ಮೈಸೂರು: ಕಾಲ್ಪನಿಕ್ ಟೆಕ್ನಾಲಾಜಿಸ್, ವಚ್ರ್ಯುಯೆಲ್ ಕ್ಷೇತ್ರದ ಸ್ಟಾರ್ಟ್ ಅಪ್ ಸಂಸ್ಥೆಯಾಗಿದ್ದು, ಬೆಂಗಳೂರು ಸಾಯಿ ಸೆಂಟರ್ನಲ್ಲಿ ನಡೆಯುವ ಕಾಕಡ ಆರತಿ ಮತ್ತು ಮಧ್ಯಮ ಆರತಿಯನ್ನು ನೇರ ಪ್ರಸಾರ ಮಾಡಲಿದೆ. ಪ್ರತಿ ಗುರುವಾರ 360 ಡಿಗ್ರಿ ವಚ್ಯುಯೆಲ್ ರಿಯಾಲಿಟಿ (ವಿಆರ್) ಸ್ವರೂಪದಲ್ಲಿ ವಿ.ಆರ್ಡಿ ವೋಟಿ ಆ್ಯಪ್ ಮೂಲಕ ಇದನ್ನು ವೀಕ್ಷಿಸಬಹುದು. ಸಾಯಿ ಬಾಬಾ ಹಿಂಬಾಲಕರು ಈ ಮೂಲಕ ಬೆಂಗಳೂರು ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ ದಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದು. ಬೆಳಿಗ್ಗೆ 6.30ಗಂಟೆಯಿಂದ ಆರಂಭವಾಗುವ ಕಾಕಡ ಆರತಿಯು ಬಾಬಾ ಅವರು ಬೆಳಿಗ್ಗೆ ಎದ್ದು, ದಿನಕ್ಕೆ ಸಜ್ಜಾಗುವುದನ್ನು ಬಿಂಬಿಸಲಿದೆ. ಆರತಿಯು ಪಂಚಾರತಿ ಮೂಲಕ ಆರಂಭವಾಗಲಿದ್ದು, ಉತಾ ಉತಾಸಕಲ್ಜನಾ ಪಠಣೆಯ ಮೂಲಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
