ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ
ಹಾಸನ

ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ

May 29, 2019

ಕಾರ್ಮಿಕ ದಿನಾಚರಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ

ಅರಸೀಕೆರೆ: ಶ್ರಮದಿಂದ ಮಾಡಿದ ಕಾಯಕಕ್ಕೆ ಒಂದಲ್ಲ ಒಂದು ದಿನ ಪ್ರತಿಫಲ ಸಿಗುತ್ತದೆ. ಅದೃಷ್ಟವನ್ನರಸಿ ಹೋಗುವುದಕ್ಕಿಂತ ನಮ್ಮ ಕೆಲಸ ಕಾರ್ಯ ಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದಲ್ಲಿ ಅದೃ ಷ್ಟವೇ ನಮ್ಮ ಬಳಿ ಬರುತ್ತದೆ ಎಂದು ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

ನಗರದ ಎಪಿಎಂಸಿ ಮಂಡಿ ವರ್ತಕರ ಸಂಘ ಮತ್ತು ಕಾರ್ಮಿಕರ ಸಂಘದ ಸಂಯು ಕ್ತಾಶ್ರಯದಲ್ಲಿ ನಗರದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾ ಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ 10 ಮಂದಿ ಮಾಡುವ ಕೆಲಸಗಳನ್ನು ಯಂತ್ರೋಪ ಕರಣಗಳು ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಬೆಳವಣಿಗೆ ಗಳಿಂದ ಕೂಲಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ದಿನದ 24 ಗಂಟೆಗಳ ಕಾಲ ಕಷ್ಟಪಟ್ಟು ದುಡಿಯುವ ಕಾರ್ಮಿಕನ ಶ್ರಮ ಮತ್ತು ಬೆವರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಎರಡು ಸವಾಲುಗಳನ್ನು ಕಾರ್ಮಿ ಕರು ಎದುರಿಸಿ ತಮ್ಮ ಬದುಕನ್ನು ರೂಪಿಸಿ ಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ರಾಜ್ಯ ಸರ್ಕಾರ ಕೈ ಜೋಡಿಸಿ ಕಾರ್ಮಿಕರ ಬದುಕಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದರು.

ಶ್ರಮಿಕ ವರ್ಗಕ್ಕೆ ಸೇರಿದ ರೈತರು ಮತ್ತು ಕೂಲಿ ಕಾರ್ಮಿಕರ ಬದುಕು ಹಸನಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಬಹು ಸಂಖ್ಯೆಯಲ್ಲಿರುವ ಈ ವರ್ಗದ ಜನತೆಯ ಜೀವನ ಮಟ್ಟ ಸುಧಾರಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿ ದ್ದರೂ, ಅವುಗಳು ಸಮರ್ಪಕವಾಗಿ ಫಲಾನು ಭವಿಗಳಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಆರ್ಹ ಫಲಾನುಭವಿ ಗಳನ್ನು ಗುರುತಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡಬೇಕು ಎಂದರು.

ವರ್ತಕರ ಸಂಘದ ಅಧ್ಯಕ್ಷ ಜಿ.ವಿ.ಟಿ ಬಸವರಾಜ್ ಮಾತನಾಡಿ, ಯಾವುದೇ ಕ್ಷೇತ್ರವಿರಬಹುದು ಆ ಕ್ಷೇತ್ರದ ಮಾಲೀಕನ ಹಿಂದೆ ಕಾರ್ಮಿಕನ ನಿಯತ್ತು ಮತ್ತು ಶ್ರಮ ವಿದ್ದರೆ ಮಾಲೀಕನ ಸಂಪತ್ತು ಇಮ್ಮಡಿ ಯಾಗುತ್ತದೆ. ಕಷ್ಟಪಟ್ಟು ಬೇವರು ಸುರಿಸಿ ದುಡಿದ ಕಾರ್ಮಿಕರ ಶ್ರಮವೇ ಮಾಲೀಕನ ಏಳಿಗೆ ಹಾಗೂ ಲಾಭಕ್ಕೆ ಕಾರಣ. ಕಾರ್ಮಿ ಕನ ಶ್ರಮಕ್ಕೆ ಮಾಲೀಕ ಅನ್ಯಾಯ ಮಾಡಿ ದರೆ ಅವನು ಗಳಿಸುವ ಲಾಭ ಮತ್ತು ಆಸ್ತಿ ಚಿರಕಾಲ ಉಳಿಯುವುದಿಲ್ಲ. ಕಾರ್ಮಿಕ ರನ್ನು ತಮ್ಮ ಕುಟುಂಬದವರಂತೆ ಕಾಣುವ ಮನಸ್ಥಿತಿ ಮಾಲೀಕರು ಹೊಂದಬೇಕು. ಅದೇ ರೀತಿ ಸರ್ಕಾರ ಕೂಡ ಕಾರ್ಮಿಕರ ಬದುಕು ಹಸನಾಗುವಂತಹ ಲೋಕ ಕಲ್ಯಾಣ ಕಾರ್ಯಕ್ರಮ ಜಾರಿಗೆ ತರುವು ದರ ಮೂಲಕ ಶ್ರಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದರು.

ಕಾರ್ಮಿಕ ಇಲಾಖೆ ನಿರೀಕ್ಷಕ ಪ್ರಭಾಕರ್ ಮಾತನಾಡಿ ಕೂಲಿ ಕಾರ್ಮಿಕರಿಗೆ ಜೀವ ವಿಮೆ, ವಸತಿ ಸೌಕರ್ಯ, ಆರೋಗ್ಯ, ಮದುವೆಗೆ ಸಹಾಯ ಧನ, ಅಂತ್ಯ ಸಂಸ್ಕಾ ರಕ್ಕೆ ಸಹಾಯಧನ, ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವು ಹೀಗೆ ಹಲವು ಯೋಜನೆಗಳನ್ನು ಸರ್ಕಾರವು ನೀಡಿದ್ದು ಇವುಗಳನ್ನು ಪಡೆಯಬೇಕಾದರೆ ಕಾರ್ಮಿಕರು ಇಲಾಖೆಯ ಕಚೇರಿಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿಯ ಅಧ್ಯಕ್ಷ ಜಯರಾಂ, ಕಾರ್ಯದರ್ಶಿ ಸಿದ್ಧರಾಜು, ನಗರಸಭೆಯ ಪೌರಾಯುಕ್ತ ಛಲಪತಿ ಮಾತನಾಡಿದರು. ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಂಗಸ್ವಾಮಿ, ಮಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ರವೀಂದ್ರ, ಉಪಾಧ್ಯಕ್ಷ ರಾಘ ವೇಂದ್ರ, ಕಾರ್ಯದರ್ಶಿ ಎಸ್. ಕುಮಾರ ಸ್ವಾಮಿ ಮತ್ತಿತರರಿದ್ದರು.

 

 

 

Translate »