ಸಿಂಹದ ಮರಿ. ಮಲ್ಲ, ಕಿರಣ್ಬೇಡಿಯಂಥ ಮಾಸ್ ಚಿತ್ರಗಳ ನಿರ್ಮಾಪಕ ರಾಮು ಅವರ ನಿರ್ಮಾಣದ `ಅರ್ಜುನ್ಗೌಡ` ಚಿತ್ರದಲ್ಲಿ ಪ್ರಜ್ವಲ್ದೇವರಾಜ್ ನಾಯಕನಾಗಿದ್ದು, ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕ ಅಭಿನಯದ ಸನ್ನಿವೇಶದ ಚಿತ್ರಿಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಗಿದಿದೆ. ಒಟ್ಟು 80 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು, ಡಬ್ಬಿಂಗ್ ಸಹ ಪೂರ್ಣವಾಗಿದ್ದು, ಚಿತ್ರ ಏಪ್ರಿಲ್ನಲ್ಲಿ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ ನಿರ್ದೇಶನ, ಜೈಆನಂದ್ ಛಾಯಾಗ್ರಹಣ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಇದೇ ಮೊದಲಬಾರಿಗೆ ಪ್ರಜ್ವಲ್ ಒಬ್ಬ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ತಿಮ್ಮೇಶ್ ಈ ಚಿತ್ರದ ನಾಯಕಿಯಾಗಿದ್ದು, ಸಾಧುಕೋಕಿಲ, ರಾಹುಲ್ದೇವ್, ಸ್ಪರ್ಷರೇಖ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
