ಹೊಸ ಬಸ್, ಮಿನಿ ಡಿಲಕ್ಸ್ಗೆ ಬೇಡಿಕೆ; ವೇಗದೂತ ಕಡಿಮೆ ನಿಲುಗಡೆಗೆ ಪ್ರಯಾಣಿಕರ ಒತ್ತಾಯ
ರಾಮನಾಥÀಪುರ,ಜು.7- ರಾಮನಾಥ ಪುರ ಬಸ್ ಡಿಪೊದಲ್ಲಿ ಹಳೆಯ ಬಸ್ ಗಳೇ ಇದ್ದು, ಈ ಭಾಗದ ಪ್ರಯಾಣಿಕ ರಿಗೆ ಬಸ್ ಪ್ರಯಾಣ ಬಹಳ ಕಷ್ಟಕರ ವಾಗಿದೆ. ಕೆಎಸ್ಆರ್ಟಿಸಿ ಅಧಿಕಾರಿಗಳು ಹೊಸ ಬಸ್ಗಳನ್ನು ಒದಗಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಬೆಟ್ಟಸೋಗೆ ಬಿ.ಪಿ.ವೀರೇಶ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿನ ಕೆಎಸ್ಆರ್ಟಿಸಿ ಡಿಪೋಗೆ ಭೇಟಿ ನೀಡಿದ ಅವರು, ಸದ್ಯ ವೇಗ ದೂತ ಬಸ್ಗಳು ರಾಮನಾಥಪುರ-ಹಾಸನ ಮಧ್ಯದ ಎಲ್ಲಾ ಗ್ರಾಮಗಳಲ್ಲೂ (20 ಕಡೆ) ನಿಲುಗಡೆಯಾಗುತ್ತಿವೆ. 50 ಕಿ.ಮೀ. ದೂರದ ಪ್ರಯಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ತುರ್ತಾಗಿ ಹಾಸನಕ್ಕೆ ಹೋಗಬೇಕಾದ ಪ್ರಯಾಣಿಕರಿಗೆ, ಜಿಲ್ಲಾಸ್ಪತ್ರೆಗೆ ತೆರಳುವ ರೋಗಿಗಳಿಗೆ ಬಹಳ ತೊಂದರೆಯಾಗು ತ್ತಿದೆ. ಹಾಗಾಗಿ ವೇಗದೂತ ಬಸ್ಗಳ ನಿಲುಗಡೆ ಸಂಖ್ಯೆಯನ್ನೂ ಕಡಿಮೆ ಮಾಡ ಬೇಕು ಎಂದು ಆಗ್ರಹಿಸಿದರು.
ರಾಮನಾಥಪುರದಿಂದ ಹಾಸನ, ಕುಶಾಲನಗರ, ಪಿರಿಯಾಪಟ್ಟಣ, ಸಾಲಿ ಗ್ರಾಮ, ಅರಕಲಗೂಡು, ಸೋಮವಾರ ಪೇಟೆ ಮೊದಲಾದೆಡೆಗೆ ಮಿನಿ ಡಿಲಕ್ಸ್ ಬಸ್ ಸಂಚಾರ ಆರಂಭಿಸಿ ಪ್ರಯಾಣಿಕ ರಿಗೆ ಅನುಕೂಲ ಮಾಡಿಕೊಡಬೇಕು ಎಂದೂ ಮನವಿ ಮಾಡಿದರು.
ಶೀಘ್ರ ಹೊಸ ಬಸ್: ಈ ವೇಳೆ, ಸುದ್ದಿ ಗಾರರ ಜತೆ ಮಾತನಾಡಿದ ಘಟಕದ ವ್ಯವಸ್ಥಾಪಕ ದೇವರಾಜೇಗೌಡ ಅವರು, ಡಿಪೋದಲ್ಲಿ ಕೆಲ ಬಸ್ಗಳು ದುಸ್ಥಿತಿಯಲ್ಲಿ ರುವುದು ನಿಜ. ಅವುಗಳಲ್ಲಿ ಕೆಲವು ಬಸ್ ಗಳನ್ನು ವಾಪಸ್ ಮಾಡಿದ್ದೇವೆ. ಹೊಸ ಬಸ್ಗಳು ಶೀಘ್ರವೇ ರಾಮನಾಥಪುರ ಘಟಕಕ್ಕೆ ಬರಲಿವೆ ಎಂದರು.
ಸದ್ಯ ಡಿಪೊದಲ್ಲಿರುವ ಬಸ್ಗಳು ಹಳ ತಾಗಿದ್ದರೂ ಮಾರ್ಗ ಮಧ್ಯೆ ತಾಂತ್ರಿಕ ದೋಷ ಬಾರದಂತೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ಬಹಳಷ್ಟು ರಸ್ತೆಗಳಲ್ಲಿ ಹಳ್ಳ ಗಲೇ ಹೆಚ್ಚಾಗಿದ್ದು, ಬಸ್ಗಳು ಬೇಗ ಹಾಳಾ ಗುತ್ತಿವೆ, ಅಪಘಾತಕ್ಕೂ ಕಾರಣವಾಗು ತ್ತಿವೆ. ಸದ್ಯ ಕ್ಷೇತ್ರದ ಶಾಸಕರ ಸೂಚನೆ ಮೇರೆಗೆ ಪಿಡಬ್ಲ್ಯುಡಿ ಅಧಿಕಾರಿಗಳು ರಸ್ತೆ ದುರಸ್ತಿಪಡಿಸುತ್ತಿರುವುದು ಆಶಾದಾಯಕ ವಾಗಿದೆ ಎಂದರು. ಡಿಪೋದಲ್ಲಿ 2 ಕೋಟಿ ವೆಚ್ಚದಲ್ಲಿ ಘಟಕದ ಬಿಲ್ಟಿಂಗ್, ಮೆಕ್ಯಾ ನಿಕ್ ಸ್ಟೋರ್ ರೂಂ ನಿರ್ಮಾಣ ಭರ ದಿಂದ ಸಾಗಿದೆ ಎಂದು ಹೇಳಿದರು.
ರಾ.ನಾ.ಪುರ ಘಟಕ
ಒಟ್ಟು ಬಸ್- 87
ಸಂಚರಿಸುವ ಬಸ್ – 85
ನಿತ್ಯ ಸಂಚಾರ- 32
(ಸಾವಿರ ಕಿ.ಮೀ.)
ಚಾಲಕ-ನಿರ್ವಾಹಕರು- 260
ಮೆಕ್ಯಾನಿಕ್ಸ್- 45
ಎಡಿಎಂ – 30
ತರಬೇತುದಾರರು – 30