`ಸೇವಾಸಿಂಧು’ ಮಾಹಿತಿ, `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಅಭಿಯಾನಕ್ಕೆ ಚಾಲನೆ
ಮೈಸೂರು

`ಸೇವಾಸಿಂಧು’ ಮಾಹಿತಿ, `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಅಭಿಯಾನಕ್ಕೆ ಚಾಲನೆ

May 15, 2020

ಮೈಸೂರು, ಮೇ 14(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ 1610 ಕೋಟಿ ರೂ. ಆರ್ಥಿಕ ನೆರವಿನ ಪ್ಯಾಕೇಜ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್‍ನ ಸಹಾಯ ಧನವನ್ನು ಸಾರ್ವಜನಿಕರು ಪಡೆದುಕೊಳ್ಳುವ ಬಗೆ, ಕೊರೊನಾ ನಿಯಂತ್ರಣಕ್ಕಾಗಿ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಹಾಗೂ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಪರಿ ಹಾರ ನಿಧಿಗೆ ದೇಣಿಗೆ ನೀಡುವ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಅಭಿಯಾನಕ್ಕೆ ಗುರುವಾರ ಚಾಲನೆ ದೊರೆ ಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ವಿ-ಲೀಡ್ ಸಂಸ್ಥೆ ಸಂಸ್ಥಾಪಕ ಡಾ.ಬಾಲಸುಬ್ರ ಹ್ಮಣ್ಯಂ, ಆ್ಯಪ್ ಡೌನ್‍ಲೋಡ್ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಕೃಷ್ಣರಾಜ ಕ್ಷೇತ್ರದ 20 ಕಡೆ ಆ್ಯಪ್ ಡೌನ್ ಲೋಡ್ ಕೇಂದ್ರಗಳನ್ನು ತೆರೆಯಲಾಗಿದೆ. ಮೇ 31ರೊಳಗೆ 2 ಲಕ್ಷ ಜನರಿಗೆ ಆ್ಯಪ್ ಡೌನ್‍ಲೋಡ್ ಗುರಿ ಇಟ್ಟುಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಾಲಸುಬ್ರಹ್ಮಣ್ಯಂ, ಮೈಸೂರು ನಗರ ಸಂಘ ಚಾಲಕ ವಾಸುದೇವ್ ಭಟ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಸಿಐಐ ಮಾಜಿ ಅಧ್ಯಕ್ಷ ಭಾಸ್ಕರ್ ಕಳಲೆ, ಜಿಎಸ್‍ಎಸ್ ಸಂಸ್ಥಾಪಕ ಶ್ರೀಹರಿ ಇನ್ನಿತರರು, ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ `ಆರೋಗ್ಯ ಸೇತು’ ಆ್ಯಪ್ ಕುರಿತು ಮಾಹಿತಿ ನೀಡಿದರು. ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳು ವಂತೆ ಜಾಗೃತಿ ಮೂಡಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಕ್ಷೇತ್ರದಲ್ಲಿನ ಸೇವಾ ಕೇಂದ್ರಗಳಲ್ಲಿ ಜನರು ತಮ್ಮ ಮೊಬೈಲ್‍ಗಳಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಮುಖ್ಯ ಮಂತ್ರಿ ಘೋಷಿಸಿದ ವಿವಿಧ ಯೋಜನೆ ಗಳು ಮತ್ತು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು 4 ಇಂಟರ್‍ನೆಟ್ ಬ್ರೌಸಿಂಗ್ ಕೇಂದ್ರ ಗಳನ್ನು ತೆರೆಯಲಾಗಿದ್ದು, ಫಲಾನುಭವಿ ಗಳು ಇಲ್ಲಿ ತಮ್ಮ ಆಧಾರ್ ಕಾರ್ಡ್‍ನೊಂ ದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಟೋ, ಟ್ಯಾಕ್ಸಿ, ಕಟ್ಟಡ ಕಾರ್ಮಿಕರು, ಕ್ಷೌರಿಕ ವೃತ್ತಿಯವರು, ಸರ್ಕಾರದ `ಸೇವಾ ಸಿಂಧು’ ವೆಬ್‍ಸೈಟ್ ಮೂಲಕ ಸಂಬಂಧ ಪಟ್ಟ ದಾಖಲೆಗಳನ್ನು ಸಲ್ಲಿಸಿ ಸಹಾಯ ಧನ ಪಡೆಯಬಹುದು. ಅಗತ್ಯ ದಾಖಲೆ ಗಳ ಕುರಿತು ಅಭಿವೃದ್ಧಿ ನಿಗಮ, ಜಿಲ್ಲಾಡ ಳಿತದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದರು. ಮುಖ್ಯಮಂತ್ರಿ ಮತ್ತು ಪ್ರಧಾನಿ ಕೋವಿಡ್-19 ಪರಿಹಾರ ನಿಧಿಗೆ ಪ್ರತಿ ಯೊಬ್ಬರೂ ಕನಿಷ್ಠ 10 ರೂ. ದೇಣಿಗೆ ನೀಡುವಂತೆ ಜನರಿಗೆ ಅಭಿಯಾನದಲ್ಲಿ ಮನವಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ರಾದ ಬಿ.ವಿ.ಮಂಜುನಾಥ್, ಸೌಮ್ಯಾ, ಬಿಜೆಪಿ ಕೆಆರ್ ಕ್ಷೇತ್ರ ಅಧ್ಯಕ್ಷ ಎಂ.ವಡಿವೇಲು, ಉಪಾ ಧ್ಯಕ್ಷ ರವಿ ಇನ್ನಿತರರು ಉಪಸ್ಥಿತರಿದ್ದರು.

Translate »