ಮೈಸೂರು, ಮೇ 10(ಆರ್‍ಕೆಬಿ)- ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಮೈಸೂರು ಜಿಲ್ಲಾಡಳಿತ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಚಾಮರಾಜ ಕ್ಷೇತ್ರ ಶಾಸಕ ಎಲ್. ನಾಗೇಂದ್ರ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಹೇಮ ರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಮಾ ಜಕ್ಕೆ ಒಳ್ಳೆಯ ವಿಚಾರಗಳನ್ನು ನೀಡಿದ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶವನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.
ಕಿತ್ತಳೆ ವಲಯದತ್ತ ಮೈಸೂರು: ದೇಶ ವನ್ನು ಕೊರೊನಾ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮೈಸೂರನ್ನು ಕೊರೊನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ನಗರಪಾಲಿಕೆ ಹಾಗೂ ಮುಡಾ ಆಯುಕ್ತರು, ವೈದ್ಯರು, ಪೊಲೀ ಸರು, ಆಶಾ ಕಾರ್ಯಕರ್ತೆಯರು ಶ್ರಮಿಸಿ ದ್ದಾರೆ. ಹಾಗಾಗಿ ಮೈಸೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದೆ ಎಂದರು.
ಜುಬಿಲಂಟ್ ಕಾರ್ಖಾನೆ ಮತ್ತು ತಬ್ಲಿಘಿ ಗಳಿಂದಾಗಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದವು. ಇದೀಗ ಜಿಲ್ಲೆಯಲ್ಲಿ ಎಲ್ಲಾ ಪ್ರಕರಣಗಳು ನೆಗೆಟಿವ್ ಆಗಿವೆ. 4 ಮಂದಿಯಷ್ಟೇ ಸದ್ಯ ಆಸ್ಪತ್ರೆಯಲ್ಲಿದ್ದು, 3-4 ದಿನದಲ್ಲಿ ಅವರೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೈಸೂರು ಕೊರೊನಾ ಮುಕ್ತ ವಾಗಲಿದೆ. ಬಳಿಕ ಕಿತ್ತಳೆ ವಲಯವಾಗುವ ಸಾಧ್ಯತೆಗಳಿವೆ ಎಂದರು. ಈ ಸಂದರ್ಭ ಹೇಮ ರೆಡ್ಡಿ ಮಲ್ಲಮ್ಮ ಬಳಗದ ಗೌರವಾಧ್ಯಕ್ಷ ಪರಮೇ ಶ್ವರಪ್ಪ, ಕನ್ನಡ-ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಇನ್ನಿತರರಿದ್ದರು.