ಭಾರತದ ಸ್ಟೇಷನರಿ ಪದಾರ್ಥಗಳಿಗೆ ಹೆಚ್ಚಿದ ಬೇಡಿಕೆ
ಮೈಸೂರು

ಭಾರತದ ಸ್ಟೇಷನರಿ ಪದಾರ್ಥಗಳಿಗೆ ಹೆಚ್ಚಿದ ಬೇಡಿಕೆ

July 7, 2020

ಮೈಸೂರು, ಜು.6(ಎಸ್‍ಪಿಎನ್)-ಕಳೆದ ತಿಂಗಳು ಸಂಭವಿಸಿದ ಭಾರತ-ಚೀನಾ ಗಡಿ ಸಂಘರ್ಷದ ಬಿಸಿ ಮೈಸೂ ರಿನಲ್ಲಿ `ಮೇಡ್ ಇನ್ ಚೈನಾ’ ಸ್ಟೇಷನರಿ ಸಾಮಗ್ರಿಗಳ ಮಾರಾಟ ಮಾಡುತ್ತಿರುವ ವರ್ತಕರಿಗೂ ತಟ್ಟಿದೆ.

`ಕೀ’ ಚೈನ್, ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ರಬ್ಬರ್, ಆಕರ್ಷಣೀಯ ಪೆನ್, ಪೆನ್ಸಿಲ್ ಸೇರಿದಂತೆ ಇತರೆ ಸಾಮಗ್ರಿ ಗಳ ಖರೀದಿಗೂ ಮುನ್ನ `ಮೇಡ್ ಇನ್ ಚೈನಾ’ ಪ್ರಿಂಟ್ ನೋಡಿ ಗ್ರಾಹಕರು ವ್ಯವ ಹಾರ ನಡೆಸುತ್ತಿರುವುದು ಅಚ್ಚರಿ ಸಂಗತಿ ಎನ್ನುತ್ತಾರೆ ಖಾಸಗಿ ಸ್ಟೇಷನರಿ ಅಂಗಡಿ ಮಾಲೀಕ ಮದನ್‍ಲಾಲ್ ಪಟೇಲ್.

ಕಳೆದ 23 ವರ್ಷಗಳ ಹಿಂದೆ ರಾಜ ಸ್ತಾನದಿಂದ ಕರ್ನಾಟಕಕ್ಕೆ ಬಂದು ನೆಲಸಿ ದ್ದೇನೆ. ಅಂದಿನಿಂದ ಇಲ್ಲೇ ಸ್ಟೇಷನರಿ ವ್ಯವ ಹಾರ ನಡೆಸುತ್ತಿದ್ದೇನೆ. ಆದರೆ, ಕಳೆದ 10-15 ವರ್ಷಗಳಿಂದ ನಮ್ಮ ಅಂಗಡಿ ಯಲ್ಲಿ ಇತರೆ ಸ್ಟೇಷನರಿ ಜೊತೆಗೆ ಶೇ.95 ರಷ್ಟು `ಮೇಡ್ ಇನ್ ಚೈನಾ’ ಸ್ಟೇಷನರಿ ಸಾಮಗ್ರಿಗಳ ಮಾರಾಟ ಮಾಡುತ್ತಿದ್ದೆ. ಆಗ ಎಂದೂ ಚೀನಾ ಹಾಗೂ ಇಂಡಿಯಾ ಪ್ರಾಡಕ್ಟ್‍ಗಳ ಬಗ್ಗೆ ಗ್ರಾಹಕರು ವ್ಯತ್ಯಾಸ ನೋಡುತ್ತಿರಲಿಲ್ಲ. ಈಗ ನೋಡು ತ್ತಿದ್ದಾರೆ. ಕಳೆದೊಂದು ತಿಂಗಳಿಂದ ಚೈನಾ ವಿರುದ್ಧ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಳಿಂದ `ಮೇಡ್ ಇನ್ ಇಂಡಿಯಾ’ ಸಾಮಗ್ರಿ ಗಳ ಖರೀದಿಗೆ ಗ್ರಾಹಕರು ಮೊದಲ ಆದ್ಯತೆ ನೀಡುತ್ತಿದ್ದು, ಇಂತಹವರ ಸಂಖ್ಯೆ ಶೇ.25 ರಷ್ಟು ದಾಟಿದೆ. ಗ್ರಾಹಕರಲ್ಲಿನ ಈ ಬದಲಾವಣೆ ಯಿಂದ ನಾವು ಸಹ `ಮೇಡ್ ಇನ್ ಇಂಡಿಯಾ’ ಸ್ಟೇಷನರಿ ಸಾಮಗ್ರಿಗಳ ದಾಸ್ತಾನು ಹೆಚ್ಚಳ ಮಾಡಿದ್ದೇವೆ ಎಂದು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಅನಿವಾರ್ಯವಾಗಿದೆ ಇಂಡಿಯಾ ಪ್ರಾಡಕ್ಟ್: `ಮೇಡ್ ಇನ್ ಚೈನಾ’ ಪ್ರಾಡಕ್ಟ್‍ಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಮದು ಮಾಡಿ ಕೊಳ್ಳಲು ಪ್ರಮುಖ ಡೀಲರ್‍ಗಳು ಹಿಂದು-ಮುಂದೆ ನೋಡುತ್ತಿರುವುದ ರಿಂದ ಚೈನಾ ಪ್ರಾಡಕ್ಟ್‍ಗಳಿಗೆ ಬದಲಾಗಿ `ಮೇಡ್ ಇನ್ ಇಂಡಿಯಾ’ ಸ್ಟೇಷನರಿ ಸಾಮಗ್ರಿಗಳ ಮಾರಾಟ ಹೆಚ್ಚಿಸಬೇಕಾಗಿದೆ. `ಮೇಡ್ ಇನ್ ಇಂಡಿಯಾ’ ಪ್ರಾಡಕ್ಟ್‍ಗಳ ದರ ಕಂಪನಿಯಿಂದಲೇ ನಿಗದಿಯಾಗು ವುದರಿಂದ ನಾವು ಹೆಚ್ಚಿನ ಬೆಲೆಯನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಆದರೆ, `ಮೇಡ್ ಇನ್ ಚೈನಾ’ ಪ್ರಾಡಕ್ಟ್ ಗಳಲ್ಲಿ ದರ ಹಾಕದಿರುವುದು ನಮಗೆ ವ್ಯವಹಾರ ನಡೆಸಲು ಫ್ಲಸ್ ಪಾಯಿಂಟ್ ಆಗಿತ್ತು. ಲಾಭವೂ ಅಧಿಕವಾಗಿತ್ತು ಎಂದು ತಿಳಿಸಿದರು.

ಚೈನಾದಿಂದ ಆಮದು: ಕಳೆದ 10-15 ವರ್ಷಗಳಿಂದ ಶೇ.95 ರಷ್ಟು ಸ್ಟೇಷನರಿ ವಸ್ತುಗಳು ಚೈನಾದಿಂದ ಆಮದಾಗುತ್ತಿತ್ತು. ಆಗ ಈ ವಸ್ತುಗಳನ್ನು ಖರೀದಿಸಲು ಗ್ರಾಹ ಕರು ಯಾವುದೇ ತಕರಾರು ತೆಗೆಯದೇ ಖರೀದಿ ಮಾಡುತ್ತಿದ್ದರು. ಈಗ `ಮೇಡ್ ಇನ್ ಇಂಡಿಯಾ’ ಸ್ಟೇಷನರಿ ವಸ್ತುಗಳನ್ನು ಖರೀದಿಸಲು ಮೊದಲ ಆದ್ಯತೆ ನೀಡು ತ್ತಿರುವುದು ಗಮನಾರ್ಹ. `ಮೇಡ್ ಇನ್ ಇಂಡಿಯಾ’ ಹೆಸರಿನಲ್ಲಿ ತಯಾರಾಗುವ ಸಾಮಾಗ್ರಿಗಳತ್ತ ಗ್ರಾಹಕರನ್ನು ಸೆಳೆಯಲು ಇದು ಒಳ್ಳೆಯ ಸಮಯ. ಆದರೆ, ಚೈನಾದ ವಸ್ತುಗಳಿಗೆ ಪರ್ಯಾಯವಾಗಿ ಸ್ಟೇಷನರಿ ಸಾಮಾಗ್ರಿಗಳು ನಮ್ಮ ದೇಶದಲ್ಲಿ ತಯಾರಾಗುತ್ತಿಲ್ಲ. ಇದೇ ನಮ್ಮ ವ್ಯವಹಾರಕ್ಕೆ ಸ್ವಲ್ಪ ಹಿನ್ನಡೆ ಎನ್ನುತ್ತಾರೆ ಮದನ್‍ಲಾಲ್ ಪಟೇಲ್.

ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ: ಭಾರತ ಮತ್ತು ಚೀನಾ ಗಡಿ ವಿವಾದ ಆರಂಭವಾದಾಗಿನಿಂದ ಬಹು ತೇಕ ಗ್ರಾಹಕರು `ಮೇಡ್ ಇನ್ ಚೈನಾ’ ಸ್ಟೇಷನರಿ ಪ್ರಾಡಕ್ಟ್‍ಗಳನ್ನು ಕೊಳ್ಳಲು ಮುಂದಾಗುತ್ತಿಲ್ಲ. ಹಾಗಾಗಿ `ಮೇಡ್ ಇನ್ ಇಂಡಿಯಾ’ ಸ್ಟೇಷನರಿ ಸಾಮಗ್ರಿಗಳ ಮಾರಾಟ ಮಾಡುವುದು ಅನಿವಾರ್ಯ ವಾಗಿದೆ ಎನ್ನುತ್ತಾರೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಬೀದಿ ಬದಿ ವ್ಯಾಪಾರಿ ಸೈಯದ್ ಮಲ್ಲಿಕ್.

Translate »