ಇಂದು ಶಾಸಕ ರಾಮದಾಸ್‍ರಿಂದ ಜಾಗೃತಿ ಕಾರ್ಯಕ್ರಮ
ಮೈಸೂರು

ಇಂದು ಶಾಸಕ ರಾಮದಾಸ್‍ರಿಂದ ಜಾಗೃತಿ ಕಾರ್ಯಕ್ರಮ

May 14, 2020

ಮೈಸೂರು, ಮೇ 13- ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಘೋಷಿಸಿರುವ 1610 ಕೋಟಿ ರೂ.ಗಳ ಪ್ಯಾಕೇಜ್ ಪಡೆ ಯುವ ಬಗ್ಗೆ, `ಆರೋಗ್ಯ ಸೇತು’ ಆಪ್ ಡೌನ್‍ಲೋಡ್ ಮಾಡಿ ಕೊಳ್ಳುವುದು, ಪ್ರಧಾನ ಮಂತ್ರಿ ಕೇರ್ ಫಂಡ್ ಹಾಗೂ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಮರ್ಪಿಸುವ ಬಗ್ಗೆ ಶಾಸಕ ಎಸ್.ಎ. ರಾಮ ದಾಸ್ ನೇತೃತ್ವದಲ್ಲಿ ಕೆ.ಆರ್.ವಿಧಾನಸಭಾ ಕ್ಷೇತ್ರದಾದ್ಯಂತ ಮೇ 14ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಗ್ರಹಾರ ವೃತ್ತದಲ್ಲಿ ಬೆಳಿಗ್ಗೆ 9.45ಕ್ಕೆ ವಿಧ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗು ತ್ತಿದ್ದು, ಈ ಕಾರ್ಯಕ್ರಮದಲ್ಲಿ ವಿ-ಲೀಡ್ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯ, ಮೈಸೂರು ಮಹಾನಗರ ಸಂಘ ಸಂಚಾಲಕ ವಾಸುದೇವ ಭಟ್, ಮೈಸೂರು ಟ್ರಾವೆಲ್ಸ್ ಅಸೋಸಿ ಯೇಷನ್ ಗೌರವಾಧ್ಯಕ್ಷ ಪ್ರಶಾಂತ್, ಬಿಲ್ಡರ್ಸ್ ಅಸೋಸಿಯೇಷನ್‍ನ ಶ್ರೀಹರಿ, ಸಿಪಿಐನ ಮಾಜಿ ಅಧ್ಯಕ್ಷ ಭಾಸ್ಕರ್ ಕಳಲೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »