ಯ ಪ್ರತಿಮೆ ಜೊತೆಯಾಗಿ ನಿರ್ಮಿಸುವ ಸರ್ಕಾರದ ಯೋಜನೆಗೆ ಜನತೆ ಬೆಂಬಲವಿದೆ

June 8, 2020

ಮೈಸೂರು, ಜೂ.7(ಪಿಎಂ)- ಕೆಆರ್‍ಎಸ್ ಅಣೆಕಟ್ಟೆ ಎದುರು ನಾಲ್ವಡಿ ಕೃಷ್ಣರಾಜ ಒಡೆ ಯರ್ ಪ್ರತಿಮೆ ಜೊತೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಕಾರ್ಯ ಶ್ಲಾಘನೀಯ. ಅದಕ್ಕೆ ನಮ್ಮ ಹಾಗೂ ಜನತೆ ಬೆಂಬಲವಿದೆ. ರಾಜ್ಯ ಸರ್ಕಾರ ಈ ಕಾರ್ಯ ದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ಅನುಷ್ಠಾನಗೊಳಿಸಲೇಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಆಗ್ರಹಿಸಿದರು.

ಕೆಆರ್‍ಎಸ್ ಅಣೆಕಟ್ಟೆ ಎದುರು ವಿಶ್ವೇ ಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನು ವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅಭಿಮಾನಿ ಗಳ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ವಿನಿಮಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೈಸೂರು ಹಾಗೂ ಮಂಡ್ಯ ಭಾಗಕ್ಕೆ ವಿಶ್ವೇಶ್ವರಯ್ಯರ ಕೊಡುಗೆ ಅಪಾರ. ಇದ ಕ್ಕಾಗಿಯೇ ರಾಜ್ಯ ಸರ್ಕಾರ ಕೆಆರ್‍ಎಸ್ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ವಿಶ್ವೇಶ್ವರಯ್ಯನವರ ಪ್ರತಿಮೆ ಸ್ಥಾಪಿ ಸಲು ಮುಂದಾಗಿದೆ. ಆದರೆ ಕೆಲವರು ಗೊಂದಲು ಸೃಷ್ಟಿಸಲು ಇಲ್ಲಸಲ್ಲದ ಚರ್ಚೆ ಮಾಡುತ್ತಿದ್ದಾರೆ. ಕೆಆರ್‍ಎಸ್ ಅಣೆಕಟ್ಟೆ ನಿರ್ಮಿಸಲು ಮೊದಲು ಅಡಿಪಾಯ ಹಾಕಿ ದವರೇ ವಿಶ್ವೇಶ್ವರಯ್ಯ. ಕೆಆರ್‍ಎಸ್‍ನಲ್ಲಿ ನಾಲ್ವಡಿ ಪ್ರತಿಮೆ ಜೊತೆಯಲ್ಲಿ ವಿಶ್ವೇಶ್ವರಯ್ಯ ನವರ ಪ್ರತಿಮೆ ಸ್ಥಾಪಿಸಬೇಕು. ಇದರಿಂದ ಮೈಸೂರಿಗೆ ಮತ್ತಷ್ಟು ಘನತೆ ಬರಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಮಾಜ ಸೇವಕ ರಘುರಾಮ ವಾಜಪೇಯಿ, ಅಂದು ಮದ್ರಾಸ್ ಪ್ರಾಂತ್ಯದ ವಿರೋಧದ ನಡುವೆ ವಿಶ್ವೇಶ್ವರಯ್ಯನವರು ಬ್ರಿಟೀಷರ ಎದುರು ಸಮರ್ಥವಾಗಿ ವಾದ ಮಂಡಿಸಿ ಕೆಆರ್‍ಎಸ್ ಅಣೆಕಟ್ಟೆ ಕಟ್ಟಲು ಅನುಮೋದನೆ ಪಡೆ ದರು. ಅವರ ಪ್ರತಿಮೆ ನಿರ್ಮಾಣ ಸ್ವಾಗ ತಾರ್ಹ ಎಂದು ತಿಳಿಸಿದರು.

ಮುಖಂಡ ರವೀಂದ್ರ ಜೋಷಿ ಮಾತ ನಾಡಿ, ರಾಜರೇ ದೊಡ್ಡವರು ಅದರಲ್ಲಿ ಎರಡು ಮಾತಿಲ್ಲ. ಆದರೆ ವಿಶ್ವೇಶ್ವರಯ್ಯ ಅವರ ಪ್ರತಿಮೆಯೇ ಬೇಡ ಎನ್ನುವುದು ಸರಿಯಲ್ಲ. ವಿಶ್ವೇಶ್ವರಯ್ಯರ ಕೊಡುಗೆ ಇಲ್ಲವೆಂದು ಕೇವಲ ಮಾತನಾಡಿದರೆ ಸಾಲದು. ಅದನ್ನು ವಿರೋ ಧಿಸುವವರು ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದರು.

ವಿಶ್ವೇಶ್ವರಯ್ಯ ಪ್ರತಿಮೆ ವಿರೋಧಿಸುವವ ರಿಗೆ ತಾವು ಆರಂಭಿಸಿದ ವಿಚಾರವನ್ನು ಜನತೆ ಮುಂದುವರೆಸುತ್ತಾರೆ ಎಂಬ ಭ್ರಮೆಯಿದೆ. ಅವರಿಗೆ ನಾವು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ಅವರಿಗೆ ಪ್ರತಿರೋಧ ವ್ಯಕ್ತ ಪಡಿಸುವಲ್ಲಿ ಜಾತ್ಯಾತೀತ ಮತ್ತು ಪಕ್ಷಾ ತೀತವಾಗಿ ಮೈಸೂರಿನ ಪ್ರಜ್ಞಾವಂತ ನಾಗರಿಕರ ಕೂಗು ನಮ್ಮದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ. ಮಂಜು ಮಾತನಾಡಿ, ಮೈಸೂರು-ಮಂಡ್ಯ ಭಾಗದ ಜನರಲ್ಲಿ ವಿಶ್ವೇಶ್ವರಯ್ಯನವರ ಮೇಲೆ ಬಹಳ ಪ್ರೀತಿ ಇದೆ. ಅವರ ಮನೆ ಮನೆ ಗಳಲ್ಲಿ ಅವರ ಭಾವಚಿತ್ರ ಇಟ್ಟುಕೊಂಡಿ ದ್ದಾರೆ. ಇಂತಹ ಮಹನೀಯರನ್ನು ಜಾತಿ, ಪಂಥ ಮೀರಿ ನೋಡಬೇಕು ಎಂದು ತಿಳಿಸಿದರು.

ಮೈಸೂರು ರಕ್ಷಣಾ ವೇದಿಕೆಯ ಮೈ.ಕಾ. ಪ್ರೇಮ್‍ಕುಮಾರ್ ಮಾತನಾಡಿ, ನಾಲ್ವಡಿ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಜೊತೆಯಲ್ಲಿ ನಿರ್ಮಿಸುತ್ತಿರುವುದು ಅಭಿನಂದನಾರ್ಹ. ನಿರುದ್ಯೋಗಿಗಳ ಗುಂಪು ವಿಶ್ವೇಶ್ವರಯ್ಯರ ಪ್ರತಿಮೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಈಗಿ ರುವ ನಮ್ಮ ರಾಜ್ಯ ಸರ್ಕಾರ ಇಂತಹ ಬೆದರಿಕೆಗಳಿಗೆ ಎದುರುವುದಿಲ್ಲ ಎಂದರು.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂ ಗಾರ್ ಮಾತನಾಡಿ, ವಿಶ್ವೇಶ್ವರಯ್ಯ ಅವರ ಪ್ರತಿಮೆ ವಿರೋಧಿಸುವ ಮೂಲಕ ಸಮಾಜ ಒಡೆಯುವ ಷಡ್ಯಂತರ ನಡೆಸಲಾಗುತ್ತಿದೆ. ನಾವು ಯಾರ ವಿರೋಧಿಗಳೂ ಅಲ್ಲ. ಆದರೆ ಈ ರೀತಿ ಸಮಾಜದಲ್ಲಿ ಗೊಂದಲ ಸೃಷ್ಟಿ ಸುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಿ ದರೆ ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಸರ್ಕಾರ ನಿರ್ಧರಿಸಿರುವಂತೆ ನಾಲ್ವಡಿ ಪ್ರತಿಮೆಯೊಂದಿಗೆ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡುವ ಕಾರ್ಯವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಮುಖಂಡ ರಾಕೇಶ್ ಭಟ್ ಮಾತನಾಡಿ, ನಾಡಿಗೆ ಅಪಾರ ಕೊಡುಗೆ ನೀಡಿದ ವಿಶ್ವೇ ಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ಮಾಡು ವುದರಿಂದ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ವಿಶ್ವೇಶ್ವರಯ್ಯನವರು ಕರ್ತವ್ಯದಲ್ಲಿ ಬದ್ಧತೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ಪ್ರತೀಕವಾಗಿದ್ದಾರೆ. ಅಂತ ಹವರ ಪ್ರತಿಮೆ ವಿರೋಧಿಸುವುದು ನಾಗ ರಿಕ ಸಮಾಜದ ಲಕ್ಷಣವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜಗೌಡ, ಪಾಲಿಕೆ ಮಾಜಿ ಸದಸ್ಯ ಎಂ.ಜಿ.ಮಹೇಶ್, ಕೆಆರ್‍ಎಸ್ ಗ್ರಾಪಂ ಸದಸ್ಯ ವಿಜಯ್ ಕುಮಾರ್, ಮುಖಂಡರಾದ ಶ್ರೀನಿವಾಸರಾಜೇ ಅರಸು, ದೇವರಾಜ್, ಪ್ರಜ್ಞಾವಂತ ನಾಗರಿಕ ವೇದಿಕೆಯ ಕಡಕೊಳ ಜಗದೀಶ್, ಬೆಳಕು ಸಂಸ್ಥೆಯ ಕೆ.ಎಂ. ನಿಶಾಂತ್ ಮತ್ತಿತರರು ಹಾಜರಿದ್ದರು.

Translate »