ಅಧ್ವಾನವಾಗಿರುವ ಮೈಸೂರಿನ ನಂ.1 ಉದ್ಯಾನವನ!
ಮೈಸೂರು

ಅಧ್ವಾನವಾಗಿರುವ ಮೈಸೂರಿನ ನಂ.1 ಉದ್ಯಾನವನ!

June 28, 2020

ಮೈಸೂರು, ಜೂ.27(ಎಂಕೆ)- ಮೈಸೂ ರಿನಲ್ಲಿಯೇ ನಂ.1 ಉದ್ಯಾನವನ ಎಂದು ಕರೆಯಲ್ಪಡುವ ನಿವೇದಿತಾನಗರದ ಎನ್. ಆರ್.ಸುಬ್ಬರಾವ್ ಪಾರ್ಕ್ ಅವ್ಯವಸ್ಥೆ ಆಗರ ವಾಗಿದೆ. ಮೈಸೂರು ಮಹಾನಗರಪಾಲಿಕೆ ವಾರ್ಡ್ ನಂ.45ರ ವ್ಯಾಪ್ತಿಯ ಕಾಂತರಾಜ್ ಅರಸ್ ರಸ್ತೆ ಬದಿಯಲ್ಲಿರುವ ಪಾರ್ಕ್ ಇದಾಗಿದ್ದು, ಶಾರದಾದೇವಿನಗರ, ಜನತಾ ನಗರ, ಬೋಗಾದಿ, ಬೋಗಾದಿ 2ನೇ ಹಂತ, ಕುವೆಂಪುನಗರ, ರಾಮಕೃಷ್ಣನಗರ ನಿವಾಸಿಗಳ ನೆಚ್ಚಿನ ವಾಯುವಿಹಾರ ತಾಣವೂ ಇದಾಗಿದ್ದು, ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ.

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಪ್ರಥಮ ಬಹು ಮಾನ ಪಡೆಯುವ ಮೂಲಕ ನಗರದ ಅತ್ಯುತ್ತಮ ಉದ್ಯಾನವನ ಎಂಬ ಹೆಗ್ಗಳಿಕೆ ಯನ್ನು ಪಡೆದಿತ್ತು. ಸುಮಾರು 7 ಎಕರೆ ವಿಸ್ತೀರ್ಣವಿರುವ ಉದ್ಯಾನವನದಲ್ಲಿ ಮಕ್ಕಳ ಆಟಿಕೆ, ವ್ಯಾಯಾಮ, ಸಂಗೀತ ಕಾರಂಜಿ ಯನ್ನು ನಿರ್ಮಾಣ ಮಾಡಿದ್ದು, ಎಲ್ಲವೂ ಹಾಳಾಗಿವೆ ಎಂದು ಸ್ಥಳೀಯ ನಿವಾಸಿ ಗಳು ‘ಮೈಸೂರು ಮಿತ್ರ’ನಲ್ಲಿ ದೂರಿದ್ದಾರೆ.

ಉದ್ಯಾನವನದ ಮುಖ್ಯದ್ವಾರದಲ್ಲಿಯೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಿಲ್ಲ. ರೆಕಾ ರ್ಡಿಂಗ್ ವ್ಯವಸ್ಥೆಯಿಲ್ಲದಿರುವುದರಿಂದ ಪಾರ್ಕ್‍ಗೆ ಯಾರ್ಯಾರು ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಪಾರ್ಕ್ ಆವ ರಣದಲ್ಲಿ ಮೂರು ಸೈಕಲ್, ಒಂದು ಮೊಬೈಲ್ ಕಳ್ಳತನವಾಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಾರೆ.

ರೇಡಿಯೋ ಬರುತ್ತಿಲ್ಲ: ಬೆಳಗ್ಗೆ-ಸಂಜೆ ವಾಯುವಿಹಾರಕ್ಕೆ ಬರುತ್ತಿದ್ದವರ ಕಿವಿಗೆ ಇಂಪು ನೀಡುತ್ತಿದ್ದ ರೇಡಿಯೋ ಧ್ವನಿ ವರ್ಧಕಗಳು ಕೆಟ್ಟುನಿಂತು ಹತ್ತಾರು ತಿಂಗಳು ಗಳೇ ಕಳೆದಿವೆ. ಲಕ್ಷಾಂತರ ಹಣ ವ್ಯಯಿಸಿ ಪಾರ್ಕ್‍ನ ಅಲ್ಲಲ್ಲಿ ಬಲ್ಬ್‍ಗಳನ್ನು ಒಳಗೊಂಡ ಸ್ಪೀಕರ್‍ಗಳನ್ನು ಅಳವಡಿಸಲಾಗಿತ್ತು. ಆದರೆ ಕೆಲದಿನಗಳಲ್ಲೇ ಎಲ್ಲಾ ಸ್ಪೀಕರ್‍ಗಳು ಮುರಿದು ಬಿದ್ದಿವೆ. ಸ್ಪೀಕರ್ ಮತ್ತು ಬಲ್ಬ್‍ಗಳಿಗೆ ಅಳವಡಿ ಸಿದ್ದ ವೈಯರ್‍ಗಳು ಕಿತ್ತು ಹೋಗಿದ್ದು, ಅಕ ಸ್ಮಾತ್ ಯಾರಾದರೂ ಮುಟ್ಟಿದರೆ ಅನಾಹುತ ವಾಗುವುದಂತೂ ಗ್ಯಾರಂಟಿ ಎಂದು ಸ್ಥಳೀಯ ನಿವಾಸಿ ಮಂಚೇಗೌಡ ತಿಳಿಸಿದರು.

ಅಲ್ಲದೆ ಮಕ್ಕಳ ಆಟಿಕೆ, ವ್ಯಾಯಾಮ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಗಮ ನಿಸುವವರೇ ಇಲ್ಲದಂತಾಗಿದೆ. ನಿತ್ಯ ನೂರಾರು ಮಂದಿ ಮಹಿಳೆಯರು, ಹಿರಿಯ ನಾಗರಿಕರು ತಮ್ಮ ತಮ್ಮ ಮಕ್ಕಳನ್ನು ಕರೆತಂದು ಆಟವಾಡಲು ಬಿಡುತ್ತಾರೆ. ಅಲ್ಲದೆ ಹಲವು ವ್ಯಾಯಾಮ ಪರಿಕರ ಗಳನ್ನು ಬಳಸುತ್ತಾರೆ. ಕೂಡಲೇ ಸಂಬಂಧ ಪಟ್ಟ ಪಾಲಿಕೆಯವರು ಗಮನಹರಿಸ ಬೇಕು ಎಂದು ಒತ್ತಾಯಿಸಿದರು.

ತಿರುಗದ ಗಡಿಯಾರ: ಉದ್ಯಾನವನದ ಮಧ್ಯಭಾಗದಲ್ಲಿರುವ ಆಕರ್ಷಕ ಗಡಿ ಯಾರ ಕೆಟ್ಟುನಿಂತು ವರುಷಗಳೇ ಆದರೂ ಸರಿಪಡಿಸಲು ಸಾಧ್ಯವಾಗಿಲ್ಲ. ವಾಯು ವಿಹಾರಕ್ಕೆ ಬರುವ ಸ್ಥಳೀಯರೇ ಗಡಿ ಯಾರಕ್ಕೆ ಬ್ಯಾಟರಿಗಳನ್ನು ಹಾಕಲು ಪ್ರಯತ್ನಿಸಿದರೂ ಆಗಿಲ್ಲ. ನಗರಪಾಲಿಕೆ ಯವರ ನಿರ್ಲಕ್ಷ್ಯತೆ ಮತ್ತು ಅಸಡ್ಡೆ ಯಿಂದಾಗಿ ಸ್ವಚ್ಛತೆಯಲ್ಲಿ, ಸೌಂದರ್ಯ ದಲ್ಲಿ ನಂ.1 ಸ್ಥಾನ ಪಡೆದಿದ್ದ ಉದ್ಯಾನವನ ಹಾಳಾಗಿದೆ ಎಂದು ವಾಯುವಿಹಾರಿ ಬಸವರಾಜು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರ ಸ್ವತ್ತು ಎಂದರೆ ಹೀಗೆ ತಾನೇ. ಜನರ ತೆರಿಗೆ ದುಡ್ಡು ಬೇಕಾಬಿಟ್ಟಿ ಕಾಮಗಾರಿ. ಯಾರು ಕೇಳೋರು ಇಲ್ಲ ಎಂದರೆ ಎಲ್ಲಾ ಕಡೆಯಲ್ಲೂ ಇದೇ ರೀತಿ. ಜನರ ಕಷ್ಟ ಕೇಳದವರು ಜನಪ್ರತಿ ನಿಧಿಯಾಗಿ ಆಗಬಾರದು. ಎನ್.ಆರ್.ಸುಬ್ಬ ರಾವ್ ಪಾರ್ಕ್‍ನಲ್ಲಿ ಕಳಪೆ, ಅರ್ಧಂಬರ್ಧ ಕಾಮಗಾರಿಗಳೇ ಹೆಚ್ಚಾಗಿವೆ. ನಂ.1 ಪಾರ್ಕ್ ಎಂದು ಹೆಸರು ಪಡೆದಿದ್ದ ಉದ್ಯಾನವನ ಇಂದು ಹಾಳಾಗುತ್ತಿದೆ ಎಂದರು.

Translate »