ಮೈಸೂರು, ಜು.2(ಪಿಎಂ)- ಗುರುತಿಸ ಲಾಗದಂತಹ ಹೊಸ ರೋಗಕ್ಕೆ ತುತ್ತಾಗಿದ್ದ ವರ್ಜೀನಿಯಾ ತಂಬಾಕು ಬೆಳೆಯ ಮೇಲೆ `ರೋಗ ನಿರೋಧಕ ಶಕ್ತಿ’ ವೃದ್ಧಿಸುವ ಸಸ್ಯ ಟಾನಿಕ್ `ಫೈಟಾನ್-ಟಿ’ ಸಿಂಪಡಿಸುವ ಮೂಲಕ ಬೆಳೆ ಉಳಿಸುವಲ್ಲಿ ಯಶಸ್ವಿಯಾಗಿ ರುವುದಾಗಿ `ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ’ ಹೇಳಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷರೂ ಆದ ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆಗೆ ಗುರುತಿಸಲಾಗದ ಹೊಸ ರೋಗ ತಗುಲಿತ್ತು. ನಮ್ಮ ಪ್ರಯೋಗ ಅಲ್ಲಿನ ತಂಬಾಕು ಬೆಳೆಯನ್ನು ರೋಗ ಮುಕ್ತಗೊಳಿಸಲಾಗಿದೆ ಎಂದರು.
ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿ, ಸಾಲುಕೊಪ್ಪಲು, ಜೋಗನಹಳ್ಳಿ ಸುತ್ತಲ ಹಳ್ಳಿಗಳಲ್ಲಿ ಬೆಳೆದಿದ್ದ ತಂಬಾಕಿಗೆ ಗುರು ತಿಸಲಾಗದ ಹೊಸ ರೋಗ ತಗುಲಿತ್ತು. ಇದರಿಂದ ಎದೆಗುಂದಿದ ಕೆಲವು ರೈತರು ಇಡೀ ಬೆಳೆಯನ್ನೇ ನಾಶಗೊಳಿಸಲು ಮುಂದಾ ಗಿದ್ದರು. ಆ ವೇಳೆ ನಮ್ಮ ಪ್ರಯೋಗಕ್ಕೆ ಒಪ್ಪಿದ ಕೆಲವು ರೈತರ ಜಮೀನುಗಳಲ್ಲಿ ಸಸ್ಯಟಾನಿಕ್ ಅನ್ನು ಉಚಿತವಾಗಿ ಸಿಂಪಡಿಸಿ ತಂಬಾಕು ಬೆಳೆಯನ್ನು ರೋಗ ಮುಕ್ತಗೊಳಿಸಲಾಗಿದೆ ಎಂದರು. ತಂಬಾಕು ಬೆಳೆಯ ರೋಗ ಬಾಧೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಓದಿ ನಮ್ಮ ಸಂಘ, ಹೊಸ ರೋಗಕ್ಕೆ ಪರಿಹಾರ ಕಂಡು ಹಿಡಿಯಲು ಶ್ರಮಿಸಿತು. ಸಂಘದ ಸದಸ್ಯರೊಂದಿಗೆ ರೈತರ ಜಮೀನು ಗಳಿಗೆ ತೆರಳಿ ಮೊದಲಿಗೆ ಬೆಳೆ ಪರಿಶೀಲಿಸ ಲಾಯಿತು. ಬಳಿಕ ಸಂಘದ ಖರ್ಚಿನಲ್ಲಿಯೇ ಕೃಷಿ ವಿಜ್ಞಾನಿಗಳೊಂದಿಗೆ ಸೇರಿಕೊಂಡು ಚಿಕಿತ್ಸೆ ಪ್ರಾರಂಭಿಸಲಾಯಿತು. ಮೂರು ವಾರಗಳಲ್ಲಿಯೇ ಬೆಳೆ ಚೇತರಿಸಿಕೊಂಡು ರೋಗ ಮುಕ್ತಗೊಂಡಿತು. 15 ರೈತರು ಸಂಘದ ಸೇವಾ ಕಾರ್ಯ ಬಳಸಿಕೊಂಡಿದ್ದಾರೆ. ಈವ ರೆಗೆ 50 ಎಕರೆಗಳಲ್ಲಿ ಬೆಳೆದಿದ್ದ ತಂಬಾಕು ಬೆಳೆ ಉಳಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷೆ ಪ್ರೊ. ವಸಂತಮ್ಮ, ಪ್ರಧಾನ ಕಾರ್ಯದರ್ಶಿ ನಂದಿನಿ ಮೂರ್ತಿ, ಜಂಟಿ ಕಾರ್ಯದರ್ಶಿ ಸಪ್ನ, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಮೂರ್ತಿ ಚಮರಂ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.