ವೀರಯೋಧರಿಗೆ ಮೈಸೂರಿನ ವಿವಿಧೆಡೆ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ವೀರಯೋಧರಿಗೆ ಮೈಸೂರಿನ ವಿವಿಧೆಡೆ ಭಾವಪೂರ್ಣ ಶ್ರದ್ಧಾಂಜಲಿ

June 18, 2020

ಮೈಸೂರು, ಜೂ.17(ವೈಡಿಎಸ್, ಎಂಕೆ) – ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರ ತೀಯ ಸೈನಿಕರಿಗೆ ನಗರದ ವಿವಿಧೆಡೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೀರಮರಣ ಹೊಂದಿದ ಯೋಧರ ಭಾವ ಚಿತ್ರಗಳನ್ನು ಹಿಡಿದು ಜೈಕಾರ ಮೊಳಗಿಸಿ ನಮನ ಸಲ್ಲಿಸಲಾಯಿತು. ಚೀನಿಯರ ಕೃತ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಕೋಟೆ ಆಂಜನೇಯ ದೇವಸ್ಥಾನ: ಮೈಸೂರು ನಗರ ಬಿಜೆಪಿ ಯುವಮೋರ್ಚಾ ದಿಂದ ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಎದುರು ಭಾರತ-ಚೀನಾ ನಡುವೆ ನಡೆದ ಘರ್ಷಣೆ ಯಲ್ಲಿ ಹುತಾತ್ಮರಾದ ಸೈನಿಕರಿಗೆ ಮೇಣದ ದೀಪ ಬೆಳಗಿಸಿ, ಮೌನಾಚರಿಸಿ ಶ್ರದ್ಧಾಂ ಜಲಿ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮಾತನಾಡಿ, ಚೀನಾ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತಲೇ ಇದೆ. ನಮ್ಮದು ಶಾಂತಿ, ಸೌಹಾರ್ದಯುತ ರಾಷ್ಟ್ರ, ಇದೇ ರೀತಿ ಹಿಂದಿನಿಂದಲೂ ದೇಶದ ಹಲವು ಭಾಗ ಗಳನ್ನು ವಶಪಡಿಸಿಕೊಂಡಿದೆ. ಆದರೆ ಈಗಿ ರುವುದು 1962ರಲ್ಲಿದ್ದ ನೆಹರು ಭಾರತ ವಲ್ಲ, 2020ರ ನರೇಂದ್ರ ಮೋದಿ ಭಾರತ. ಎಲ್ಲ ವಿಧದಲ್ಲೂ ನಮ್ಮದು ಶಕ್ತಿಶಾಲಿ ರಾಷ್ಟ್ರ ಎಂದರು.

ಬಿಜೆಪಿ ನಗರ ಪ್ರಭಾರಿ ಮೈ.ವಿ.ರವಿ ಶಂಕರ್, ಬಿಜೆಪಿ ಯುವಮೋರ್ಚಾ ನಗರ ಅಧ್ಯಕ್ಷ ಎಂ.ಜೆ.ಕಿರಣ್‍ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಭರತ್, ಸಂತೋಷ್, ಉಪಾಧ್ಯಕ್ಷರಾದ ಕಾರ್ತಿಕ್, ಹರ್ಷ, ಮುಖಂಡರಾದ ಸಂದೀಪ್, ಚಂದ್ರಿಕಾ, ರುಕ್ಮಿಣಿ, ಸ್ವಪ್ನ, ತನುಜಾ ಮತ್ತಿತರರಿದ್ದರು.

ನ್ಯಾಯಾಲಯ ಮುಂಭಾಗ: ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲೆ ಯುವ ಮೋರ್ಚಾದಿಂದ ಹುತಾತ್ಮ ಯೋಧರಿಗೆ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಪ್ರಧಾನ ಕಾರ್ಯ ದರ್ಶಿ ನಂದೀಶ್, ಮಹೇಶ್, ಜಿಲ್ಲಾ ವಕ್ತಾರ ರಾದ ಡಾ.ಕೆ.ವಸಂತ್ ಕುಮಾರ್, ರಮೇಶ್, ಗೋಪಾಲ್‍ರಾವ್, ವಿಜಯಕುಮಾರ್, ಷಡಕ್ಷರಿ ಇನ್ನಿತರರಿದ್ದರು.

ಎಫ್‍ಟಿಎಸ್ ವೃತ್ತ: ಬಿಜೆಪಿ ನರಸಿಂಹ ರಾಜ ಕ್ಷೇತ್ರದ ಯುವಮೋರ್ಚಾ ವತಿ ಯಿಂದ ವೀರಯೋಧರಿಗೆ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಯುವಮೋರ್ಚಾ ಅಧ್ಯಕ್ಷ ಡಿ.ಲೋಹಿತ್, ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ, ಕ್ಷೇತ್ರದ ಅಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ, ವೇಲು, ಬಿಜೆಪಿ ಮುಖಂಡರಾದ ಗಿರಿಧರ್, ಮುರುಳಿ, ಮಂಜು, ನರಸಿಂಹ, ನಾಣಿ, ಆನಂದ್ ಮತ್ತಿತರರಿದ್ದರು.

ಬಿಸಿಲುಮಾರಮ್ಮ ವೃತ್ತ: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ(ನಗರ ಮಂಡಲ) ವತಿಯಿಂದ ಮೇಣದಬತ್ತಿ ಹಚ್ಚಿ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಮಂಡಲ ಅಧ್ಯಕ್ಷ ಬಿಎಂ ರಘು, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ. ರಾಜಮಣಿ, ಈರೇಗೌಡ, ಉಪಾಧ್ಯಕ್ಷ ರಾದ ವಿಜಯಾ ಮಂಜುನಾಥ್, ಅಮೃತ, ರಾಕೇಶ್ ಭಟ್, ಪ್ರತಾಪ್ ದಟ್ಟಗಳ್ಳಿ, ಕಾರ್ಯದರ್ಶಿ ರಮಾಬಾಯಿ, ಕಾರ್ತಿಕ್ ಗೌಡ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸ್ಟೀಫನ್ ಸುಜಿತ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಾಶ್ರೀ, ಹಿಂದು ಳಿದ ವರ್ಗಗಳ ಮೋರ್ಚಾದ ರಾಚಪ್ಪಾಜಿ, ಯುವ ಮೋರ್ಚಾದ ಸಾಗರ್‍ಸಿಂಗ್ ರಜಪೂತ್, ಮುಖಂಡರಾದ ಹೇಮಂತ್ ಗೌಡ, ರೇವಣ್ಣ, ಸಮೃದ್ಧಿ ಸುರೇಶ್, ಹೇಮಾ ಗಂಗಪ್ಪ, ಪೂರ್ಣಿಮಾ ಚಂದ್ರಪ್ಪ, ಗೀತಾ ಮಹೇಶ್, ಎಸ್ತರ್, ಪೂಜಾ, ಪದ್ಮ ಮತ್ತಿತರರು ಭಾಗವಹಿಸಿದ್ದರು.

ವಿಹಿಂಪ: ನಗರದ ಗಾಂಧಿ ಚೌಕದಲ್ಲಿ ಚೀನಾ ಬಾವುಟವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಸದಸ್ಯರು, ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭ ಮೈಕಾ ಪ್ರೇಮ್‍ಕುಮಾರ್, ಸುಪ್ರೀಂ ಕುಮಾರ್, ರಮೇಶ್, ಸಂಜಯ್, ರಾಜೇಂದ್ರ ಬಾಬು, ಪ್ರದೀಶ್ ಕುಮಾರ್, ಶೈಲಜಾ, ನಾಗ್ ಸುಂದರ್, ಮೀರಾಬಾಯಿ, ಜೀವನ್, ಪ್ರವೀಣ್, ಬಾಬು, ಲತಾ, ವನಿತಾ ಇದ್ದರು.

ಮೇಣದ ಬತ್ತಿ ಬೆಳಗಿಸಿದರು: ವೀರಮರಣ ಹೊಂದಿದ ಯೋಧರಿಗೆ ಕರ್ನಾಟಕ ಪ್ರಜಾ ಪಾರ್ಟಿ(ರೈತ ಪರ್ವ)ಯಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಬಿ.ಶಿವಣ್ಣ, ಉಪಾಧ್ಯಕ್ಷ ಎ.ಜಿ.ರಾಮಚಂದ್ರರಾವ್, ಖಜಾಂಚಿ ಬಿ.ಆದರ್ಶ್, ಮಾಧ್ಯಮ ವಕ್ತಾರ ಎಂ.ನಾರಾ ಯಣಸ್ವಾಮಿ, ಮೈಸೂರು ನಗರಾಧ್ಯಕ್ಷ ಹರೀಶ್ ಗೌಡ, ಮಹೇಶ್, ವಿನಿ, ರಾಕೇಶ್, ತಾರಾ, ಸೋಮೇಶ, ರಾಮಸ್ವಾಮಿ ಮತ್ತಿತರರಿದ್ದರು.

Translate »