ಶ್ರೀರಾಮೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 4.80ಕೋಟಿ
ಹಾಸನ

ಶ್ರೀರಾಮೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 4.80ಕೋಟಿ

May 8, 2019

ರಾಮನಾಥಪುರ: ಇಲ್ಲಿಯ ಚತುರ್ಯುಗಮೂರ್ತಿ ಶ್ರೀರಾಮೇಶ್ವರಸ್ವಾಮಿ ದೇವಸ್ಥಾನವು ಶಿಥಿಲವಾಗಿದ್ದು, ದೇವಸ್ಥಾ ನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 4.80 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ಹೇಳಿದರು.

ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿ ರುವ ರಾಮೇಶ್ವರಸ್ವಾಮಿ ಮಹಾ ದಿವ್ಯ ರಥೋತ್ಸವದ ಪ್ರಯುಕ್ತ ವಿಶೇಷ ಪೂಜೆಯ ಅಂಗವಾಗಿ ಶಿವಲಿಂಗಕ್ಕೆ ರುದ್ರಾಭಿಷೇಕ, ಅಗಮಿಕ ಪೂಜೆ, ಶಾಂತೋತ್ಸವ, ಗಣ ಪತಿ ಪೂಜೆಯ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಮಾಡಿ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಬದುಕು ಕಾಣಲು ಸಾಧ್ಯ. ನಮ್ಮ ಹಿರಿಯರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಇಂತಹ ಪುಣ್ಯ ಕಾರ್ಯಗಳನ್ನು ಮಾಡಿ ಅವರ ತತ್ವ-ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿ ಸುವ ನಿಜವಾದ ಗೌರವ ಎಂದರು.

ಇಲ್ಲಿಯ ದೇವಸ್ಥಾನವು ಬಹಳ ಶಿಥಿಲ ವಾಗಿದ್ದು, ಮತ್ತೆ ದೇವಸ್ಥಾನದ ಅಭಿ ವೃದ್ಧಿಗೆ ಮೈಸೂರು ಪುರಾತತ್ವ ಇಲಾಖೆ ಯಿಂದ 4.80 ಕೋಟಿ ಸರ್ಕಾರದ ಮಂಜೂ ರಾತಿಗೆ ಹೋಗಿದೆ. ದೇವಸ್ಥಾನದ ಆವ ರಣದಲ್ಲಿ 25 ಸಾರ್ವಜನಿಕ ಶೌಚಾಲಯ ನಿರ್ಮಾಣವಾಗುತ್ತಿದೆ. ದೇವಸ್ಥಾನದ ರಸ್ತೆಗೆ 24ಲಕ್ಷ ರೂ. ವೆಚ್ಚದಡಿ ಸಿಮೆಂಟ್ ರಸ್ತೆ ಕೆಲಸ ಮುಗಿದಿದೆ. ಬಸವೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ದಲ್ಲಿ ಆರ್‍ಐಡಿಪಿ 22ರ ಯೋಜನೆಯಡಿ 49.95 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾಗಿರುವ 2 ಕೊಠಡಿಗಳು ಮತ್ತು ಶೌಚಾಲಯದ ಉದ್ಘಾಟನೆಯಾಗಿವೆ ಎಂದು ವಿವರಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ, ಸದಸ್ಯ ದಿವಾಕರ್, ಮಂಜುಳ ಮಹದೇವ್, ಮುಖಂಡರಾದ ಬಿ.ಸಿ.ವೀರೇಶ್, ಪ್ರಭು, ಸಿದ್ದಯ್ಯ, ಕೃಷ್ಣೇ ಗೌಡ, ಉಪ್ಪರಿಕೇಗೌಡ, ಚಿಕ್ಕಣ್ಣಶೆಟ್ಟಿ, ಕೇಶವ, ಮಹದೇವ್ ಮುಂತಾದವರು ಉಪಸ್ಥಿತರಿದ್ದರು.

Translate »