ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಪ್ರಧಾನಿಗೂ ಗೌರವ ಕೊಟ್ಟವರಲ್ಲ!
ಮೈಸೂರು

ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಪ್ರಧಾನಿಗೂ ಗೌರವ ಕೊಟ್ಟವರಲ್ಲ!

July 5, 2020

ಮೈಸೂರು, ಜು.4(ಪಿಎಂ)- ಜನ ಸಾಮಾನ್ಯರ ನಡುವಿನಿಂದ ಎದ್ದು ಬಂದ ನರೇಂದ್ರ ಮೋದಿಯವರು ದೇಶದ ಪ್ರಪ್ರ ಥಮ ಅಹಿಂದ ಪ್ರಧಾನಿ. ಅವರ ಸಾಧನೆ ಏನಿದೆ? ಎಂದು ಟೀಕಿಸುವ ಕಾಂಗ್ರೆಸ್‍ನವರು, ತಮ್ಮದೇ ಪಕ್ಷದವರು ಪ್ರಧಾನಿ ಆಗಿದ್ದಾ ಗಲೂ ಗೌರವ ಕೊಟ್ಟವರಲ್ಲ ಎಂದು ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ಟೀಕಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ದ್ದವರು, ಮಲ್ಲಿಕಾರ್ಜುನ ಖರ್ಗೆ ಮುತ್ಸದ್ಧಿ ಎಂದು ಹೆಸರಾದವರು. ಜನತಂತ್ರ ವ್ಯವಸ್ಥೆ ಯಲ್ಲಿ ಜನಾದೇಶ ಪಡೆದ ಪ್ರಧಾನಮಂತ್ರಿಗೆ ಒಂದು ಘನತೆ ಇರುತ್ತದೆ. ಆದರೆ ಇವರು ಪ್ರಧಾನಿ ಮೋದಿ ಅವರ ಬಗ್ಗೆ ಬಲು ಹಗುರವಾಗಿ ಮಾತನಾಡುತ್ತಿದ್ದಾರೆ. ಈ ನಡೆ ಇವರಿಗೆ ಶೋಭೆಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ ಸಹಜ. ಆದರದು ಆರೋಗ್ಯಕರವಾಗಿರಬೇಕು. ಇವರಿಬ್ಬರ ಪದಪ್ರಯೋಗವನ್ನು ಜನ ಮೆಚ್ಚುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಚೀನಾ-ಭಾರತ ಯುದ್ಧ ಭೂಮಿ ಲಡಾಖ್‍ನಲ್ಲಿ ನಮ್ಮ ಯೋಧರಿಗೆ ಆತ್ಮಸ್ಥೈರ್ಯ ತುಂಬಿ ಭಾರತದ ಸಮಗ್ರತೆ ಹಾಗೂ ಏಕತೆ ಸಾರಿದ್ದಾರೆ. ಇದು ಭಾರ ತೀಯರೆಲ್ಲರೂ ಹೆಮ್ಮೆಪಡುವ ವಿಚಾರ. ಏಕೆಂದರೆ ದೇಶದ ಸೈನ್ಯಕ್ಕಿಂತ ಇಲ್ಲಿನ ಜನ ತಂತ್ರ ವ್ಯವಸ್ಥೆ ಬಗ್ಗೆ ಚೀನಾಕ್ಕೆ ಹೆಚ್ಚು ಭಯ ವಿದೆ. ಇಡೀ ದೇಶದ ಜನತೆ ಚೀನಾ ಎದು ರಿಸಲು ಒಟ್ಟಾಗಿದ್ದಾರೆ. ಅಂತಹ ವಾತಾವರಣ ವನ್ನು ದೇಶದ ಆಡಳಿತ ನಡೆಸುತ್ತಿರುವ ನಾಯಕರು ನಿರ್ಮಿಸಿದ್ದಾರೆ. ಆದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಸಿದ್ದರಾಮಯ್ಯ, ಖರ್ಗೆ ಬಹಳ ಲಘು ವಾಗಿ ಮಾತನಾಡಿದ್ದಾರೆ. ಇದನ್ನು ದೇಶದಲ್ಲಿ ಯಾರೂ ಸಹಿಸುವುದಿಲ್ಲ ಎಂದರು.

2001ಕ್ಕೂ ಮೊದಲು ಮೋದಿಯವರು ಏನೋ ಅಲ್ಲ, ನಿಜ. ನಂತರದಲ್ಲಿ ಗುಜ ರಾತ್ ಸಿಎಂ, ದೇಶದ ಪ್ರಧಾನಿ ಆಗಿದ್ದಾರೆ. ಅವರು ಬೆಳೆಯಲು ರಾಮಮಂದಿರ, ಧರ್ಮ ಪ್ರಸ್ತಾಪಿಸಲಿಲ್ಲ. `ಗುಜರಾತ್ ಮಾದರಿ’ ಪ್ರಸ್ತಾ ಪಿಸಿದರು. ಮೋದಿ ರಾಜಮನೆತನದವ ರಲ್ಲ, ದೊಡ್ಡ ಜಾತಿಯವರೂ ಅಲ್ಲ. ಜನರ ನಡುವಿನಿಂದ ಎದ್ದು ಬಂದವರು. ಅಂಥವ ರನ್ನು ಇವರು ಪ್ರಶ್ನಿಸುತ್ತಾರೆ, ಟೀಕಿಸುತ್ತಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಈ ಟೀಕಾಕಾರರ ಸಾಧನೆಯೇನು? ಎಂದು ಹರಿಹಾಯ್ದರು.

ದೇವರಾಜ ಅರಸು ಅವರನ್ನು ಮೋದಿ ಯವರಲ್ಲಿ ಕಾಣುತ್ತಿದ್ದೇನೆ. ಸಿದ್ದರಾಮಯ್ಯ ನವರು ಅಹಿಂದ ನಾಯಕರಾಗಿ ಮತ್ತೊಬ್ಬ ಅಹಿಂದ ಪ್ರಧಾನಿ ಮೋದಿಯವರನ್ನು ತೆಗಳುವುದು ಸರಿಯಲ್ಲ. ಜನ ಅದನ್ನೆಲ್ಲ ನೋಡುತ್ತಿದ್ದಾರೆ ಎಂದು ಎಚ್ಚರಿಸಿದರು.

ಈ ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಪ್ರಧಾನಿಗೂ ಗೌರವ ಕೊಟ್ಟಿಲ್ಲ. ಯಾರಿಗೆ ಹೇಗೆ ಗೌರವ ನೀಡಬೇಕು ಎಂಬು ದನ್ನು ಈ ಮುಖಂಡರು ಕಲಿತಿಲ್ಲ. ಅದ ರಿಂದಲೇ ಪದೇಪದೆ ಪೆಟ್ಟು ತಿನ್ನುತ್ತಿ ದ್ದಾರೆ. ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್, ಮನಮೋಹನ್ ಸಿಂಗ್ ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹಿರಿಯ ರಾಜಕಾರಣಿ ಶರದ್ ಪವಾರ್, ಮಾಯಾವತಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು, ನೀನಿನ್ನೂ ಎಳಸು, ದೇಶದ ಭದ್ರತೆ ವಿಚಾರದಲ್ಲಿ ಲಘುವಾಗಿ ಮಾತನಾಡಬೇಡ ಎಂದು ಕಿವಿಹಿಂಡಿದ್ದಾರೆ ಎಂದರು. `ಪಿಎಂ ಕೇರ್ ಫಂಡ್ ಹಣ ದುರ್ಬ ಳಕೆ ಮೋದಿ ಸಾಧನೆಯೇ? ಎಂದು ಸಿದ್ದ ರಾಮಯ್ಯ ಟೀಕಿಸಿದ್ದಾರಲ್ಲಾ’ ಎಂಬ ಪ್ರಶ್ನೆಗೆ, ಆ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ವೃಥಾ ಆರೋಪ ಸಲ್ಲ ಎಂದರು.

`ಬಾಂಬೆ ಡೇಸ್’ ಪುಸ್ತಕ ಬರೆಯುತ್ತಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎರಡೂ ಪಕ್ಷದ 17 ಶಾಸಕರು ಯಾಕಾಗಿ ಹೊರಬಂದರು ಎಂಬ ಸತ್ಯವನ್ನು ತಿಳಿಸಲಿ ದ್ದೇನೆ ಎಂದರು. ನನಗೆ ವಿಧಾನ ಪರಿಷತ್ ಸ್ಥಾನ ನೀಡಲು ಯಾವುದೇ ಕಾನೂನು ತೊಡಕಿಲ್ಲ. ಆ ಸ್ಥಾನ ಸಿಕ್ಕರೆ ನಾನು ಆಕಾ ಶಕ್ಕೂ ಏರಲ್ಲ. ಸಿಗದಿದ್ದರೆ ಪಾತಾಳಕ್ಕೂ ಕುಸಿಯಲ್ಲ. ವಿಶ್ವನಾಥ್ ವಿಶ್ವನಾಥನೇ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

Translate »