ಶ್ರವಣಬೆಳಗೊಳ: ಪದವಿ ಪ್ರಮಾಣ ಪತ್ರಗಳು ಜೀವನಕ್ಕೆ ಆಧಾರವಲ್ಲ. ಆದರೆ ಅದನ್ನು ಜೀವನ ಮುನ್ನಡೆಸುವ ಸಾಧನ ವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಬಿಇಎಲ್‍ನ ನಿವೃತ್ತ ವಿಜ್ಞಾನಿ ಡಾ.ಅಜಿತ್ ಕಲಘಟಗಿ ಹೇಳಿದರು.
ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋ ಜಿಸಿರುವ ರಾಷ್ಟ್ರೀಯ ತಾಂತ್ರಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿ ಗಳು ಕೇವಲ ತೇರ್ಗಡೆ ಹೊಂದಿದರಷ್ಟೇ ಸಾಲದು, ಅದರಲ್ಲಿ ಗುಣಮಟ್ಟದ ಸಾಧನೆ ಮಾಡಿರಬೇಕು. ಕೌಶಲ್ಯವಿಲ್ಲದ ಪದವಿ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪ್ರಯೋ ಜನಕ್ಕೆ ಬಾರದಂತಾಗುತ್ತದೆ. ಕಳೆದೊಂದು ದಶಕದಿಂದ ತಾಂತ್ರಿಕತೆ ಅಭಿವೃದ್ಧಿ ಹೊಂದು ತ್ತಿದ್ದು, ಅದಕ್ಕೆ ತಕ್ಕಂತೆ ಬೌದ್ಧಿಕ ಬೆಳವಣಿಗೆ ಯೂ ಆಗಬೇಕು. ಇದರಿಂದ ಜೀವನದ ಗುಣ ಮಟ್ಟವೂ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಹೊಸ ಆವಿಷ್ಕಾರಗಳ ಮೂಲಕ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಕಲಿಕೆಗೆ ವಿಶಾಲ ಹಂದರವಿದ್ದು ಅದರ ಬಳಕೆಯಾಗ ಬೇಕು. ಸರಕಾರಿ ಇಲ್ಲವೇ ಖಾಸಗಿ ಉದ್ಯೋಗಿ ಗಳಾಗುವ ನಿಟ್ಟಿನಲ್ಲಿ ಮಾತ್ರ ಚಿಂತಿಸದೆ ನೀವೇ ಸ್ವತಂತ್ರವಾಗಿ ಉದ್ದಿಮೆಗಳನ್ನು ಪ್ರಾರಂಭಿ ಸುವ ನಿಟ್ಟಿನಲ್ಲಿ ಮುಂದಾಗಬೇಕು. ಇದರಿಂದ ದೇಶದ ಪ್ರಗತಿಯನ್ನೂ ಕಾಣಬಹುದಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯ ರಿಂಗ್ ಪದವಿ ಮುಗಿಸಿ ಹೊರಬರುತ್ತಿದ್ದರೂ ಕೌಶಲ್ಯ ಹೊಂದಿದ ಎಂಜಿನಿಯರುಗಳಿಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲವೆಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣದ ಗುಣಮಟ್ಟ ವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಪಾತ್ರ ಶಿಕ್ಷಕ ವೃಂದದ್ದಾಗಿರುತ್ತದೆ. ಎಂಜಿನಿ ಯರಿಂಗ್ ಕಾಲೇಜುಗಳಲ್ಲಿ ಕೇವಲ ಪಾಠ ಮಾಡಿಕೊಂಡು ಇರದೆ ಕೈಗಾರಿಕೆಗಳೊಂ ದಿಗೆ ನಿಕಟ ಸಂಪರ್ಕವಿಟ್ಟುಕೊಳ್ಳಬೇಕು. ಆಗ ಮಾತ್ರ ಕಾಲೇಜಿನ ಬೆಳವಣಿಗೆಯನ್ನು ಕಾಣಬಹುದು. ಹೊಸ ಆವಿಷ್ಕಾರಗಳಿಗೆ ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳ ಬೇಕು. ವಿಷಯಗಳನ್ನು ಮಂಡನೆ ಮಾಡು ವಾಗ ಮತ್ತೊಬ್ಬರ ಲೇಖನಗಳನ್ನು ನಕಲು ಮಾಡುವುದು ಬೇಡ. ಜೀವನದಲ್ಲಿ ಬದ್ಧತೆ ಯಿರಬೇಕೆಂದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತ ನಾಡಿ ಪ್ರಾಂಶುಪಾಲ ಡಾ.ಗೊಮ್ಮಟೇಶ ರಾವನವರ್, ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಗಳು ತಮ್ಮ ಪದವಿ ಪೂರ್ಣಗೊಳಿಸಿ ಹೊರಬರುತ್ತಿದ್ದರೂ ಒಂದು ಕಡೆ ಕೆಲಸ ವಿಲ್ಲದೆ ಪರಿತಪಿಸುತ್ತಿರುವುದು ಮತ್ತೊಂದು ಕಡೆ ಎಂಜಿನಿಯರುಗಳ ಕೊರತೆ ಕಾಡು ತ್ತಿರುವ ವೈರುಧ್ಯದಿಂದ ಹೊರಬರಬೇಕು. ಈ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಎಲ್ಲ ಕಾಲೇಜುಗಳ ಪ್ರಾಚಾರ್ಯರುಗಳ ಸಭೆ ಕರೆದಿದ್ದು, ಶಿಕ್ಷ ಣದಲ್ಲಿ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ವಿದ್ಯಾರ್ಥಿ ಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾ ಗುವುದು. ಕಾಲೇಜಿನಲ್ಲಿ ದೊರೆಯುವ ವೇದಿಕೆಗಳನ್ನು ಬಳಕೆ ಮಾಡಿಕೊಂಡು ಹೊಸ ಆವಿಷ್ಕಾರಗಳಿಗೆ ದಾರಿಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಯೊಂದು ವಿಭಾಗ ದಲ್ಲೂ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವ ಹಿಸುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆಯ ಗಣ್ಯರು ಪ್ರಶಸ್ತಿ ಪತ್ರಗಳನ್ನು ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆ ಯಲ್ಲಿ ಪಾಲ್ಗೊಂಡು ತಮ್ಮ ಬೌದ್ಧಿಕ ಮಟ್ಟದ ಪ್ರದರ್ಶನ ಮಾಡಿದರು. ಈ ಉತ್ಸವದ ಸಂಚಾ ಲಕರಾದ ಸಹಾಯಕ ಪ್ರಾಧ್ಯಾಪಕ ಎನ್. ಮಂಜುನಾಥ್, ಉಪಾಧ್ಯಕ್ಷ ಎಸ್.ಎನ್. ನಮಿತ್‍ಜೈನ್, ಕಾರ್ಯದರ್ಶಿ ಎಸ್.ಎ. ನೀತು ಮತ್ತು ಸಂಘಟನಾ ಕಾರ್ಯದರ್ಶಿ ಕೆ.ಅಮಿತ್ ಇದ್ದರು.