ವೃತ್ತಿ ನೈಪುಣ್ಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಶ್ರೇಷ್ಠ
ಹಾಸನ

ವೃತ್ತಿ ನೈಪುಣ್ಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಶ್ರೇಷ್ಠ

June 27, 2019

ಅರಸೀಕೆರೆಯಲ್ಲಿ ಶ್ರೀ ಪಾಂಡುರಂಗ ಭಾವಸಾರ ಕ್ಷತ್ರಿಯ ಸಮುದಾಯ ಭವನ ಉದ್ಘಾಟಿಸಿ ಪ್ರಶಂಸಿಸಿದ ಶಾಸಕ ಕೆಎಂಶಿ
ಅರಸೀಕೆರೆ: ವೃತ್ತಿ ನೈಪುಣ್ಯ ದಿಂದ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಪಡೆದಿ ರುವ ಭಾವಸಾರ ಕ್ಷತ್ರಿಯ ಸಮಾಜದ ವರು, ಸ್ನೇಹ ಸದ್ಬಾವನೆಗಳಿಂದ ಸಹಬಾಳ್ವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವ ಲಿಂಗೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪಾಂಡುರಂಗ ದೇವಸ್ಥಾನದ ರಸ್ತೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜ ದಿಂದ ನೂತನವಾಗಿ ನಿರ್ಮಿಸಿದ ಶ್ರೀ ಪಾಂಡುರಂಗ ಭಾವಸಾರ ಕ್ಷತ್ರಿಯ ಸಮು ದಾಯ ಭವನವನ್ನು ಬುಧವಾರ ಉದ್ಘಾ ಟಿಸಿದ ಬಳಿಕ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಅನೇಕ ಸಮಾಜದವರು ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯ ವಾಗಿಲ್ಲದೇ ಇರುವುದು ವಿಪರ್ಯಾಸ. ಇದಕ್ಕೆ ಸಮಾಜದ ಸಂಘಟಿತ ಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎಂದರು. ಸರ್ಕಾರದಿಂದ ಸವಲತ್ತು ಪಡೆಯಬೇಕಾ ದರೆ ಸಮುದಾಯಗಳು ಸಂಘಟಿತವಾದಲ್ಲಿ ಮಾತ್ರ ಸಾಧ್ಯ ಎಂದು ಕಿವಿಮಾತು ಹೇಳಿದರು.

ಅಂತಹ ಹಿಂದುಳಿದ 32 ಸಮಾಜ ಗಳನ್ನು ಕ್ಷೇತ್ರದಲ್ಲಿ ಗುರುತಿಸಿದ್ದು, ಅವು ಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ನಡೆಸಿ ದ್ದೇನೆ. ಕ್ಷೇತ್ರದಲ್ಲಿ ಪ್ರತಿ ಸಮುದಾಯ ದವರಿಗೂ ಅವರದೇ ಆದಂತಹ ಭವನ ಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಸಹಕಾರ ನೀಡಲಾಗಿದೆ. ಇದರಿಂದ ಸಮಾಜದವರು ಸಂಘಟಿತರಾಗಿ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.

ಭಾವಸಾರ ಕ್ಷತ್ರಿಯ ಸಮಾಜದ ಅಧÀ್ಯಕ್ಷ ಸುಧೀರ್ ನವಿಲೆ ಮಾತನಾಡಿ, ದೇವರು ಮನುಷ್ಯನನ್ನು ಸೃಷ್ಟಿಸಿದರೆ, ಆತನನ್ನು ಸುಂದರವಾಗಿ ರೂಪಿಸಲು ಶ್ರಮಿಸಿದವರೇ ಭಾವಸಾರ ಕ್ಷತ್ರಿಯ ಸಮಾಜದವರು ಎಂಬುದನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅಂತಹ ಪವಿತ್ರ ವೃತ್ತಿ ಮೂಲಕ ಜೀವನೋಪಾಯ ಮಾಡುತ್ತಿದ್ದ ಸಮಾಜ ದವರು ಇಂದು ವಿವಿಧÀ ಕ್ಷೇತ್ರಗಳಲ್ಲಿ ದುಡಿ ಯುತ್ತಿದ್ದಾರೆ. ಇಂದಿಗೂ ಶೇ.28ರಷ್ಟು ಮಂದಿ ಟೈಲರಿಂಗ್ ವೃತ್ತಿಯನ್ನೇ ಮಾಡುತ್ತಾ ಅಸಂಘಟಿತರಾಗಿದ್ದಾರೆ. ಅವರನ್ನು ಸಂW Àಟಿತ ಶಕ್ತಿಯಾಗಿಸುವ ನಿಟ್ಟಿನಲ್ಲಿ 2 ವರ್ಷದ ಹಿಂದೆ ಬೆಂಗಳೂರು ಮಹಾನಗರದಲ್ಲಿ ಮಂಥನ ಕಾರ್ಯಕ್ರಮ ಆಯೋಜಿಸುವ ಮೂಲಕ ಎಲ್ಲಾ ಪಕ್ಷಗಳ ಮುಖಂಡರಿಗೂ ಸಮಾಜದ ಶಕ್ತಿಯ ಪ್ರದರ್ಶನ ಮಾಡಿ ದ್ದೇವೆ ಎಂದು ವಿವರಿಸಿದರು.

ಸಮಾಜದ ಸರ್ವಾಂಗೀಣ ಪ್ರಗತಿ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. ಹಾಗಾಗಿ ಸಮಾಜದ ವಿದ್ಯಾರ್ಥಿಗಳು ಐಎಎಸ್ ಮತ್ತು ಐಪಿಎಸ್ ಮಾಡಲು ಪೆÇ್ರೀತ್ಸಾಹ ನೀಡಲಾಗುತ್ತಿದೆ. ಮುಂದಿನ ತಿಂಗಳು ಸರ್ಕಾರಿ ಮತ್ತು ವಿವಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಮ್ಮಿಲನ ಸಮಾರಂಭ ಆಯೋಜಿಸಲಾಗುತ್ತಿದೆ ಎಂದರು. ದಾನಿಗಳಾದ ನವೀನ್‍ಕ್ಷೀರ ಸಾಗರೆ, ಚಂದರ್‍ರಾವ್, ಲಕ್ಷ್ಮಣ್ ಕ್ಷೀರ ಸಾಗರೆ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಭಾವಸಾರ ಕ್ಷತ್ರಿಯ ಸಮಾಜದ ಅಧÀ್ಯಕ್ಷ ಸಂಡಿಗೆ ಕೃಷ್ಣಮೂರ್ತಿ, ಕಾರ್ಯದರ್ಶಿ ನಾರಾಯಣರಾವ್, ನಗರಸಭೆ ಮಾಜಿ ಅಧÀ್ಯಕ್ಷ ಹಾಲಿ ಸದಸ್ಯ ಎಂ.ಸಮೀವುಲ್ಲಾ ಮಾತನಾಡಿದರು. ನಗರ ಯೋಜನಾ ಪ್ರಾಧಿ ಕಾರದ ಸದಸ್ಯ ಮೋಹನ್‍ಕುಮಾರ್, ಸುಬ್ರಮಣ್ಯಬಾಬು, ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ನಾರಾಯ ಣಪ್ಪ, ಇನ್ನಿತರರು ವೇದಿಕೆಯಲ್ಲಿದ್ದರು.

ಸಮಾರಂಭಕ್ಕೂ ಮುನ್ನ ನೊಣವಿನಕೆರೆ ಕಾಡುಸಿದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಮುದಾಯ ಭವನಕ್ಕೆ ಆಗಮಿಸಿ ಆಶೀರ್ವದಿಸಿದರು.

Translate »