ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್-19 ತ್ವರಿತ ಪರೀಕ್ಷಾ ಘಟಕ ಆರಂಭ
ಮೈಸೂರು

ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್-19 ತ್ವರಿತ ಪರೀಕ್ಷಾ ಘಟಕ ಆರಂಭ

July 5, 2020

ಮೈಸೂರು, ಜು.4(ಆರ್‍ಕೆ)- ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಲ್ಯಾಬೊರೇಟರಿ ಯಲ್ಲಿ ಕೋವಿಡ್-19 ಸ್ವ್ಯಾಬ್ ತ್ವರಿತ ಪರೀಕ್ಷಾ ಘಟಕ ಗುರುವಾರದಿಂದ ಕಾರ್ಯಾರಂಭ ಮಾಡಿದೆ.

ಸರ್ಕಾರದಿಂದ ಒದಗಿಸಿರುವ ಎರಡು ಪರೀಕ್ಷಾ ಉಪಕರಣಗಳನ್ನು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಪ್ರಸ್ತುತ ಕೋವಿಡ್ ಸ್ವ್ಯಾಬ್ ಪರೀಕ್ಷೆ ಮಾಡು ತ್ತಿರುವ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಪ್ರಯೋಗಾಲಯದಲ್ಲಿ ಅಳ ವಡಿಸಿರುವ ಈ ಉಪಕರಣಗಳಲ್ಲಿ ಗರ್ಭಿಣಿಯರು, ತೀವ್ರ ಅನಾರೋಗ್ಯದ ತೊಂದರೆ ಇರುವವರ ಗಂಟಲು ದ್ರವ ವನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗು ವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇಲ್ಲಿನ ಪರೀಕ್ಷೆಯಿಂದ ಕೇವಲ ಒಂದೂ ವರೆ ಗಂಟೆಯೊಳಗೆ ಫಲಿತಾಂಶ ಬರುವು ದರಿಂದ ತುಂಬು ಗರ್ಭಿಣಿಯರಿಗೆ ಹೆರಿಗೆ ಆಗುವ ಮೊದಲೇ ಮತ್ತು ತೀವ್ರ ಅನಾ ರೋಗ್ಯದ ಸಮಸ್ಯೆ ಇರುವವರಿಗೂ ಕೊರೊನಾ ಸೋಂಕಿನ ಮಾಹಿತಿ ತ್ವರಿತ ವಾಗಿ ತಿಳಿಯುವುದರಿಂದ ಮಾರ್ಗಸೂಚಿ ಯಂತೆ ಪ್ರೋಟೋಕಾಲ್ ಪ್ರಕ್ರಿಯೆ ನಡೆ ಸಲು ಅನುಕೂಲವಾಗಲಿದೆ ಎಂದು ಅಭಿ ರಾಮ್ ಜಿ.ಶಂಕರ್ ತಿಳಿಸಿದರು.

ಕೇವಲ ತುರ್ತು ಪ್ರಕರಣಗಳ ಗಂಟಲು ದ್ರವವನ್ನು ಈ ಉಪಕರಣಗಳ ಮೂಲಕ ಪರೀಕ್ಷಿಸಲಾಗುವುದು. ಪ್ರಸ್ತುತ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆಗಳಲ್ಲಿ ಕೋವಿಡ್ ಶಂಕಿತ ಗಂಟಲು ದ್ರವದ ಪರೀಕ್ಷೆ ನಡೆ ಯುತ್ತಿದ್ದು, ಪ್ರಕರಣಗಳು ಹೆಚ್ಚಾಗುತ್ತಿದ್ದಂ ತೆಯೇ ಬೃಂದಾವನ ಬಡಾವಣೆಯಲ್ಲಿ ರುವ ಸರ್ಕಾರಿ ಆಯುರ್ವೇದ ಪಂಚಕರ್ಮ ಆಸ್ಪತ್ರೆಯಲ್ಲಿ ಸಿಎಫ್‍ಟಿಆರ್‍ಐ ವತಿಯಿಂದ ಆರಂಭವಾಗುವ ಲ್ಯಾಬೊರೇಟರಿಯಲ್ಲೂ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ. ನಂಜರಾಜ್, ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎನ್.ನಂಜುಂಡಸ್ವಾಮಿ, ಪಿಕೆಟಿಬಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವಿರೂಪಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಟಿಬಿ ಅಧಿಕಾರಿ ಡಾ.ಪಿ.ರವಿ, ಮೈಕ್ರೋಬಯಾಲಜಿ ವಿಭಾ ಗದ ಮುಖ್ಯಸ್ಥರು, ಪ್ರಾಧ್ಯಾಪಕರು ಈ ಸಂದರ್ಭ ಉಪಸ್ಥಿತರಿದ್ದರು.

Translate »