ಮೈಸೂರು: ಅಶೋಕಪುರಂ ರೈಲ್ವೆ ಸ್ಟೇಷನ್ಗೆ ಹೊಂದಿಕೊಂಡಂತೆ ಜೆಪಿ ನಗರ ಬಳಿ ರೈಲ್ವೆ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 11 ತಾತ್ಕಾಲಿಕ ಅಂಗಡಿ ನಿರ್ಮಾಣಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಜೆಪಿ ನಗರ ಬಳಿ ರೈಲ್ವೇ ಹಳಿ ಪಕ್ಕದಲ್ಲಿ 11 ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದರಿಂದ ರೈಲ್ವೇ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದರಿಂದ ಅವುಗಳನ್ನು ತೆರವುಗೊಳಿಸಲು ರೈಲ್ವೇ ಇಂಜಿನಿಯರ್ಗಳು ಹಾಗೂ ಆರ್ಪಿಎಫ್ ಅಧಿಕಾರಿಗಳ ತಂಡ ರಚಿಸಿ ನಿರ್ಮಾಣಗಳನ್ನು ನೆಲಸಮಗೊಳಿಸಲಾಯಿತು ಎಂದು ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ. ಎಸ್.ಜಿ.ಯತೀಶ ತಿಳಿಸಿದ್ದಾರೆ.