ಮೈಸೂರಿನ ಸಂಶೋಧಕಿಗೆ ಕ್ವೀನ್ಸ್‍ಲ್ಯಾಂಡ್ ವಿವಿಯಿಂದ ಪಿಎಚ್.ಡಿ ಪದವಿ
ಮೈಸೂರು

ಮೈಸೂರಿನ ಸಂಶೋಧಕಿಗೆ ಕ್ವೀನ್ಸ್‍ಲ್ಯಾಂಡ್ ವಿವಿಯಿಂದ ಪಿಎಚ್.ಡಿ ಪದವಿ

August 13, 2020

ಮೈಸೂರು, ಆ. 12- ಮೈಸೂರಿನ ಸುಪ್ರಿತಾ ಪಾಲೆಯಂಡ ಪೊನ್ನಪ್ಪ ಅವರು ತತ್ವಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧವನ್ನು ಆಸ್ಟ್ರೇಲಿ ಯಾದ ಬ್ರಿಷ್‍ಬೇನ್‍ನಲ್ಲಿರುವ ಕ್ವೀನ್ಸ್‍ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯು ಮಾರ್ಚ್ 25 ರಂದು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ಅವರು `ಎಲೆಕ್ಟ್ರೋಮೆರಿಜೈಷನ್ ಸ್ಟಡೀಸ್ ಆಫ್ ಕಾಂಜುಗೆಟೆಡ್ ಮಾನೋಮರ್ಸ್ ಅಂಡ್ ದೆರ್ ಬಯೋಸೆನ್ಸಾರ್ ಅಪ್ಲಿಕೇಷನ್ಸ್’ ವಿಷಯದಲ್ಲಿ ಸಂಶೋ ಧನೆ ಪೂರ್ಣಗೊಳಿಸಿದ್ದರು. ಇದು ದೇಹದಲ್ಲಿನ ಪೆÇ್ರೀಟೀನ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ (ಕ್ಯಾನ್ಸರ್ ಮಾರಕ ಕೋಶಗಳು). ಸುಪ್ರೀತಾ ಪಾಲೆಯಂಡ ಪೊನ್ನಪ್ಪ ಅವರು 2019ರಲ್ಲಿ ಕ್ಯೂಯುಟಿಯಿಂದ ಹೈ ಅಚೀವರ್ ಹೆಚ್‍ಆರ್‍ಡಿ ಸ್ಟೂಡೆಂಟ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಇವರು ಎಸ್‍ಜೆಸಿಇ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ (ವಿಟಿಯು) ಎಂ.ಟೆಕ್‍ನಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದಾರೆ. ಅಲ್ಲದೆ, ಕ್ಯೂಯುಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರಶಾಂತ್ ಸೋನಾರ್ ಮತ್ತು ಆಸ್ಟ್ರೇಲಿಯಾದ ಗ್ರಿಫ್ತ್ ಯೂನಿವರ್ಸಿಟಿಯ ಹಿರಿಯ ಉಪನ್ಯಾಸಕರಾದ ಡಾ.ಮೊಹಮದ್ ಸಿದ್ದಿಖಿ ಮಾರ್ಗದರ್ಶನದಲ್ಲಿ ನ್ಯಾನೋ ಇಂಜಿನಿಯ ರಿಂಗ್ ಆಫ್ ಟೆಕ್ನಾಲಜಿ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಸುಪ್ರೀತಾ ಅವರು ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ ಹಾಗೂ ಹಿರಿಯ ವಕೀಲರಾದ ಪಾಲೆಯಂಡ ಪೊನ್ನಪ್ಪ ಮತ್ತು ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ ಭಾಗ್ಯವತಿ ದಂಪತಿ ಪುತ್ರಿ. ಅವರ ಪುತ್ರ ಪಾಲೆಯಂಡ ಪೊನ್ನಪ್ಪ ಸಂತೋಷ್ ಮೈಸೂರಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Translate »