ಫೆ.14, 15, ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿ ದೇಗುಲದ ರಾಜಗೋಪುರ ಲೋಕಾರ್ಪಣೆ
ಹಾಸನ

ಫೆ.14, 15, ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿ ದೇಗುಲದ ರಾಜಗೋಪುರ ಲೋಕಾರ್ಪಣೆ

February 6, 2019

ಅರಸೀಕೆರೆ: ತಾಲೂಕಿನ ಇತಿ ಹಾಸ ಪ್ರಸಿದ್ಧ ಶ್ರೀಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಪ್ರವೇಶ ಮಹಾದ್ವಾರದ 108 ಅಡಿ ಎತ್ತರದ ನೂತನ ರಾಜ ಗೋಪುರ ಫೆ. 14 ಮತ್ತು 15 ರಂದು ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

5 ಅಡಿ ಎತ್ತರದ 9 ಕಳಸಗಳನ್ನು ಹೊಂದಿರುವ ನೂತನ ರಾಜ ಗೋಪು ರಕ್ಕೆ ಅಂತಿಮ ರೂಪವನ್ನು ಸ್ವಾಮಿ ಸನ್ನಿಧಿಯಲ್ಲಿಯೇ ನೀಡಲಾಗಿದೆ. ವಿವಿಧ ಗಣ್ಯರನ್ನು ಸ್ವಾಗತಿಸಿರುವ ಸಮಿತಿಯು ಅದ್ಧೂರಿ ಸಮಾರಂಭಕ್ಕಾಗಿ ಭಾರಿ ಸಿದ್ಧತೆ ಗಳು ಮಾಡಿಕೊಳ್ಳುತ್ತಿದೆ.

ಕಾರ್ಯಕ್ರಮ ದಲ್ಲಿ ಸುಮಾರು 25 ಮಠಾಧೀಶರಲ್ಲಿಗೆ ಕ್ಷೇತ್ರದ ಸಮಿತಿ ತೆರಳಿ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಉಪಸ್ಥಿತರಿರಲಿದ್ದಾರೆ. ಅಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರುವ ನಿರೀಕ್ಷೆ ಇದ್ದು, ಸಾರಿಗÉ ಸಂಸ್ಥೆ ವಿಶೇಷ ದಿನಗಳಲ್ಲಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಒದಗಿಸಿದೆ.

14 ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾ ರೋಹಣ, ಗಣಪತಿ ಪೂಜೆ, 108 ಪೂರ್ಣ ಕುಂಭ ಕಳಸ ಸ್ಥಾಪನೆ, ಶ್ರೀ ಯವರ ಗೋಪುರ ಪ್ರವೇಶ, ಪುಣ್ಯಹ, ನಾಂದಿ, ಪಂಚÀಕಳಸ, ಸಪ್ತಸಭಾ ದೇವತಾ, ಅಷ್ಟದಿಕ್ಪಾಲಕ, ನವಗ್ರಹ ಸ್ಥಾಪನೆ, ಮೃತ್ಯುಂ ಜಯ-ಪಾರ್ವತಿ ಕಳಸ ಸ್ಥಾಪನೆ, ಮಧ್ಯಾಹ್ನ 3 ಗಂಟೆಯಿಂದ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ಕಾರ್ಯಕ್ರಮಗಳು ನಡೆಯಲಿದೆ.

ಫೆ. 15ರಂದು ಬೆಳಿಗ್ಗೆ 4-30ಕ್ಕೆ ರುದ್ರಾ ಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ, ಬೆಳಿಗ್ಗೆ 7 ಗಂಟೆ ಯಿಂದ ರುದ್ರಹೋಮ, ಮೃತ್ಯುಂಜಯ ಹೋಮ, ಮಧ್ಯಾಹ್ನ 12 ರಿಂದ ಅಭಿಜಿನ್ ಲಗ್ನದಲ್ಲಿ ರಾಜಗೋಪುರ ಕಳಸಾ ರೋಹಣ, ಕುಂಭಾಭಿಷೇಕ, ಪೂರ್ಣಾ ಹುತಿ, ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾಡಿನ ಮಠಾ ಧೀಶರು, ರಾಜಕೀಯ ಮುತ್ಸದ್ದಿಗಳು, ವಿದ್ವಾಂಸರು, ಗಣ್ಯವ್ಯಕ್ತಿಗಳು ಆಗಮಿಸ ಲಿದ್ದು, ಲಕ್ಷಾಂತರ ಭಕ್ತರು ಅಂದು ಆಗ ಮಿಸಲಿದ್ದಾರೆ. ಈ ಕಾರ್ಯಕ್ರಮ ತಾಲೂಕಿ ನಲ್ಲಿಯೇ ಒಂದು ಧಾರ್ಮಿಕ ಇತಿಹಾಸ ವನ್ನು ನಿರ್ಮಿÀಸಲಿದೆ. ಶ್ರೀಕ್ಷೇತ್ರದಲ್ಲಿ ವರ್ಷದ 365 ದಿನಗಳು ದಾಸೋಹ ನಡೆಯುತ್ತಿದ್ದು, ಸೋಮವಾರ ಮತ್ತು ಹುಣ್ಣಿಮೆ ದಿನಗಳಂದು ಅಧಿಕ ಸಂಖ್ಯೆ ಯಲ್ಲಿ ಭಕ್ತರು ದೂರದ ಸ್ಥಳಗಳಿಂದ ಆಗಮಿಸುತ್ತಾರೆ.

ತಾಲೂಕಿನಲ್ಲಿ ಸತತ ಬರಗಾಲವಿ ದ್ದರೂ ದಾಸೋಹ ನಿರಂತರವಾಗಿ ನಡೆ ಯುತ್ತಿರುವುದು ಇಲ್ಲಿಯ ವಿಶೇಷ. ಫೆ. 14 ಮತ್ತು 15 ರಂದು ಭಕ್ತಾದಿಗಳು ಆಗ ಮಿಸಿ ಶ್ರೀಯವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿ ಮನವಿ ಮಾಡಿದೆ.

Translate »