ಮಂಡ್ಯ,ಮಾ.23(ನಾಗಯ್ಯ)-ಎಲ್ಲೆಡೆ ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ವೈರಸ್‍ನ್ನು ಮಂಡ್ಯ ಜಿಲ್ಲೆಯಲ್ಲಿಯೂ ಬರ ದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇಂದಿ ನಿಂದ ಒಂದು ವಾರ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಕೊವಿಡ್-19 ಸೋಂಕು ಹರಡುವಿಕೆ ತಡೆಗೆ ಈಗಾಗಲೆ ಸರ್ಕಾರ ಹಲವು ಮುನ್ನೆ ಚ್ಚರಿಕಾ ಕ್ರಮಕೈಗೊಂಡಿದೆ, ಶುಚಿತ್ವ,ಸ್ವಚ್ಚತಾ ಕ್ರಮಕೈಗೊಳ್ಳುವಂತೆಯೂ ತಿಳಿಸಿದ್ದರೂ ಸಹ ಜನತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಸಿಆರ್‍ಪಿಸಿ ಸೆ.144(3) ಮತ್ತು ಕರ್ನಾಟಕ ಎಪಿಡಿಕ್ ಡಿಸಿಸ್ ಕೋವಿದ್-19 ರೆಗ್ಯುಲೇಷನ್ 2020ರ ನಿಯಮ 20ರ ಮೇರೆಗೆ ತಕ್ಷಣ ದಿಂದಲೇ ಜಾರಿಗೆ ಬರುವಂತೆ ಇಂದಿನಿಂದ (ಮಾ.23 ರಿಂದ) ಮಾ.31ರ ಮಧ್ಯರಾತ್ರಿ ಯವರೆಗೂ ಷರತ್ತು ಬದ್ದ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
5ಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರ ಬಾರದು, ಸಾರ್ವಜನಿಕವಾಗಿ ಯಾವುದೇ ಸಮಾರಂಭದಲ್ಲಿ ಭಾಗವಹಿಸಬಾರದು, ಅತ್ಯವಶ್ಯಕ ವಸ್ತುಗಳ ವ್ಯಾಪ್ತಿಯಲ್ಲಿ ಬಾರದ ಎಲ್ಲಾ ಅಂಗಡಿ ಮುಂಗಟ್ಟುಗಳು,ವಾಣಿಜ್ಯ ಮಳಿಗೆಗಳನ್ನು ಮುಚ್ಚಬೇಕು, ಸಾರ್ವಜನಿಕ ಶಾಂತಿಗೆ ಭಂಗ ತರುವಂತ ಯಾವುದೇ ಚಟುವಟಿಕೆ ನಡೆಸಬಾರದು,ಗುಂಪು ಗುಂಪಾಗಿ ಆಡುವ ಜೂಜಾಟ ಇನ್ನಿತರೆ ಆಟವನ್ನಾಡಬಾರದು ಎಂದು ಜಿಲ್ಲಾಧಿ ಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶವು ಶವಸಂಸ್ಕಾರ ಮತ್ತು ಇನ್ನಿತರೆ ಸದುದ್ದೇಶ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಆದರೂ ಇಂತಹ ಸಂದರ್ಭದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳಬೇಕು,ಸಾಂಕ್ರಾಮಿಕ ರೋಗ ತಡೆÀಗಟ್ಟುವುದು ಮತ್ತು ಅರಿವು ಮೂಡಿ ಸಲು ತೊಡಗಿರುವ ಅಧಿಕಾರಿ/ಸಿಬ್ಬಂದಿ ಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮೈಸೂರು ಮಿತ್ರನಿಗೆ ಪ್ರತಿ ಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್,ಇತ್ತೀಚೆಗೆ ಇತರೆಕಡೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್‍ನ್ನು ಮಂಡ್ಯದ ಲ್ಲಿಯೂ ಬರದಂತಡ ತಡೆಯುವ ಉದ್ದೇಶ ದಿಂದ ಈ ಆದೇಶ ಮಾಡಲಾಗಿದೆ ಎಂದರು.
ಸಾರ್ವಜನಿಕವಾಗಿ ಜನರ ಆರೋಗ್ಯದ ಸಾಕಷ್ಟು ಮುಂಜಾಗೃತಾ ಕ್ರಮಕೈಗೊಳ್ಳ ಲಾಗಿದೆ, ಜಾಗೃತಿ ಮೂಡಿಸಲಾಗುತ್ತಿದೆ, ಆದರೂ ಸುಳ್ಳು ವದಂತಿಗಳು ಹೆಚ್ಚಾಗು ತ್ತಿವೆ, ಜನರಲ್ಲಿ ಕೊರೊನಾ ಭೀತಿ ಸೃಷ್ಠಿಸುವ ಕೆಲಸ ಕಿಡಿಗೇಡಿಗಳಿಂದ ನಡೆಯುತ್ತಿದೆ ಇದನ್ನು ತಡೆಯುವ ನಿಟ್ಟಿನಲ್ಲಿ ಅನಿವಾರ್ಯ ವಾಗಿ ಈ ಕಠಿಣದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಹೊರ ದೇಶ ಗಳಿಂದ ಬಂದಂತಹ 125 ಜನರನ್ನ ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ, ದಾಖ ಲಾಗಿದ್ದ ಮೂರು ಪ್ರಕರಣಗಳು ಕೂಡ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಅವರು ತಿಳಿಸಿದರು.
ಬೆಸಗರಹಳ್ಳಿಯಲ್ಲಿ 65ವರ್ಷದ ಒಬ್ಬ ವ್ಯಕ್ತಿ ಮೆಕ್ಕಾದಿಂದ ಬಂದಿದ್ದಾರೆ, ಆದರೆ ಅವರಿಗೆ ಯಾವುದೇ ಸೋಂಕು ಇಲ್ಲ ಯುರಿನಲ್ ಇನ್ಸ್‍ಪೆಕ್ಷನ್‍ನಿಂದ ಜ್ವರದಿಂದ ಬಳಲುತ್ತಿರುವುದನ್ನೇ ಕೊರೊನಾ ಎಂದು ಬಿಂಬಿಸಿ ಸಾರ್ವಜನಿಕರು ಈ ವ್ಯಕ್ತಿಯ ಬಗ್ಗೆ ಅನುಮಾನದಿಂದ ನೋಡಿದ್ದಲ್ಲದೆ ಸ್ಥಳೀಯ ಜನರಲ್ಲಿ ಭೀತಿ ಸೃಷ್ಠಿಸುವಂತಹ ವದಂತಿ ಹರಡಿದ್ದಾರೆ. ಸುದ್ದಿ ತಿಳಿದು ನಮ್ಮ ಇಲಾಖಾಧಿಕಾರಿಗಳು ಮುಂಜಾಗೃತ ಕ್ರಮವಾಗಿ ಮೆಕ್ಕಾದಿಂದ ಬಂದಿದ್ದ ವ್ಯಕ್ತಿ ಯನ್ನ ಕರೆತಂದು ಐಶುಲೇಷನ್‍ನಲ್ಲಿ ಇಡ ಲಾಗಿದೆ, ತಪಾಸಣೆ ನಡೆಸಿದಾಗ ಆತನಿಗೆ ಕೊರೊನಾದಂತಹ ಯಾವುದೇ ಸಮಸ್ಯೆ ಇಲ್ಲ ಎಂದರು.
ಸಾಮಾಜಿಕ ಜಾಲತಾಣದ ಹರಡುತ್ತಿ ರುವ ಸುಳ್ಳು ಸುದ್ದಿ ವಿಚಾರ ಕುರಿತು ಪ್ರತಿಕ್ರಿಯಿ ಸಿದ ಅವರು, ಸಾಮಾಜಿಕ ಜಾಲ ತಾಣದಲ್ಲಿ ಹಲವಾರು ಊಹಾಪೆÇೀಹ ಸುದ್ದಿಗಳನ್ನು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸ ಲಾಗುವುದು. ಪೆÇೀಲಿಸ್ ಅಧಿಕಾರಿಗಳಿಗೆ, ಮಾಧ್ಯಮದ ವರಿಗೆ ಅನವಶ್ಯಕವಾಗಿ ಕರೆ ಮಾಡಿ ತಪ್ಪು ಮಾಹಿತಿ ನೀಡಿದ್ದಲ್ಲಿ ಇದು ಶಿಕ್ಷರ್ಹ ಅಪರಾಧ ವಾಗಿರುತ್ತದೆ ಎಂದು ಅವರು ಎಚ್ಚರಿಸಿದರು.
4 ಕಡೆ ಚೆಕ್ ಪೆÇೀಸ್ಟ್ ಓಪನ್
ಯುಗಾದಿ ಹಬ್ಬದಂದು ತಮ್ಮ ತಮ್ಮ ಮನೆಯಲ್ಲಿ ಸರಳವಾಗಿ ಅಚರಣೆ ಮಾಡಿ. ಜಾಗರೂಕತೆಯ ಹಿತ ದೃಷ್ಟಿಯಿಂದ ಹೆಚ್ಚು ಜನ ಸೇರದೆ ಹಬ್ಬವನ್ನು ಆಚರಿಸಿಕೊಳ್ಳಿ. ಸಂಶಯದಿಂದ ಇರುವ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಶ್ರೀರಂಗಪಟ್ಟಣ, ನಿಡಘಟ್ಟ, ಬೆಳ್ಳೂರು, ದೇವಲಾಪುರ ಸೇರಿದಂತೆ 4 ಚೆಕ್ ಪೆÇೀಸ್ಟ್ ತೆರೆಯಲಾಗಿದೆ ಎಂದು ಅವರು ತಿಳಿಸಿದರು.
ಪೆÇಲೀಸರಿಂದ ಜಾಗೃತಿ ಜೊತೆಗೆ ಎಚ್ಚರಿಕೆ: ಕೋವಿಡ್-19 ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಬದಿಯ ಎಲ್ಲಾ ಅಂಗಡಿಗಳ ಬಂದ್‍ಗೆ ಸೂಚನೆ ನೀಡಿದೆ, 144 ಸೆಕ್ಷನ್ ಜಾರಿ ಬೆನ್ನಲ್ಲೇ ಪೆÇಲೀಸ್ ಇಲಾಖೆ ಪ್ರಮುಖ ವೃತ್ತಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು ಸಾರ್ವಜನಿರಕು ಸಹಕರಿಸುವಂತೆ ಮನವಿ ಮಾಡುತ್ತಿದ್ದುದು ಕಂಡು ಬಂತು.
ನಗರದಲ್ಲಿ ಸಂಚಾರಿ ಪೆÇಲೀಸರು ವಾಹನಗಳನ್ನು ನಿಲ್ಲಿಸಿ ಮುನ್ನೆಚ್ಚರಿಕೆ ಮಾಹಿತಿ ನೀಡಿದರು. ಮತ್ತೊಂದು ಕಡೆ ಪೆÇಲೀಸ್ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಕ್ ಮೂಲಕ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿದ್ದುದು ಕಂಡು ಬಂತು.