* ಬಸವಾಪಟ್ಟಣ ಪಬ್ಲಿಕ್ ಶಾಲೆ ನಿರ್ವಹಣೆಗೆ 5 ಲಕ್ಷ ರೂ.
* ದುರಸ್ತಿಗಾಗಿ 22 ಲಕ್ಷ ರೂ.
ಬಸವಾಪಟ್ಟಣ: ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ. ಆ ಮೂಲಕ ಹಳ್ಳಿಗಾಡಿನ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಲು ಸಂಕಲ್ಪ ಮಾಡಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ಅರಕಲಗೂಡು ತಾಲೂ ಕಿನ ಬಸವಾಪಟ್ಟಣ ಗ್ರಾಮ ದಲ್ಲಿ ಎಲ್ಕೆಜಿ, 1ನೇ ತರಗತಿಯಿಂದ ದ್ವಿತೀಯ ಪಿಯುವರೆಗೂ ಒಂದೇ ನೆಲೆಯಲ್ಲಿ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಬುಧವಾರ ಉದ್ಘಾಟಿಸಿದ ಅವರು, ಗ್ರಾಮೀಣ ಶಾಲೆಗಳಿಗೆ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಸೇರುತ್ತಾರೆ. ಇಂಥ ಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಕೊರತೆಯಾಗ ದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.
ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚು ಶ್ರಮ ಹಾಕಬೇಕು. ಪೆÇೀಷಕರೂ ಖಾಸಗಿ ಶಾಲೆಯ ಮೋಹ ಬಿಟ್ಟು ಸರ್ಕಾರ ಈ ಪಬ್ಲಿಕ್ ಶಾಲೆಗೇ ಮಕ್ಕಳನ್ನು ಸೇರಿಸಬೇಕು ಎಂದು ಗಮನ ಸೆಳೆದರು.
ಬಸವಾಪಟ್ಟಣದ ಪಬ್ಲಿಕ್ ಶಾಲೆಗೆ ನಿರ್ವಹಣಾ ವೆಚ್ಚಕ್ಕೆಂದು 5 ಲಕ್ಷ ರೂ, ದುರಸ್ತಿಗಾಗಿ 22 ಲಕ್ಷ ರೂ. ಸೇರಿ ಒಟ್ಟು 27 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಶಾಸಕರು ವಿವರಿಸಿದರು.
ತಾಪಂ ಉಪಾಧ್ಯಕ್ಷ ನಾಗರಾಜ್, ಸದಸ್ಯೆ ಮಮತಾ, ಗ್ರಾಪಂ ಅಧ್ಯಕ್ಷೆ ನಾಗರತ್ನ, ಡಿಡಿಪಿಐ ಮಂಜುನಾಥ್, ಡಯಟ್ ಉಪ ನಿರ್ದೇಶಕ ಪುಟ್ಟರಾಜು, ಬಿಇಒ ಶಿವನಂಜೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜೇಗೌಡ, ಸಿಡಿಸಿ ಉಪಾಧ್ಯಕ್ಷ ಮಹೇಶ್, ಪ್ರಾಂಶುಪಾಲ ದೇವರಾಜೇಗೌಡ, ಉಪನ್ಯಾಸಕರಾದ ಬಾಬುವರ್ಧನ್, ಜಗದೀಶ್ ಮತ್ತಿತರಿದ್ದರು.