ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ
ಹಾಸನ

ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ

June 24, 2019

ಪ್ರಚಾರ ಆಂದೋಲನ ವಾಹನಕ್ಕೆ ಬೇಲೂರಿನಲ್ಲಿ ಚಾಲನೆ
ಬೇಲೂರು: ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ತಂತ್ರಜ್ಞಾನದ ಫಲವನ್ನು ರೈತರ ಜಮೀನಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಮುತುವರ್ಜಿ ವಹಿಸಬೇಕು, ಕೃಷಿಕರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದು ಬೇಲೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೇಳಿದರು.

ಪಟ್ಟಣದ ನೆಹರು ನಗರದಲ್ಲಿನ ಕೃಷಿ ಇಲಾಖೆ ಕಚೇರಿ ಬಳಿ `ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ’ ಪ್ರಚಾರ ಆಂದೋಲನ ವಾಹನಕ್ಕೆ ಭಾನುವಾರ ಚಾಲನೆ ನೀಡಿದ ಅವರು, ರೈತರು ಬರಗಾಲ ಸ್ಥಿತಿಯಿಂದ ಬಹಳ ನೊಂದಿ ದ್ದಾರೆ. ಈ ವರ್ಷ ಉತ್ತಮ ಮಳೆ ಯಾಗಿದೆ. ಮುಂದೆಯೂ ಉತ್ತಮ ಮಳೆ ಯಾಗುವ ನಿರೀಕ್ಷೆ ಇದೆ. ಬೆಳೆ ಆಯ್ಕೆ, ಸೂಕ್ತ ತಳಿ ಬಿತ್ತನೆ ಬೀಜ, ರಸಗೊಬ್ಬರ ಬಳಕೆ, ಸಸ್ಯ ಸಂರಕ್ಷಣೆ ಸಂಬಂಧ ರೈತರಿಗೆ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಅಗತ್ಯ ಮಾಹಿತಿ ನೀಡಬೇಕು. ರೈತರು ಬೆಳೆನಷ್ಟ, ಬೆಲೆ ಕುಸಿತ ಮತ್ತಿತರ ಕಾರಣಗಳಿಂದಾಗಿ ಕೃಷಿ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಜಿಪಂ ಸದಸ್ಯೆ ಲತಾ ಮಂಜೇಶ್ವರಿ ಮಾತನಾಡಿ, ಇಲಾಖೆಯಿಂದ ದೊರೆ ಯುವ ಸಹಾಯ, ಸಮಗ್ರ ಕೃಷಿಯಿಂದ ರೈತರಿಗೆ ಸಿಗುವ ಆರ್ಥಿಕ ಅನುಕೂಲ ಗಳು, ಸಾವಯವ ಕೃಷಿ, ಬೆಳೆ ಸಂರಕ್ಷಣೆ, ಮಳೆ ನೀರಿನ ಸಂಗ್ರಹ ಮತ್ತು ಬಳಕೆ, ಮುಂಗಾರು ಹಂಗಾಮಿನಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳು, ಕೃಷಿ ಯಂತೋಪಕರಣಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ನೀಡುವ ಈ ಪ್ರಚಾರ ವಾಹನ ತಾಲೂಕಿನಲ್ಲಿ ಸಂಚಾರ ಆರಂಭಿಸಿದೆ. ಈ ಅಭಿಯಾನ ಕೇವಲ ಘೋಷಣೆಯಾಗದೇ ರೈತರಿಗೆ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ತಿಳಿಸಿದರು.

ಈ ಸಂದರ್ಭ ಜಿಪಂ ಸದಸ್ಯ ಸೈಯದ್ ತೌಫಿಕ್, ಸಹಾಯಕ ಕೃಷಿ ನಿರ್ದೇಶಕಿ ಕಾವ್ಯಶ್ರೀ, ತಾಪಂ ಸದಸ್ಯರಾದ ಮಂಜು ನಾಥ್, ಕಮಲ, ತಾಪಂ ಇಒ ಮಲ್ಲೇಶಪ್ಪ, ದೊಡ್ಡವೀರೇಗೌಡ, ಕೃಷಿ ಇಲಾಖೆ ಅಧಿಕಾರಿಗಳಾದ ರಕ್ಷಿತಾ, ಪ್ರಕಾಶ ಕುಮಾರ್, ಸಿಬ್ಬಂದಿ ಪ್ರಕಾಶ್, ಹೊನ್ನ ರಾಜು, ಶೃತಿ ಮತ್ತಿತರರಿದ್ದರು.

Translate »