ಮೈಸೂರಲ್ಲಿ ಸ್ವಯಂಪ್ರೇರಣೆ ಶಿಬಿರದಲ್ಲಿ 60 ಮಂದಿ ರಕ್ತದಾನ
ಮೈಸೂರು

ಮೈಸೂರಲ್ಲಿ ಸ್ವಯಂಪ್ರೇರಣೆ ಶಿಬಿರದಲ್ಲಿ 60 ಮಂದಿ ರಕ್ತದಾನ

January 21, 2021

ಮೈಸೂರು,ಜ.20(ಎಂಟಿವೈ)-ಮೈಸೂರಿನ ಗರುಡ ಮಾಲ್ ಸಭಾಂಗಣದಲ್ಲಿ ನಡೆದ ಸ್ವಯಂಪ್ರೇರಣೆಯ ರಕ್ತದಾನ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಪ್ರಶಂಸೆಗೆ ಪಾತ್ರರಾದರು. ಲಯನ್ಸ್ ಕ್ಲಬ್, ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೆರವಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ದೇವರಾಜ ಪೆÇೀಲಿಸ್ ಠಾಣೆ ಇನ್‍ಸ್ಪೆಕ್ಟರ್ ದಿವಾಕರ್ ಉದ್ಘಾಟಿಸಿ ದರು. ಬಳಿಕ ಮಾತನಾಡಿ, ಅಪಘಾತ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಸಕಾಲದಲ್ಲಿ ರಕ್ತ ಸಿಗದೇ ಪ್ರತಿವರ್ಷ ಹಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಿರಿ. ರಕ್ತದಾನ ಮಾಡುವುದ ರಿಂದ ಬಹಳಷ್ಟು ಪ್ರಯೋಜನಗಳಿವೆ ಎಂದರು. ಸೇಂಟ್ ಫಿಲೋ ಮಿನಾಸ್ ಕಾಲೇಜ್ ಆಡಳಿತಾಧಿಕಾರಿ ಡಾ.ಬರ್ನಾಡ್ ಪ್ರಕಾಶ್ ಬಾರ್ನೆಸ್ ರಕ್ತದಾನ ಮಾಡಿದರು. ಬಳಿಕ ಮಾತನಾಡಿ, ರಕ್ತದಾನ ಮಾಡುವುದರಿಂದ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಮಾನಸಿಕ ಆರೋಗ್ಯ ಪ್ರತಿಷ್ಠಾನದ ವರದಿ ಯಂತೆ ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಒತ್ತಡ ಕಡಿಮೆ ಆಗುತ್ತದೆ. ಭಾವನಾತ್ಮಕ ಆರೋಗ್ಯ ಸುಧಾರಣೆಯಾಗುತ್ತದೆ. ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕಲು ಸಹಾಯ ಮಾಡು ತ್ತದೆ. ಪ್ರತ್ಯೇಕತೆ ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ರಕ್ತದಾನ ದಿಂದ ನಿರ್ದಿಷ್ಟವಾಗಿ ಸಿಗುವ ಅನೇಕ ಆರೋಗ್ಯ ಪ್ರಯೋಜನಗಳ ಕುರಿತು ಹೆಚ್ಚಿನ ಪುರಾವೆ ಗಳನ್ನು ಸಂಶೋಧನೆಗಳು ನೀಡಿವೆ ಎಂದರು. ಶಿಬಿರದಲ್ಲಿ ಸೇಂಟ್ ಫಿಲೋಮಿನಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರೂತ್ ಶಾಂತಕುಮಾರಿ, ರೆಡ್‍ಕ್ರಾಸ್ ಸೊಸೈಟಿ ಕಾರ್ಯದರ್ಶಿ ಪೆÇ್ರ.ಮಹ ದೇವಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ತೇರಾಪಂತ್ ಯುವಕ ಪರಿಷತ್‍ನ ಆನಂದ್ ಮಂಡ್ಯೂತ್, ದೇವೇಂದ್ರ, ರಾಕೇಶ್, ರವಿಕುಮಾರ್ ಇತರರಿದ್ದರು.

 

 

 

Translate »