ಶ್ರವಣ ದೋಷದ ಶ್ರೇಯಾಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.76 ಅಂಕ
ಮೈಸೂರು

ಶ್ರವಣ ದೋಷದ ಶ್ರೇಯಾಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.76 ಅಂಕ

August 12, 2020

ಮೈಸೂರು, ಆ.11(ಆರ್‍ಕೆಬಿ)- ಶ್ರವಣ ದೋಷವುಳ್ಳ ಬಾಲಕಿ ಶ್ರೇಯಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಸರಸ್ವತಿಪುರಂ ರೋಟರಿ ವೆಸ್ಟ್ ಶಾಲೆ ವಿದ್ಯಾರ್ಥಿನಿ ಶ್ರೇಯಾಗೆ ಹುಟ್ಟಿನಿಂದಲೇ ಶ್ರವಣದೋಷ. ಶಿಕ್ಷಕರು ಮಾಡಿದ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡು 480 ಅಂಕ ಗಳಿಸಿದ್ದಾಳೆ. ಕುಕ್ಕರಹಳ್ಳಿಯ ವಿಶ್ವನಾಥ್ -ರೂಪಾ ದಂಪತಿ ಪುತ್ರಿ ಶ್ರೇಯಾಗೆ ಮುಂದೆ ಕಾಮರ್ಸ್ ಪದವಿ ಪಡೆದು ಬಳಿಕ ಕೆಎಎಸ್, ಐಎಎಸ್ ಮಾಡುವ ಹಂಬಲವಿದೆ. ಪೋಷಕರು ಉತ್ತಮ ಬೆಂಬಲ ನೀಡುತ್ತಿದ್ದಾರೆ.

Translate »