ದೆಹಲಿಯಲ್ಲಿ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಕೊರೊನಾ ಪಾಸಿಟಿವ್
ಮೈಸೂರು

ದೆಹಲಿಯಲ್ಲಿ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಕೊರೊನಾ ಪಾಸಿಟಿವ್

May 3, 2020

ನವದೆಹಲಿ,ಮೇ 2-ದೆಹಲಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಶನಿವಾರ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ದೆಹಲಿಯ ಕಪಶೇರಾ ಡಿಸಿ ಕಚೇರಿ ಸಮೀಪ ಇರುವ ತೆಕೆವಾಲಿ ಗಲ್ಲಿಯಲ್ಲಿರುವ ಕಟ್ಟಡವೊಂದರಲ್ಲಿ ಏಪ್ರಿಲ್ 19ರಂದು ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿತ್ತು. ಬಳಿಕ ಆ ಕಟ್ಟಡ ವನ್ನು ಸೀಲ್ ಮಾಡಲಾಗಿತ್ತು. ಇದೀಗ ಆ ಬಿಲ್ಲಿಂಗ್ ನಲ್ಲಿದ್ದ 41 ಮಂದಿಗೆ ಸೋಂಕು ತಗುಲಿದೆ ಎಂದು ದೆಹಲಿ ನೈರುತ್ಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ಇಂದು ಬೆಳಗ್ಗೆಯಷ್ಟೇ 1 ಜಿಲ್ಲೆಗಳು ರೆಡ್ ಜೋನ್ ನಲ್ಲಿದ್ದು, ಮೇ 17ರವರೆಗೆ ಲಾಕ್‍ಡೌನ್ ಮುಂದು ವರೆಯ ಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದರು. ನಿನ್ನೆ ಒಂದೇ ದಿನ 223 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,738ಕ್ಕೆ ಏರಿಕೆ ಯಾಗಿದೆ. 1,167 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Translate »