ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ ರೂಪಿಸಿ
ಹಾಸನ

ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ ರೂಪಿಸಿ

June 5, 2019

ಜಿಪಂ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶ್ವೇತಾ ನಿರ್ದೇಶನ
ಹಾಸನ: ಜಿಲ್ಲೆಯಲ್ಲಿ ಸಂಯೋಜಿತ ಬೇಸಾಯದ ಮೂಲಕ ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾದ ತುರ್ತು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹೇಳಿದ್ದಾರೆ.

ಜಿಪಂನ ಹೊಯ್ಸಳ ಸಭಾಂಗಣದಲ್ಲಿ ಮಂಗಳ ವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೃಷಿ ಮತ್ತು ತೋಟಗಾರಿಕೆ ಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿ ಸಲು ರೈತರಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಿದೆ. ಅಲ್ಲದೇ ಕಾಲಕಾಲಕ್ಕೆ ಸೂಕ್ತ ಮಾರ್ಗ ದರ್ಶನ ನೀಡಿ ಅಗತ್ಯ ಸೌಲಭ್ಯ, ಪರಿಕರಗಳನ್ನೂ ವಿತರಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ವಿಮೆ ಯೋಜನೆ ಹೆಸರಿಗಷ್ಟೇ ಸೀಮಿತ ವಾಗಿದೆ. ಈ ಸವಲತ್ತು ನಿಜವಾಗಿಯೂ ರೈತರ ಸಂಕಷ್ಟ ಪರಿಹರಿಸುವಂತಿರಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಿ ರೈತರ ಪರವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ನೀರು-ಮೇವು: ಅನುದಾನಕ್ಕೇನೂ ಕೊರತೆ ಇಲ್ಲ ದಿದ್ದರೂ ನೀರಿನ ಸಮಸ್ಯೆ ಪೂರ್ಣ ಬಗೆಹರಿದಿಲ್ಲ ವೇಕೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಜಿಪಂ ಇಂಜಿನಿಯರಿಂಗ್ ವಿಭಾಗ ಇನ್ನಷ್ಟು ಶ್ರಮವಹಿಸಿ ಸಮಸ್ಯೆ ಇರುವ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಡಬೇಕಿದೆ. ಕೊರತೆ ಯಾಗದಂತೆ ಕುಡಿಯುವ ನೀರು ಪೂರೈಸÀಬೇಕಿದೆ ಎಂದು ನಿರ್ದೇಶನ ನೀಡಿದರು.
ಬರ ಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವೆÀಡೆ ಜಾನು ವಾರುಗಳ ಮೇವಿನ ಬ್ಯಾಂಕ್ ಸ್ಥಾಪಿಸಿ. ಮೇವಿನ ಬೀಜದ ಮಿನಿ ಕಿಟ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಿ ಎಂದೂ ಅವರು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಆರೋಗ್ಯ: ಜಿಲ್ಲೆಯಲ್ಲಿ ವೈದ್ಯಕೀಯ ಸೇವಾ ಸೌಲಭ್ಯಗಳಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ. ಕೇವಲ ಆಸ್ಪತ್ರೆ ಸ್ಥಾಪನೆಯಿಂದ ಪ್ರಯೋಜನವಾಗು ವುದಿಲ್ಲ. ಬದಲಿಗೆ ಅಲ್ಲಿಗೆ ಅಗತ್ಯ ಸಂಖ್ಯೆಯ ವೈದ್ಯರು, ನರ್ಸ್‍ಗಳ ನೇಮಕವಾಗಬೇಕು, ಔಷಧ ಪೂರೈಕೆಯಾಗ ಬೇಕು. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯು ವಂತಾಗಬೇಕು ಎಂದು ಜಿಪಂ ಅಧ್ಯಕ್ಷೆ ಆಶಿಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು. ಅಪರಿಚಿತರಿಗೆ ಯಾವುದೇ ಸಮಯದಲ್ಲೂ ಪ್ರವೇಶ ನೀಡಬಾರದು. ಹಾಸ್ಟೆಲ್‍ಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಬೇಕು. ತುರ್ತು ಸಂದರ್ಭದಲ್ಲಿ ಕರೆ ಮಾಡಲು/ಸ್ವೀಕರಿಸಲು ಸ್ಥಿರ ದೂರವಾಣಿ ವ್ಯವಸ್ಥೆ ಮಾಡಬೇಕು ಎಂದು ಹಾಸ್ಟೆಲ್ ವಿಚಾರದಲ್ಲಿ ಕೆಲವು ನಿರ್ಬಂಧಗಳನ್ನೂ ವಿಧಿಸಿದರು.

ಶಾಲೆಗಳಲ್ಲಿ ಶೀಘ್ರ ಪಠ್ಯ ಪುಸ್ತಕ ವಿತರಣೆಯಾಗಲಿ. ಗುಣಮಟ್ಟದ ಬೋಧನೆ ಮೂಲಕ ಈ ಬಾರಿಯೂ ಉತ್ತಮ ಫಲಿತಾಂಶ ಗಳಿಸಲು ಪ್ರೌಢ ಮತ್ತು ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಜಿಪಂ ಅಧ್ಯಕ್ಷೆ ಸೂಚನೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿ ಗಳಿಗೆ ಕೊರೆಸಿಕೊಟ್ಟಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಆದ್ಯತೆ ನೀಡಿ ಎಂದರು.
ಜಿಪಂ ಸಿಇಒ ಕೆ.ಎನ್.ವಿಜಯಪ್ರಕಾಶ್ ಮಾತ ನಾಡಿ, ಈವರೆಗೆ ಜಿಪಂನ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆಯಾದರೂ ಯೋಜನೆ ಗಳ ಅನುಷ್ಠಾನ ಸಕಾಲದಲ್ಲಾದರೆ ಅದರ ಪ್ರತಿಫಲ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇಲಾಖೆಗಳು ಒಟ್ಟಾರೆ ಸೇರಿ ಪರಸ್ಪರ ಸಮನ್ವಯತೆ ಯಿಂದ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕು, ಜಲ ಸಂವರ್ಧನೆ, ಜಲ ಮರುಪೂರ್ಣ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು, ಕಮಾನು ಅಣೆಕಟ್ಟೆಗಳು ಹೆಚ್ಚು ನಿರ್ಮಾಣವಾಗಿ ಕೃಷಿ, ಕುಡಿಯುವ ನೀರಿಗೆ ಹೆಚ್ಚಿನ ನೀರು ಲಭ್ಯವಾಗುವಂತಾಗ ಬೇಕು. ಅಂತರ್ಜಲ ಸಂರಕ್ಷಣೆಗೆ ಆದÀ್ಯತೆ ನೀಡಬೇಕು. ಉದ್ಯೋಗ ಖಾತರಿ ಮತ್ತು ವಸತಿ ಯೋಜನೆಗಳ ಅನುಷ್ಠಾನ ಚುರುಕಾಗಬೇಕು. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಜಿಲ್ಲೆಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ವೈಜ್ಞಾನಿಕ ರೀತಿಯೇ ವಿಲೇವಾರಿಯಾಗಬೇಕು ಎಂದು ಸೂಚಿಸಿದರು.

ಗೈರಾದರೆ, ತಡವಾದರೆ ನೋಟೀಸ್
ಕೆಡಿಪಿ ಸಭೆಗಳಿಗೆ ಗೈರು ಹಾಜರಾಗುವ, ಸಮಯಕ್ಕೆ ಸರಿಯಾಗಿ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆಯೂ ಸಿಇಒಗೆ ಸೂಚನೆ ನೀಡಿದರು.

ರೈತರ ಸಾಲ ಮನ್ನಾ ಎಲ್ಲಿಗೆ ಬಂತು?
ಜಿಲ್ಲೆಯ ಅರ್ಹ ರೈತರೆಲ್ಲರಿಗೂ ಶೀಘ್ರವೇ ಸಾಲ ಮನ್ನಾ ಯೋಜನೆ ಸೌಲಭ್ಯ ತಲುಪುವಂತೆ ನೋಡಿ ಕೊಳ್ಳಿ ಎಂದು ಸಿಇಒ ಸೂಚಿಸಿದಾಗ, ಸಹಕಾರ ಇಲಾಖೆ ಅಧಿಕಾರಿಗಳ ಮಾಹಿತಿ ನೀಡಿದರು. ಜಿಲ್ಲೆ ಯಲ್ಲಿ 1.26 ಲಕ್ಷ ರೈತರಿಗೆ 504 ಕೋಟಿ ಸಾಲ ಮನ್ನವಾಗಿದೆ. ಆದರೆ, ಈವರೆಗೆ 348 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಉಳಿದ ರೈತರಿಗೂ ಸಾಲದ ಅವಧಿಗೆ ಅನುಗುಣವಾಗಿ ಶೀಘ್ರವೇ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ವಿವರಿಸಿದರು.

Translate »