ಕಂತೇನಹಳ್ಳಿ ಕೆರೆ ಈಗ ಹಂದಿಗಳ ಸಾಮ್ರಾಜ್ಯ..!
ಹಾಸನ

ಕಂತೇನಹಳ್ಳಿ ಕೆರೆ ಈಗ ಹಂದಿಗಳ ಸಾಮ್ರಾಜ್ಯ..!

June 11, 2019

ಬಿಡಾಡಿ ಪ್ರಾಣಿಗಳ ಸೆರೆಗೆ ಸಾರ್ವಜನಿಕರ ಒತ್ತಾಯ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮನವಿ
ಅರಸೀಕೆರೆ:  ನಗರದ ಕಂತೇನಹಳ್ಳಿ ಕೆರೆ ಅಂಗಳದಲ್ಲಿ ನಗರಸಭೆಯು ಉದ್ಯಾನವನವನ್ನು ನಿರ್ಮಿಸಿ ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರ ವಾಗಿದ್ದರೆ, ಮತ್ತೊಂದೆಡೆ ಈ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಕೆರೆ ಅಂಗ ಳವು ಹಂದಿ ಮತ್ತು ನಾಯಿಗಳ ನೆಚ್ಚಿನ ತಾಣವಾಗಿ ಕೆರೆ ನೀರನ್ನು ಕಲುಷಿತ ಗೊಳಿಸಿ ಕಾಲುದಾರಿಗಳಲ್ಲಿ ಅಡ್ಡಾ ದಿಡ್ಡಿ ಸಂಚರಿಸುತ್ತಿರುವುದು ವಾಯು ವಿಹಾರಿ ಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ನಗರದ ಕಂತೇನಹಳ್ಳಿ ಬಡಾವಣೆಯ ಕೆಲವು ರಸ್ತೆಗಳ ಕೊಳಚೆ ನೀರು ಚರಂಡಿ ಮೂಲಕ ಕೆರೆ ಅಂಗಳಕ್ಕೆ ನೇರವಾಗಿ ಬರು ತ್ತಿರುವುದರಿಂದ ಕೆರೆಯ ನೀರಿನ ಜೊತೆಗೆ ಈ ಕಲುಷಿತ ನೀರು ಸೇರಿ ಹಂದಿಗಳಿಗೆ ಆಶ್ರಯ ತಾಣವಾಗಿ ಬಿಟ್ಟಿದೆ. ಒಂದೆಡೆ ಸುಂದರ ಉದ್ಯಾನವನ ಮತ್ತೊಂದೆಡೆ ಕಲುಷಿತ ನೀರಿನಲ್ಲಿ ಹಂದಿಗಳ ಸಾಮ್ರಾಜ್ಯ. ಇದು ಉದ್ಯಾನವನ ಕಳೆಗುಂದುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಗಮನಹರಿಸಿ ಬಿಡಾಡಿ ಹಂದಿ ಗಳನ್ನು ಸೆರೆ ಹಿಡಿಯಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಬಿಡಾಡಿ ದನಗಳು, ಬೀದಿ ನಾಯಿಗಳು ಹಾಗೂ ಹಂದಿಗಳ ಹಾವಳಿ ನಗರದ ಜನತೆ ಗಷ್ಟೇ ಅಲ್ಲದೇ, ನಗರಸಭೆ ಆಡಳಿತಕ್ಕೂ ತಲೆನೋವಾಗಿದೆ. ಇವುಗಳನ್ನು ಸೆರೆ ಹಿಡಿ ಯುವ ಕಾರ್ಯಾಚರಣೆಗೆ ಮುಂದಾಗು ತ್ತಿದ್ದಂತೆ ದಿಢೀರನೇ ಪ್ರತ್ಯಕ್ಷರಾಗುವ ಪ್ರಾಣಿಗಳ ಮಾಲೀಕರು ನಗರಸಭೆಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದು ಸೆರೆ ಹಿಡಿದ ದನ ಹಾಗೂ ಹಂದಿಗಳನ್ನು ವಾಪಸ್ ನೀಡುವಂತೆ ಧಮಕಿ ಹಾಕುವ ಬೆಳವಣಿಗೆ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟುಮಾಡುತ್ತಿದೆ.

ಸಾಕು ಪ್ರಾಣಿಗಳನ್ನು ಬೀದಿಗೆ ಬಿಡು ವುದಿಲ್ಲ ಎಂದು ಪೊಳ್ಳು ಭರವಸೆ ನೀಡಿ ಹೋಗುವ ಕೆಲವರು, ಪುನಃ ಕೆಲ ದಿನ ಗಳ ಬಳಿಕ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟುಬಿಡುವುದು ಸಾಮಾನ್ಯವಾಗಿದೆ. ಇನ್ನಾದರೂ ಸಾಕು ಪ್ರಾಣಿಗಳ ಮಾಲೀ ಕರು ತಮ್ಮ ಜವಬ್ದಾರಿಯನ್ನು ಅರಿತು ಕೊಂಡು, ಕೆರೆ ನೀರು ಕಲುಷಿತಗೊಳ್ಳ ದಂತೆ ನೋಡಿಕೊಳ್ಳುವ ಜೊತೆಗೆ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟು ಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾ ಗಿದೆ. ಇಲ್ಲದಿದ್ದರೆ ಪರಿಸರ ಕಲುಷಿತ ಗೊಂಡು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ ಸಾಂಕ್ರಾ ಮಿಕ ರೋಗಗಳಿಗೂ ನಾಂದಿ ಆಡಲಿದೆ ಎಂಬ ಆತಂಕವನ್ನು ಸ್ಥಳೀಯ ಜನರು ವ್ಯಕ್ತಪಡಿಸುತ್ತಿದ್ದಾರೆ.

Translate »