ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ
ಮೈಸೂರು

ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

April 6, 2021

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.

ಹರೀಶ್‍ಗೌಡ ಕರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ

ಮೈಸೂರು,ಏ.5(ಪಿಎಂ)- ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ಪಡೆದ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಳ್ಳಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಕರೆ ನೀಡಿ ದರು. ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿಡಿಸಿಸಿ ಬ್ಯಾಂಕ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಜನತಾನಗರ ಶಾಖೆ ವತಿಯಿಂದ ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದರು.

ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ನಿಂದ ಪಡೆದ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು. ಆ ಮೂಲಕ ಸಂಘದ ಸದಸ್ಯರು ತಮ್ಮ ಜೀವನ ನಿರ್ವಹಣೆಯಲ್ಲಿ ಸುಧಾರಣೆ ಕಾಣ ಬಹುದು. ಮಹಿಳಾ ಸಮುದಾಯ ಸಬಲ ವಾದರೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದರು. ಸಿರಿ ಮಹಿಳಾ ಸ್ವಸಹಾಯ ಸಂಘ, ದೃಷ್ಟಿ ಮಹಿಳಾ ಸ್ವಸಹಾಯ ಸಂಘಕ್ಕೆ ತಲಾ 10 ಲಕ್ಷ ರೂ. ಹಾಗೂ ಚಾಮುಂಡೇಶ್ವರಿ, ಧನ ಲಕ್ಷ್ಮೀ, ಶ್ರೀಬಾಲಗಂಗಾಧರ ನಾಥ ಸ್ವಾಮಿ ಮಹಿಳಾ ಸ್ವಸಹಾಯಗಳಿಗೆ ಒಟ್ಟು 7 ಲಕ್ಷ ರೂ. ಲಿಂಕೇಜ್ ಸಾಲಸೌಲಭ್ಯದ ಚೆಕ್‍ಗಳನ್ನು ಜಿ.ಡಿ.ಹರೀಶ್‍ಗೌಡ ವಿತರಣೆ ಮಾಡಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇ ಶಕ ಜನಾರ್ದನ್, ಪ್ರಧಾನ ವ್ಯವಸ್ಥಾಪಕ ಶಶಿ ಧರ್, ಶಾಖಾ ವ್ಯವಸ್ಥಾಪಕ ರಮೇಶ್, ಮೇಲ್ವಿ ಚಾರಕ ಸತೀಶ್ ಇತರರು ಹಾಜರಿದ್ದರು.

Translate »