ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರ ವಿತರಿಸಿದ ಪಿಜಿ ಜನಸ್ಪಂದನಾ ಫೌಂಡೇಷನ್
ಮೈಸೂರು

ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರ ವಿತರಿಸಿದ ಪಿಜಿ ಜನಸ್ಪಂದನಾ ಫೌಂಡೇಷನ್

April 10, 2020

ಮೈಸೂರು, ಏ.9(ಆರ್‍ಕೆಬಿ)- ಪೌರ ಕಾರ್ಮಿಕರಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪಿಜಿ ಜನಸ್ಪಂದನಾ ಫೌಂಡೇಷನ್ ನಡೆಸಿತು.

ಫೌಂಡೇಷನ್ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಪೌರಕಾರ್ಮಿಕ ರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಅಗತ್ಯ ವಿರುವ ಮಾಸ್ಕ್, ಸ್ಯಾನಿಟೈಜûರ್, ನೀರು ತುಂಬುವ ಬಕೆಟ್, ಡೆಟಾಲ್ ಸೋಪ್, ನೀರಿನ ಬಾಟಲಿ, ತಿಂಡಿ ವಿತರಿಸಿದರು. ಪ್ರತಿದಿನ ಬೆಳಿಗ್ಗೆ 6.30 ಗಂಟೆಗೆ ಟೀ ಮತ್ತು ಸ್ವಚ್ಛ ನೀರು ನೀಡುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನಿರ್ದೇಶಕ ಗುರುಪ್ರಸಾದ್, ಸ್ಕಂದ, ಮುಖಂಡರಾದ ಹರೀಶ್‍ಗೌಡ, ದಿವಾಕರ್, ರೈಲ್ವೆ ಕೇಶವ ಇನ್ನಿತರರಿದ್ದರು.

Translate »