ಕ್ವಾರಂಟೇನ್‍ಗೆ ಕಡಿಮೆ ದರದಲ್ಲಿ 3000 ಹೋಟೆಲ್ ಕೊಠಡಿ ಮೀಸಲು
ಮೈಸೂರು

ಕ್ವಾರಂಟೇನ್‍ಗೆ ಕಡಿಮೆ ದರದಲ್ಲಿ 3000 ಹೋಟೆಲ್ ಕೊಠಡಿ ಮೀಸಲು

August 5, 2020

ಮೈಸೂರು, ಆ.4(ಆರ್‍ಕೆಬಿ)- ಮೈಸೂರಿನಲ್ಲಿ ಕೋವಿಡ್-19 ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಮೈಸೂರು ಹೋಟೆಲ್ ಮಾಲೀಕರ ಸಂಘ ಮತ್ತು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕ್ಲಿನಿಕ್‍ಗಳ ಸಂಘ (ಮಹಾನ್) ಜಂಟಿಯಾಗಿ ಕೋವಿಡ್ ಕ್ವಾರಂ ಟೇನ್‍ಗಾಗಿ 3000 ಕೊಠಡಿಗಳನ್ನು ಮೀಸಲಿರಿಸಿವೆ.

ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕೃಷ್ಣಮೂರ್ತಿಪುರಂ ನಲ್ಲಿರುವ ತಮ್ಮ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. 3 ಸಾವಿರ ಕೊಠಡಿ ಮೀಸಲಿಡುವ ಸಂಬಂಧ ಹೋಟೆಲ್ ಮಾಲೀಕರ ಸಂಘ ಮತ್ತು ಮಹಾನ್ ಒಡಂಬಡಿಕೆ ಮಾಡಿಕೊಂಡಿವೆ. ಅದರಂತೆ ಒಂದು ವಾರದ ಅವಧಿಗೆ ಕ್ವಾರಂಟೇನ್‍ಗೆ ಒಳಪಡುವವರಿಗೆ ಕಡಿಮೆ ವೆಚ್ಚದಲ್ಲಿ ಊಟ, ವಸತಿ, ಚಿಕಿತ್ಸೆ, ಮಾತ್ರೆ, ಔಷಧಿ, ನರ್ಸ್ ಹಾಗೂ ವೈದ್ಯರ ಸೇವೆ ಒದಗಿಸಲಾಗುವುದು. ಒಂದು ದಿನಕ್ಕೆ ಮಧ್ಯಮ ವರ್ಗದ ಹೋಟೆಲ್‍ಗಳಲ್ಲಿ 4,000 ರೂ., ಸ್ಟಾರ್ ಹೋಟೆಲ್‍ಗಳಲ್ಲಿ 6,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಮಧ್ಯಮ ವರ್ಗದ ಹೋಟೆಲ್‍ಗಳಿಗೆ 8,000 ರೂ. ಮತ್ತು ಸ್ಟಾರ್ ಹೋಟೆಲ್‍ಗಳಿಗೆ 10,000 ದಿಂದ 12,000 ರೂ. ನಿಗದಿ ಪಡಿಸಿದೆ. ಆದರೆ ನಾವು ಮೈಸೂರಿನ ಜನರ ಆರೋಗ್ಯ ರಕ್ಷಣೆÀ ಹಿತದೃಷ್ಟಿಯಿಂದ ಸರ್ಕಾರ ನಿಗದಿ ಪಡಿಸಿದ ಶುಲ್ಕದಲ್ಲಿ ಅರ್ಧ ದರವನ್ನು ಪಡೆಯಲಿದ್ದೇವೆ. ಮೊದಲ ಹಂತದಲ್ಲಿ 10 ಮಧ್ಯಮ ವರ್ಗದ ಹೋಟೆಲ್‍ಗಳು ಹಾಗೂ ನಾಲ್ಕು ಸ್ಟಾರ್ ಹೋಟೆಲ್ ಗಳಲ್ಲಿ ಕೊಠಡಿಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು. `ಮಹಾನ್’ ಉಪಾಧ್ಯಕ್ಷ ಡಾ.ಜಿ.ಸಿದ್ದೇಶ್ ಮಾತನಾಡಿ, ಮನೆಯಲ್ಲಿ ಕ್ವಾರಂಟೇನ್ ಸಾಧ್ಯವಿಲ್ಲ ದವರಿಗೆ ಹೋಟೆಲ್‍ಗಳೇ ಕೋವಿಡ್ ಕೇರ್ ಸೆಂಟರ್ ಗಳಾಗಿವೆ. ಇಲ್ಲಿಯೂ ದಿನದ 24 ಗಂಟೆ ವೈದ್ಯರು, ನರ್ಸಿಂಗ್ ಸೇವೆ ದೊರೆಯುತ್ತದೆ. ಅಗತ್ಯ ನೋಡಿಕೊಂಡು ಹೋಟೆಲ್ ಕೊಠಡಿಗಳನ್ನು ಹಂತ ಹಂತವಾಗಿ ಹೆಚ್ಚಿಸಲಾಗು ವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರವೀಂದ್ರ ಭಟ್, ರಾಘವೇಂದ್ರ ತಂತ್ರಿ, ಹೋಟೆಲ್ ಮಾಲೀಕರ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ರವಿಶಾಸ್ತ್ರಿ, ಮಹಾನ್ ಕಾರ್ಯದರ್ಶಿ ಡಾ.ಹೆಚ್.ಆರ್.ಅಭಿಜಿತ್, ಜಂಟಿ ಕಾರ್ಯದರ್ಶಿ ಡಾ.ಬಸವರಾಜು ಉಪಸ್ಥಿತರಿದ್ದರು.

Translate »