ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ: ಸತತ 7ನೇ ದಿನ ಏರಿಕೆ
ಮೈಸೂರು

ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ: ಸತತ 7ನೇ ದಿನ ಏರಿಕೆ

June 14, 2020

ನವದೆಹಲಿ, ಜೂ.13- ಭಾರತೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತಷ್ಟು ಹೆಚ್ಚಳ ವಾಗಿದೆ. ಸತತ ಏಳನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಶನಿ ವಾರ (ಜೂನ್ 13) ಪೆಟ್ರೋಲ್ ಲೀಟರ್‍ಗೆ 59 ಪೈಸೆ ಏರಿಕೆ ಕಂಡಿದ್ದು, 75.16 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‍ಗೆ 58 ಪೈಸೆ ಹೆಚ್ಚಳವಾಗಿ 73.39 ರುಪಾಯಿ ದಾಖ ಲಾಗಿದೆ. ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ

ಇಂಧನ ದರ ಪರಿಷ್ಕರಣೆ ಪುನಾ ರಂಭಗೊಂಡಿತು. ಅಂದಿನಿಂದ ಸತತ 7ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ. 7 ದಿನಗಳಲ್ಲಿ ಪೆಟ್ರೋಲ್ ಬೆಲೆ 4.70 ರುಪಾಯಿ ಮತ್ತು ಡೀಸೆಲ್ ಬೆಲೆ 3.40 ರುಪಾಯಿ ಏರಿಕೆಯಾಗಿದೆ.

Translate »