ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬೀಳುತ್ತಾ ಶಾಶ್ವತ ಬ್ರೇಕ್..?
ಮಂಡ್ಯ

ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬೀಳುತ್ತಾ ಶಾಶ್ವತ ಬ್ರೇಕ್..?

July 12, 2021

ಮಂಡ್ಯ, ಜು.11- ಸದ್ಯ ಒಂದು ವಾರದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಅಕ್ರಮ ಗಣಿಗಾರಿಕೆ, ಕೆಆರ್‍ಎಸ್ ಬಿರುಕು ವಿಚಾರದಲ್ಲಿ ರಾಜ್ಯ ವ್ಯಾಪಿ ಸುದ್ದಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆಯಿಂದ ಹಿಡಿದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರತಿ ಹೇಳಿಕೆ, ಜೆಡಿಎಸ್ ಶಾಸಕರಿಂದ ಸುಮಲತಾಗೆ ತಿರುಗೇಟು ಸೇರಿದಂತೆ ದಿ.ಅಂಬರೀಷ್ ಅವರನ್ನು ಈ ವಿಚಾರಕ್ಕೆ ಎಳೆದು ತರುವವರೆಗೂ ನಡೆದಿದ್ದ ಮಾತಿನ ಭರಾಟೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿಯೇ ತೀರುತ್ತೇನೆ ಎಂಬ ಸಂಸದೆ ಸುಮಲತಾ ಹೋರಾಟದಿಂದ ಅಕ್ರಮ ಗಣಿಗಾರಿಕೆಗೆ ನಿಜಕ್ಕೂ ಶಾಶ್ವತ ಬ್ರೇಕ್ ಬೀಳುತ್ತಾ ಅನ್ನೋ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.

ಹೌದು, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಇಂದು ನಿನ್ನೆಯದಲ್ಲ. ಗಣಿ ಮಾಲೀಕರೇ ಹೇಳುವಂತೆ ಈ ಗಣಿ ಉದ್ಯಮ ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣವಾಗುವ ಮುಂಚೆ ಯಿಂದಲೂ ನಡೆಯುತ್ತಿದೆ. ಆದರೆ ಆರಂಭದಲ್ಲಿ ಕೆಲವರು ಅನುಮತಿ ಪಡೆದು ತಮ್ಮ ಸ್ವಂತ ಜಾಗ ಅಥವಾ ಭೋಗ್ಯದ ಜಾಗದಲ್ಲಿ ಗಣಿಗಾರಿಕೆ ಶುರು ಮಾಡಿದರೆ, ಇನ್ನು ಕೆಲವರು ಕೇವಲ ಅರ್ಧ ಎಕರೆ ಜಾಗಕ್ಕೆ ಅನು ಮತಿ ಪಡೆದು ಅದನ್ನು ಎಕರೆಗಟ್ಟಲೆ ವಿಸ್ತರಿಸಿ ಕೊಂಡರು. ಇನ್ನು ಕೆಲವರು ಯಾವ ಪರವಾನಗಿ ಪಡೆಯದೆ ಸರ್ಕಾರಕ್ಕೆ ವಂಚಿಸುತ್ತಾ ಅಕ್ರಮವಾಗಿ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದಾರೆ.

ಅನುಮತಿ ನೂರಕ್ಕೆ, ಗಣಿಗಾರಿಕೆ ಸಾವಿರಾರು: ಮಂಡ್ಯ ಜಿಲ್ಲೆಯಾದ್ಯಂತ ಸಾವಿರಾರು ಅಕ್ರಮ ಗಣಿಗಾರಿಕೆ ಪ್ರದೇಶಗಳಿದ್ದು, ಈ ಪೈಕಿ ಕೇವಲ ನೂರಾರು ಗಣಿಗಾರಿಕೆ ಪ್ರದೇಶಗಳಿಗೆ ಮಾತ್ರ ಅನು ಮತಿ ದೊರೆತು ಸಕ್ರಮವಾಗಿ ನಡೆಯುತ್ತಿವೆ. ಇನ್ನು ಳಿದ ಗಣಿ ಪ್ರದೇಶಗಳಿಗೆ ಯಾವ ಪರವಾನಗಿಯೂ ಇಲ್ಲ. ರಾಜಧನವನ್ನು ಕಟ್ಟುತ್ತಿಲ್ಲ. ಜಿಲ್ಲೆಯ ಶ್ರೀರಂಗ ಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್. ಪೇಟೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಪಾಂಡವ ಪುರ ಹಾಗೂ ಶ್ರೀರಂಗಪಟ್ಟಣದಲ್ಲಿ ಅಕ್ರಮ ಗಣಿ ಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿ ದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಸಂಸದೆ ಸುಮಲತಾ ಭೇಟಿ ಕೊಟ್ಟು ಬಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಸ್ವತಃ ಕೆಲ ಗಣಿ ಮಾಲೀಕರೇ ಒಪ್ಪಿಕೊಳ್ಳುತ್ತಾರೆ.

ಅಧಿಕಾರಿಗಳ ದಾಳಿಗೆ ಕ್ಯಾರೆ ಎನ್ನದ ಗಣಿಕಳ್ಳರು: ಶ್ರೀರಂಗಪಟ್ಟಣ, ಪಾಂಡವಪುರ ಭಾಗದಲ್ಲಿ ನಡೆಯು ತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತಲ ನಡೆಯುತ್ತಿರುವ ಗಣಿ ಗಾರಿಕೆ ಸ್ಥಳಕ್ಕೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಳು ಹಾಗೂ ಪೊಲೀಸರು ದಾಳಿ ನಡೆಸಿ, ಲಾರಿಗಳು, ಸ್ಫೋಟಕ ವಸ್ತುಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡು ಕ್ರಷರ್ ಬಂದ್ ಮಾಡಿ ಬಂದರೂ ಕೆಲವು ದಿನಗಳ ಕಾಲ ಸುಮ್ಮನಿದ್ದು, ಬಳಿಕ ಗಣಿ ಕಳ್ಳರು ಅಕ್ರಮ ಗಣಿಗಾರಿಕೆಯನ್ನು ಆರಂಭಿಸು ತ್ತಾರೆ. ಜೊತೆಗೆ ಪೊಲೀಸರು ಗಣಿಗಾರಿಕೆ ಪುನಾ ರಂಭಗೊಳ್ಳುವುದನ್ನು ಗಮನಿಸಿ, ಗಸ್ತು ತಿರುಗಲು ಶುರು ಮಾಡಿದರೂ ರಾತ್ರಿ ವೇಳೆ ಮಾತ್ರ ಗಣಿ ಗಾರಿಕೆ ನಡೆಸುವ ಅದೆಷ್ಟೋ ಕ್ರಷರ್‍ಗಳು ಶ್ರೀರಂಗ ಪಟ್ಟಣ ಹಾಗೂ ಪಾಂಡವಪುರದಲ್ಲಿವೆ.

ಅಕ್ರಮ ಗಣಿಗಾರಿಕೆ ನಿಲ್ಲಿಸಲೇಬೇಕೆಂದು ಪಣತೊಟ್ಟು ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲದಲ್ಲಿ ಸ್ಥಳೀಯ ತಹಸೀಲ್ದಾರ್‍ಗಳು, ಪೊಲೀಸರು ಅದೆಷ್ಟೇ ಕ್ರಮ ವಹಿಸಿದರೂ ಸಾಧ್ಯವಾಗಿಲ್ಲ. ಅದೆಷ್ಟೋ ಅಧಿ ಕಾರಿಗಳು ಅಕ್ರಮದ ವಿರುದ್ಧ ಸಮರ ಸಾರಿ ಯಶಸ್ವಿ ಯಾಗದೇ ಸುಮ್ಮನಾದದ್ದೂ ಇದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಾಗಮಂಗಲದಲ್ಲಿ ಅಕ್ರಮ ಗಣಿ ಗಾರಿಕೆ ತಡೆಯಲು ಹೋದ ಪೊಲೀಸ್ ಅಧಿಕಾರಿ ವಿರುದ್ಧ ಲಾರಿ ಹತ್ತಿಸಲು ಯತ್ನಿಸಿದ ಆತಂಕಕಾರಿ ಘಟನೆ ಸಹ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಗಣಿ ಸ್ಫೋಟದಿಂದ ಮನೆಗಳು ಬಿರುಕು: ಜಿಲ್ಲೆ ಯಲ್ಲಿ ಗಣಿಗಾರಿಕೆ ನಡೆಸಲು ಮುಕ್ತ ಅವಕಾಶ ವಿದೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಇರಬೇಕು. ಶಾಲೆ, ಮನೆಗಳು, ದೇವಾಲಯ, ಗ್ರಾಮ ಪ್ರದೇಶದ ಹೊರಗೆ ಹಾಗೂ ನದಿ, ಕೆರೆಗಳ ಆಸುಪಾಸಿನಲ್ಲಿ ಗಣಿಗಾರಿಕೆ ನಡೆಸಬಾರದು. ಜೊತೆಗೆ ಸೂಕ್ತವಾದ ರಾಜಧನ ಕಟ್ಟಬೇಕು. ಹೀಗಿದ್ದರೆ ಗಣಿ ಗಾರಿಕೆಯನ್ನು ನಡೆಸಿಕೊಂಡು ಹೋಗಬಹುದು. ಆದರೆ ಶ್ರೀರಂಗಪಟ್ಟಣ ತಾಲೂಕಿನ ರಾಗಿಮುದ್ದನ ಹಳ್ಳಿ, ಕೋಡಿಶೆಟ್ಟಿಪುರ, ಹಂಗರಹಳ್ಳಿ, ಚೆನ್ನನಕೆರೆ ಹಾಗೂ ಪಾಂಡವಪುರದ ಬೇಬಿಬೆಟ್ಟ ಸುತ್ತ ಮುತ್ತಲ ಪ್ರದೇಶದ ಅಕ್ರಮ ಗಣಿಗಾರಿಕೆಯಿಂದ ಅನೇಕ ಸಮಸ್ಯೆ ಉಂಟಾಗಿದೆ. ಅದರಲ್ಲೂ ರಾಗಿ ಮುದ್ದನಹಳ್ಳಿ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಯಿಂದ ಮನೆಗಳು ಬಿರುಕು ಬಿಟ್ಟಿದೆ. ಇನ್ನು ಅಂತ ರ್ಜಲಕ್ಕೂ ಸಮಸ್ಯೆಯಾಗಿದೆ. ಪ್ರಕೃತಿಯ ಸಾಲು, ಸಾಲು ಬೆಟ್ಟಗಳು ನಾಶಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳು ಘೋರ ಶಬ್ದ ಕೇಳುತ್ತಾ ಪಾಠ ಕೇಳಬೇ ಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು, ಬಾಣಂತಿಯರಿಗೂ ಗಣಿ ಸ್ಫೋಟದಿಂದ ಸಮಸ್ಯೆಯಾಗಿದೆ.

ಕೆಆರ್‍ಎಸ್‍ಗೆ ಭವಿಷ್ಯದಲ್ಲಿ ಸಮಸ್ಯೆ ಇಲ್ಲವಾ?: ಕೆಆರ್‍ಎಸ್ ಅಣೆಕಟ್ಟೆಗೆ ಸದ್ಯಕ್ಕೆ ಏನೂ ಸಮಸ್ಯೆ ಇಲ್ಲ ಜೊತೆಗೆ ಯಾವುದೇ ಬಿರುಕು ಸಹ ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಕೆಆರ್‍ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹೀಗೆ ಮುಂದುವರೆದರೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿ ಗಳು ಎಲ್ಲಿಯೂ ಹೇಳಿಲ್ಲ. ಇದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಕೆಆರ್‍ಎಸ್ ಭಾಗದಲ್ಲಿ ಗಣಿಗಾರಿಕೆಯನ್ನು ನಿಷೇಧಗೊಳಿಸಿ ಎಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಅಣೆಕಟ್ಟೆ ಭಾಗದಲ್ಲಿ ಗಣಿಗಾರಿಕೆ ನಡೆದರೆ ಸಮಸ್ಯೆಯಾಗಲಿದೆ ಎಂಬ ವರದಿ ನೀಡಿತ್ತು. ಇದಾದ ಬಳಿಕ ಆ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಒತ್ತಡ ಹೆಚ್ಚಾಯಿತು. ಆದರೆ ಗಣಿಗಾರಿಕೆ ಸ್ಥಗಿತಗೊಳಿಸಿದರೆ ಕೆಲವು ದಿನಗಳಲ್ಲಿ ಮತ್ತೆ ಕ್ರಷರ್‍ಗಳು ತೆರೆದುಕೊಳ್ಳುತ್ತಿವೆ.

ಆಧುನಿಕ ಗಣಿಗಾರಿಕೆಗೆ ಬೇಡ ಕೂಲಿ ಕಾರ್ಮಿಕರು: ಗಣಿಗಾರಿಕೆಯಿಂದ ಸಾವಿರಾರು ಕೂಲಿ ಕಾರ್ಮಿ ಕರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ ಎಂದು ಗಣಿ ಮಾಲೀಕರು ಬೊಬ್ಬೆ ಹಾಕುತ್ತಿದ್ದಾರೆ. ಅದರೆ ವಾಸ್ತವವಾಗಿ ಆಧುನೀಕರಣವಾಗುತ್ತಿರುವಂತೆ ಉಳಿ, ಸುತ್ತಿಗೆಯಲ್ಲಿ ಆರಂಭವಾದ ಗಣಿಗಾರಿಕೆ ಇಂದು ಸ್ಫೋಟಕಗಳ ಬಳಕೆಯಿಂದ ನಡೆಯು ತ್ತಿದೆ. ಈ ಹಿಂದೆ ಉಳಿ, ಸುತ್ತಿಗೆ ಮೂಲಕ ಗಣಿಗಾ ರಿಕೆ ನಡೆಸುವಾಗ ಗಣಿ ಮಾಲೀಕರು ಹೇಳುವಂತೆ ಸಾವಿರಾರು ಮಂದಿ ಕೂಲಿ ಕಾರ್ಮಿಕರ ಅವಶ್ಯಕತೆ ಇತ್ತು. ಆದರೆ ಇದೀಗ ರಿಗ್ ಬೋರ್ ಸ್ಫೋಟಕ ಬಳಕೆಯಾದ ಪರಿಣಾಮ ಕಾರ್ಮಿಕರ ಸಂಖ್ಯೆ ಕ್ಷೀಣವಾಗಿದೆ. ಜೊತೆಗೆ ಕಾರ್ಮಿಕರು ಇದ್ದರೂ ಸ್ಥಳೀಯರು ಯಾರೂ ಇಲ್ಲಿ ಕೆಲಸ ನಿರ್ವಹಿಸು ತ್ತಿಲ್ಲ. ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಹೀಗೆ ನಮ್ಮ ರಾಜ್ಯದವರೇ ಅಲ್ಲದ ಕಾರ್ಮಿಕರು ಬೆರಳಣಿಕೆ ಮಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಜೊತೆಗೆ ಗಣಿಗಾರಿಕೆಗೆ ಟ್ರಾಕ್ಟರ್, ಟಿಪ್ಪರ್, ಲಾರಿ ಗಳು, ಜೆಸಿಬಿಗಳನ್ನು ಬಳಕೆ ಮಾಡಲಾಗುತ್ತದೆಯೇ ಹೊರತು ಕಾರ್ಮಿಕರನ್ನಲ್ಲ.

ರಿಗ್ ಬೋರ್ ಬ್ಲಾಸ್ಟ್‍ನಿಂದ ಸಮಸ್ಯೆ: ಇದೀಗ ಗಣಿಗಾರಿಕೆಯ ಬ್ಲಾಸ್ಟಿಂಗ್ ಪದ್ಧತಿಯಿಂದ ಸಮಸ್ಯೆ ಯುಂಟಾಗಿದೆ. ಬೃಹತ್ ಬಂಡೆಗಳನ್ನು ಸಿಡಿಸಿ ಬೋಡ್ರಸ್, ಜಲ್ಲಿ, ಎಂಸ್ಯಾಂಡ್ ತಯಾರಿಸಲು ರಿಗ್ ಬೋರ್ ಬ್ಲಾಸ್ಟ್ ಮೂಲಕ ಸುಮಾರು 50 ಅಡಿ ಆಳದವರೆಗೆ ಸ್ಫೋಟಕಗಳನ್ನು ಮಾಡಲಾಗು ತ್ತಿದೆ. ಇದರಿಂದ ಮನೆಗಳು ಬಿರುಕು ಬಿಡುವುದು, ಬೃಹತ್ ಶಬ್ದಗಳಿಂದ ಮಕ್ಕಳು, ಮಹಿಳೆಯರು ಹೆದರುವುದು ಹೆಚ್ಚಾದ ಬಳಿಕ ಇದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿತಾದರೂ ಮೆಗ್ಗರ್ ಬ್ಲಾಸ್ಟಿಂಗ್ ಮೂಲಕ ಗಣಿಗಾರಿಕೆ ತೀವ್ರಗೊಂಡಿತು. ಗಣಿ ಮಾಲೀಕರು ಮಾತ್ರ ಮಂಡ್ಯ ಜಿಲ್ಲೆಯಲ್ಲಿ ಎಲ್ಲೂ ಸಹ ರಿಗ್ ಬೋರ್ ಬ್ಲಾಸ್ಟಿಂಗ್ ನಡೆಸುತ್ತಿಲ್ಲ. ಬದ ಲಾಗಿ ಮೆಗ್ಗರ್ ಬ್ಲಾಸ್ಟಿಂಗ್ ಮೂಲಕ ಗಣಿಗಾರಿಕೆ ನಡೆಸುತ್ತೇವೆ ಎಂದು ಹೇಳುತ್ತರಾದರೂ ಮಂಡ್ಯ ಜಿಲ್ಲೆಯ ಕೆಲವು ಕಡೆ ಈಗಲೂ ಸಹ ರಿಗ್ ಬೋರ್ ಬ್ಲಾಸ್ಟ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ರಾಜಧನ ವಸೂಲಿ ಯಾವಾಗ: ಈಗಾಗಲೇ ಹೇಳಿ ದಂತೆ ಗಣಿಗಾರಿಕೆ ಹೆಸರಲ್ಲಿ ಸರ್ಕಾರಿ ಜಾಗ ಒತ್ತು ವರಿ ಮಾಡಿಕೊಂಡು ಹತ್ತಾರು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿದ್ದು, ಸರ್ಕಾರಕ್ಕೆ ಅನೇಕ ಗಣಿ ಮಾಲೀಕರು ರಾಜಧನ ವಂಚಿಸಿ ದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ರಾಜಧನ ವಂಚಿಸಿರುವವರಿಂದ ಹಣ ವಸೂಲಿ ಮಾಡಿ, ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕ ಬೇಕಿದೆ ಎಂದು ಒತ್ತಾಯಿಸಲಾಗುತ್ತಿದೆ.

ಗಣಿ ಹೋರಾಟದಲ್ಲಿ ಯಶಸ್ವಿಯಾಗುತ್ತಾರಾ ಸಂಸದರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ, ಕೆಆರ್‍ಎಸ್ ಉಳಿಸು ತ್ತೇನೆಂದು ಪಣತೊಟ್ಟಿರುವ ಸಂಸದೆ ಸುಮಲತಾ ಅಂಬರೀಷ್ ಅಕ್ರಮ ಗಣಿಗಾರಿಕೆಯನ್ನು ಶಾಶ್ವತ ವಾಗಿ ಸ್ಥಗಿತಗೊಳಿಸಲು ಯಶಸ್ವಿಯಾಗುತ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ಇದೆ. ಇವೆಲ್ಲವನ್ನು ಮೆಟ್ಟಿ ಸುಮಲತಾ ಅಂಬರೀಷ್ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಬೇಕಿದೆ.

ಕೆಆರ್‍ಎಸ್ ಉಳಿಸಿ ಅಕ್ರಮ ಗಣಿಗಾರಿಕೆ ಸ್ಥಗಿತ ಗೊಳಿಸಿ ಅನ್ನೋ ಧ್ಯೇಯದಡಿ ಸುಮಲತಾ ಹೋರಾಟ ಆರಂಭಿಸಿದ್ದಾರೆ. ಅಕ್ರಮ ಗಣಿಗಾರಿಕೆ ಯನ್ನು ಮಂಡ್ಯ ಜಿಲ್ಲೆಯಿಂದ ಹೋಗಲಾಡಿಸಲು ಸಂಸದರು ಎಷ್ಟರ ಮಟ್ಟಿನ ಹೋರಾಟ ನಡೆಸು ತ್ತಾರೆ. ಅದರಲ್ಲಿ ಯಾವ ಮಟ್ಟಕ್ಕೆ ಯಶಸ್ವಿಯಾಗು ತ್ತಾರೆ ಅನ್ನೋದನ್ನು ಕಾಲವೇ ನಿರ್ಧರಿಸಲಿದೆ.

Translate »