ಅದ್ಧೂರಿಯಾಗಿ ಜರುಗಿದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ
ಹಾಸನ

ಅದ್ಧೂರಿಯಾಗಿ ಜರುಗಿದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ

April 28, 2019

ಬೇಲೂರು: ವಿಶ್ವವಿಖ್ಯಾತ ಬೇಲೂರು ಸಮೀಪದ ಎಸ್.ಸುರಾಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾ ಲಯ ಉದ್ಘಾಟನೆ, ಶ್ರೀರಾಮ ಪರಿವಾರ ದೇವತೆಗಳು, ಕೃಷ್ಣ ರುಕ್ಮಿಣಿ ದೇವತಾ ನೂತನ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಲಶ ಪ್ರತಿಷ್ಠಾಪನಾ ಮಹೋತ್ಸವ ಶುಕ್ರ ವಾರ ಭಕ್ತಿಭಾವದಿಂದ ನಡೆಯಿತು.

ನೂತನ ದೇಗುಲದ ಉದ್ಘಾಟನೆಗೆ ಆಗ ಮಿಸಿದ ಶಾಸಕ ಕೆ.ಎಸ್.ಲಿಂಗೇಶ್ ಮಾತ ನಾಡಿ, ದೇಗುಲವನ್ನು ಬಹಳ ಸುಂದರ ವಾಗಿ ಹತ್ತಾರು ಜನರ ಸಹಕಾರದಿಂದ ನಿರ್ಮಿಸಿದ್ದಾರೆ, ದೇಗುಲಗಳು ಮಾನವ ಭಕ್ತಿಯ ಸಂಕೇತವಾಗಿ ನಮ್ಮ ಪಾಪನಾಶ ಮಾಡುವ ಸ್ಥಳವಾಗಬೇಕಿದೆ, ಗ್ರಾಮಗಳಿಗೆ ಬಹುಮುಖ್ಯವಾಗಿ ಸಮುದಾಯಭವನ ಹಾಗೂ ದೇಗುಲ ನಿರ್ಮಾಣದ ಬಗ್ಗೆ ವಿಶೇಷ ಅನುದಾನ ನೀಡಲು ನಮ್ಮ ಸರ್ಕಾರ ಬದ್ದವಾಗಿದ್ದು,ಪುರಾತನ ದೇಗುಲಗಳ ನವೀಕರಣಕ್ಕೆ ಹೆಚ್ಚಿನ ಅದ್ಯತೆ ನೀಡಲಾಗುತ್ತದೆ,ವಿಶೇಷವಾಗಿ ಯಗಚಿ ಜಲಾಶಯದಿಂದ ವಂಚಿತವಾದ ಗ್ರಾಮ ಗಳಿಗೆ ನದಿ ಮೂಲದಿಂದ ನೀರು ನೀಡುವ ಮಹತ್ವಪೂರ್ಣ ಯೋಜನೆ ರೂಪಿಸಲಾ ಗಿದೆ ಎಂದ ಅವರು ನೂತನ ದೇಗುಲದ ಶ್ರೀ ಅಂಜನೇಯಸ್ವಾಮಿಯಲ್ಲಿ ಇಂದು ನಾವುಗಳು ಈ ವರ್ಷ ಉತ್ತಮ ಮಳೆ-ಬೆಳೆಯಾಗಲಿ ರೈತಾಪಿ ವರ್ಗದವರು ಕಾರ್ಮಿ ಕರ ಇಷ್ಟಗಳು ನಡೆಯಲಿ ಎಂದು ಪ್ರಾರ್ಥನೆ ಮಾಡಿರುವ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಯಾದವ ಸಂಘದ ಕಾರ್ಯದರ್ಶಿ ಎಸ್.ಕೆ.ನಾಗೇಶ್, ರವಿ, ಕೇಶವಮೂರ್ತಿ, ಸುರೇಶ್, ರಂಗ ಸ್ವಾಮಿ ಮುಂತಾದವರು ಹಾಜರಿದ್ದರು.

Translate »